ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check: ಔರಂಗಜೇಬನನ್ನು ತಮ್ಮ ಸಹೋದರ ಎಂದರೇ ಠಾಕ್ರೆ?

Last Updated 3 ಮಾರ್ಚ್ 2023, 14:32 IST
ಅಕ್ಷರ ಗಾತ್ರ

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮೊಘಲ್ ಚಕ್ರವರ್ತಿ ಔರಂಗಜೇಬ್ ಬಗ್ಗೆ ನೀಡಿದ್ದಾರೆ ಎನ್ನಲಾದ ಹೇಳಿಕೆಯು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ‘ಔರಂಗಜೇಬ್ ನನ್ನ ಸಹೋದರನಿದ್ದಂತೆ’ ಎಂದು ಠಾಕ್ರೆ ಹೇಳಿದ್ದಾರೆ ಎನ್ನಲಾಗುವ ವಿಡಿಯೊವನ್ನು ಜಾಲತಾಣ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಮೊಘಲ್ ದೊರೆಯನ್ನು ಬೆಂಬಲಿಸುತ್ತಿರುವ ಠಾಕ್ರೆ ಒಬ್ಬ ದ್ರೋಹಿ ಎಂದು ಶಾಸಕ ನಿತೇಶ್ ರಾಣೆ ಆರೋಪಿಸಿದ್ದಾರೆ. ಆದರೆ, ಠಾಕ್ರೆ ಹೇಳಿದ್ದು ‘ಔರಂಗಜೇಬ್’ ಎಂಬ ಹೆಸರಿನ ಯೋಧನ ಕುರಿತು.

ಫೆ.19ರಂದು ಮುಂಬೈನ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಠಾಕ್ರೆ ಅವರು, ಜಮ್ಮು ಕಾಶ್ಮೀರದಲ್ಲಿ ಹತ್ಯೆಗೀಡಾದ ಸೇನೆಯ ಯೋಧ ‘ಔರಂಗಜೇಬ್’ ದೇಶಕ್ಕಾಗಿ ಪ್ರಾಣ ನೀಡಿದ್ದ ಘಟನೆಯನ್ನು ವಿವರಿಸಿದ್ದರು. ‘2018ರಲ್ಲಿ ಔರಂಗಜೇಬ್ ಎಂಬ ಸೈನಿಕನನ್ನು ಅಪಹರಿಸಿದ್ದ ಉಗ್ರರು ಬಳಿಕ ಹತ್ಯೆ ಮಾಡಿದ್ದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ದ ಆತ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾನೆ ಎಂಬ ಕಾರಣಕ್ಕೆ ಆತನನ್ನು ನನ್ನ ಸಹೋದರ ಎನ್ನದಿರಲು ಆಗದು. ಆತ ಖಂಡಿತವಾಗಿ ನನ್ನ ಸಹೋದರನೇ’ ಎಂದು ಠಾಕ್ರೆ ಹೇಳಿದ್ದರು. ಆದರೆ ಠಾಕ್ರೆ ಅವರ ಭಾಷಣದ ವಿಡಿಯೊದ ಆಯ್ದ ಭಾಗವನ್ನು ಬಳಸಿಕೊಂಡು, ಅವರು ಮೊಘಲ್ ದೊರೆ ಔರಂಗಜೇಬ್ ಕುರಿತು ಈ ಮಾತು ಹೇಳಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ‘ದಿ ಕ್ವಿಂಟ್’ ಜಾಲತಾಣ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT