ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FACT CHECK: ಅಸ್ಸಾಂನಲ್ಲಿ ಪೊಲೀಸರು ತರಕಾರಿ ವ್ಯಾಪಾರಿಗಳ ಮೇಲೆ ಹಿಂಸೆ ಎಸಗಿದರೇ?

Last Updated 25 ಮೇ 2021, 18:25 IST
ಅಕ್ಷರ ಗಾತ್ರ

ಅಸ್ಸಾಂನಲ್ಲಿ ಕಠಿಣ ಲಾಕ್‌ಡೌನ್ ಹೇರುವ ಭರದಲ್ಲಿ ಪೊಲೀಸರು ತರಕಾರಿ ವ್ಯಾಪಾರಿಗಳ ಮೇಲೆ ಹಿಂಸೆ ಎಸಗಿದ್ದಾರೆ ಎಂಬುದನ್ನು ಬಿಂಬಿಸುವ ಚಿತ್ರ ವೈರಲ್ ಆಗಿದೆ. ಪೊಲೀಸರ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಖಂಡನೆ ವ್ಯಕ್ತವಾಗಿದೆ. ‘ಪೊಲೀಸರಿಗೆ ರೈತರು ಬೆಳೆದ ಬೆಳೆಗಳ ಬೆಲೆ ತಿಳಿದಿಲ್ಲ. ಅವರು ಖಾಕಿ ಕಳಚಿಟ್ಟು ರೈತರ ರೀತಿ ಹೊಲಕ್ಕೆ ಇಳಿದು ದುಡಿದರೆ ಗೊತ್ತಾಗುತ್ತದೆ’ ಎಂದು ಟ್ವಿಟರ್‌ ಬಳಕೆದಾರರೊಬ್ಬರು ಬರೆದಿದ್ದಾರೆ.

ವೈರಲ್ ಆಗಿರುವ ಚಿತ್ರವನ್ನು ರಿವರ್ಸ್ ಇಮೇಜ್ ತಂತ್ರದ ಮೂಲಕ ಪರಿಶೀಲಿಸಿದಾಗ, ಅದು 2020ನೇ ಇಸ್ವಿಯಲ್ಲಿ ಸೆರೆಹಿಡಿದ ಚಿತ್ರ ಎಂಬುದು ಕಂಡುಬಂದಿದೆ. ಈ ಚಿತ್ರವು ಅಸ್ಸಾಂಗೆ ಸಂಬಂಧಿಸಿಲ್ಲ. ಇದು ಪಶ್ಚಿಮ ಬಂಗಾಳದ ಚಿತ್ರ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಖಚಿತಪಡಿಸಿದೆ. ಕೃಷಿ ಕಾಯ್ದೆಗಳನ್ನು ಖಂಡಿಸಿ ಪ್ರತಿಪಕ್ಷಗಳು ಹಾಗೂ ರೈತರು ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದಾಗ ಈ ಚಿತ್ರ ತೆಗೆಯಲಾಗಿತ್ತು ಎಂದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT