ಮಂಗಳವಾರ, ಜನವರಿ 18, 2022
22 °C

Fact check: ಉದ್ದೇಶಿತ ನೊಯಿಡಾ ವಿಮಾನ ನಿಲ್ದಾಣ ಬಿಂಬಿಸುವ ಚಿತ್ರ ಚೀನಾದ್ದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈರಲ್‌ ಆಗಿರುವ ವಿಮಾನ ನಿಲ್ದಾಣದ ನಕ್ಷೆಯ ಚಿತ್ರ

ನೊಯಿಡಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇದೇ 25ರಂದು ಶಂಕುಸ್ಥಾಪನೆ ನೆರವೇರಿಸಿದರು. 2024ಕ್ಕೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳ್ಳಲಿದ್ದು, 1 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದು ಸರ್ಕಾರ ಹೇಳಿದೆ. ವಿಮಾನ ನಿಲ್ದಾಣದ ಸ್ವರೂಪ ಹೇಗಿರಲಿದೆ ಎಂದು ಬಿಂಬಿಸುವ ಮಾದರಿಯ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಇದರಲ್ಲಿ ಅದ್ದೂರಿತನ ಮನೆಮಾಡಿದೆ. ಬೃಹತ್ ಜಾಗವನ್ನು ವಿಮಾನ ನಿಲ್ದಾಣ ಆವರಿಸಿಕೊಂಡಂತೆ ಚಿತ್ರದಲ್ಲಿ ತೋರುತ್ತದೆ. 

ವೈರಲ್ ಆಗಿರುವ ಚಿತ್ರವು ಚೀನಾದ ಡಾಕ್ಸಿಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ್ದು ಎಂದು ಇಂಡಿಯಾಟುಡೇ ವರದಿ ಮಾಡಿದೆ. ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ ಇದು ದೃಢಪಟ್ಟಿದೆ. ಉತ್ತರ ಪ್ರದೇಶ ಸರ್ಕಾರವು ಬಿಡುಗಡೆ ಮಾಡಿರುವ ಉದ್ದೇಶಿತ ವಿಮಾನ ನಿಲ್ದಾಣದ ಡಿಜಿಟಲ್ ನಕ್ಷೆಯ ವಿಡಿಯೊಗೂ ಈ ಚಿತ್ರಕ್ಕೂ ಹೋಲಿಕೆಯಾಗುವುದಿಲ್ಲ. ಡಾಕ್ಸಿಂಗ್ ನಿಲ್ದಾಣವು 6,620 ಎಕರೆಯಲ್ಲಿ ನಿರ್ಮಾಣವಾಗಿದೆ. ನೊಯಿಡಾ ನಿಲ್ದಾಣವು 1,300 ಎಕರೆಯಲ್ಲಿ ನಿರ್ಮಾಣವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು