ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರಿಗೆ ಹಸಿವಿದ್ದರೂ 65 ಲಕ್ಷ ಟನ್ ಆಹಾರ ಧಾನ್ಯಗಳನ್ನು ಸರ್ಕಾರ ನಾಶಪಡಿಸಿತೇ?

Last Updated 8 ಜೂನ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

‘ಒಂದೆಡೆ ಲಾಕ್‌ಡೌನ್‌ನಿಂದಾಗಿ ಕೆಲಸ ಕಳೆದುಕೊಂಡು ಲಕ್ಷಾಂತರ ಕಾರ್ಮಿಕರು ಉಪವಾಸದಿಂದ ನರಳುತ್ತಿದ್ದಾರೆ. ಇನ್ನೊಂದೆಡೆ 2020ರ ಜನವರಿ– ಮೇ ತಿಂಗಳ ಅವಧಿಯಲ್ಲಿ ಸರ್ಕಾರವು 65 ಲಕ್ಷ ಟನ್‌ ಆಹಾರ ಧಾನ್ಯಗಳನ್ನು ನಾಶಪಡಿಸಿದೆ. ಉಪವಾಸದಿಂದ ನರಳುತ್ತಿದ್ದವರಿಗೆ ಆ ಧಾನ್ಯವನ್ನು ಹಂಚಿದ್ದರೆ ಆಗುತ್ತಿರಲಿಲ್ಲವೇ’ ಎಂದು ಮಾಧ್ಯಮ ಸಂಸ್ಥೆಯೊಂದು ಪ್ರಕಟಿಸಿದ್ದ ಲೇಖನದ ಲಿಂಕ್‌ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿದೆ. ಭಾರತೀಯ ಆಹಾರ ನಿಗಮದ ವಿರುದ್ಧ ಸಾರ್ವಜನಿಕರ ಆಕ್ರೋಶ ತಿರುಗಲೂ ಈ ವರದಿ ಕಾರಣವಾಗಿದೆ.

‘ಭಾರತೀಯ ಆಹಾರ ನಿಗಮವು ಇಷ್ಟೊಂದು ಪ್ರಮಾಣದ ಧಾನ್ಯವನ್ನು ಎಂದಿಗೂ ನಾಶಗೊಳಿಸಿಲ್ಲ. ವರದಿಯು ಆಧಾರರಹಿತ ಮತ್ತು ತಪ್ಪು ಮಾಹಿತಿಗಳಿಂದ ಕೂಡಿದೆ. ವರದಿಯಲ್ಲಿರುವ ಅಂಕಿ ಅಂಶವು ಭಾರತೀಯ ಆಹಾರ ನಿಗಮದಲ್ಲಿ ಇರುವ ಸಂಗ್ರಹದ ಪ್ರಮಾಣವನ್ನು ಸೂಚಿಸುತ್ತದೆ. ಅದನ್ನೇ ಆಹಾರ ನಿಗಮದಿಂದ ನಾಶಪಡಿಸಲಾದ ಧಾನ್ಯಗಳ ಪ್ರಮಾಣ ಎಂದು ವರದಿಯಲ್ಲಿ ತೋರಿಸಲಾಗಿದೆ’ ಎಂದು ಪಿಐಬಿ ಹೇಳಿದೆ. ‘ವಾಸ್ತವದ ಬಗೆಗಿನ ಅಜ್ಞಾನ ಈ ವರದಿಯಲ್ಲಿ ವ್ಯಕ್ತವಾಗುತ್ತಿದೆ’ ಎಂದು ಕೇಂದ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಸಹ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT