ಬುಧವಾರ, ಸೆಪ್ಟೆಂಬರ್ 29, 2021
20 °C

Fact Check: ಕೋವಿಡ್‌ ಲಸಿಕೆಯ ಪರೀಕ್ಷಾರ್ಥ ಬಳಕೆಗೆ ಕೇಂದ್ರ ಅನುಮತಿ ನೀಡಿಲ್ಲವೇ?

ಫ್ಯಾಕ್ಟ್‌ಚೆಕ್‌ Updated:

ಅಕ್ಷರ ಗಾತ್ರ : | |

'ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಕಂಪನಿಯು ಮಕ್ಕಳಿಗೆ ನೀಡಲು ಅಭಿವೃದ್ಧಿಪಡಿಸುತ್ತಿರುವ ಕೋವಿಡ್‌ ಲಸಿಕೆಯ ಪರೀಕ್ಷಾರ್ಥ ಬಳಕೆಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ. ಈ ಲಸಿಕೆಯು ಮಕ್ಕಳಿಗೆ ಅಪಾಯಕಾರಿಯಾಗಿದೆ. ಮಕ್ಕಳ ಮೇಲೆ ತೀರಾ ಅಡ್ಡಪರಿಣಾಮ ಬೀರುವ ಕಾರಣದಿಂದ ಈ ಲಸಿಕೆಯನ್ನು ಮಕ್ಕಳ ಮೇಲೆ ಪ್ರಯೋಗ ನಡೆಸುವ ಸಲುವಾಗಿ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ' ಎಂಬ ವಿವರ ಇರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಖ್ಯವಾಹಿನಿಯ ಕೆಲವು ಸುದ್ದಿ ವಾಹಿನಿಗಳೂ ಇಂತಹದ್ದೇ ಅರ್ಥ ಬರುವ ತಲೆಬರಹದಲ್ಲಿ ಸುದ್ದಿ ಪ್ರಕಟಿಸಿವೆ.

ಇದು ಸುಳ್ಳು ಸುದ್ದಿ ಎಂದು ಪಿಐಬಿ ಫ್ಯಾಕ್ಟ್‌ಚೆಕ್ ಪ್ರಕಟಿಸಿದೆ. 'ಬಯೋಲಾಜಿಕಲ್ ಇ ಕಂಪನಿಯ ಕೋವಿಡ್‌ ಲಸಿಕೆಯ 3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಲಸಿಕೆಯ ಸುರಕ್ಷತೆ ಮತ್ತು ಪರಿಣಾಮದ ಬಗ್ಗೆ ಮತ್ತಷ್ಟು ದತ್ತಾಂಶ ನೀಡುವಂತೆ ಕೇಂದ್ರೀಯ ಔಷಧ ನಿಯಂತ್ರಕರು ಕಂಪನಿಗೆ ಸೂಚನೆ ನೀಡಿದ್ದಾರೆ. ಈ ದತ್ತಾಂಶಗಳನ್ನು ನೀಡಿದ ನಂತರ, ಲಸಿಕೆಯನ್ನು ಮಕ್ಕಳ ಮೇಲೆ ಪರೀಕ್ಷಾರ್ಥವಾಗಿ ಬಳಸಲು ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸರ್ಕಾರ ಹೇಳಿದೆ. ಈ ಸುದ್ದಿಗಳಲ್ಲಿ ಪ್ರಕಟವಾಗಿರುವಂತೆ ಈ ಲಸಿಕೆಯಿಂದ ಮಕ್ಕಳಿಗೆ ಅಪಾಯವಾಗುತ್ತದೆ ಎಂಬುದು ಸುಳ್ಳು ಸುದ್ದಿ ಮತ್ತು ಹಾದಿತಪ್ಪಿಸುವ ಮಾಹಿತಿ' ಎಂದು ಪಿಐಬಿ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು