ಬುರ್ಖಾಧಾರಿ ಹುಡುಗಿಯರು ಹಾಡೊಂದಕ್ಕೆ ಹುರುಪಿನಿಂದ ಹೆಜ್ಜೆ ಹಾಕಿದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಾಡಿನಲ್ಲಿ ‘ಜೈಶ್ರೀರಾಮ್’ ಎಂಬ ಉಲ್ಲೇಖ ಕೇಳಿಸುತ್ತದೆ. ಬುರ್ಖಾ ಧರಿಸಿರುವ ಹುಡುಗಿಯರ ಜತೆ ಕೆಂಪು ದಿರಿಸಿನಲ್ಲಿರುವ ಮಹಿಳೆಯೂ ನೃತ್ಯ ಮಾಡುವುದು ಕಾಣಿಸುತ್ತದೆ. ‘ಶಿಕ್ಷಕಿಯು ಖಟ್ಟರ್ ಹಿಂದೂ ಆಗಿದ್ದಾಗ ಮಾತ್ರ ಇದು ಸಾಧ್ಯ’ ಎಂದು ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ವಿಡಿಯೊ ಜೊತೆ ಉಲ್ಲೇಖಿಸಿದ್ದಾರೆ. ಆದರೆ ಇದು ತಿರುಚಲಾದ ವಿಡಿಯೊ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ತಿರುಚಿದ್ದು ಎಂದು ‘ಇಂಡಿಯಾಟುಡೇ’ ವರದಿ ಮಾಡಿದೆ. ಬಾಂಗ್ಲಾದೇಶದ ಢಾಕಾ ವಲಯದ ಮದರಿಪುರ ಬಾಲಕಿಯರ ಪ್ರೌಢಶಾಲೆಯ ವಾರ್ಷಿಕೋತ್ಸವದ ವೇಳೆ ಹುಡುಗಿಯರು ನೃತ್ಯ ಮಾಡಿದ ವಿಡಿಯೊ ಇದಾಗಿದೆ. ಆದರೆ ಮೂಲ ವಿಡಿಯೊದಲ್ಲಿ ‘ಅಮರ್ ಮೊಂಟಾ ಜೆ ಆಜ್ ಎಮೊಲೆಲೊ’ ಎಂಬ ಬಂಗಾಳಿ ಗೀತೆಯನ್ನು ಬಳಸಲಾಗಿದೆ. ಮೂಲ ವಿಡಿಯೊದ ಗೀತೆಯನ್ನು ಮ್ಯೂಟ್ ಮಾಡಿ, ಬೇರೊಂದು ಗೀತೆಯನ್ನು ಸೇರಿಸಿ ತಿರುಚಲಾಗಿದೆ ಎಂದು ವೆಬ್‌ಸೈಟ್ ವರದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.