ಶುಕ್ರವಾರ, ಮೇ 27, 2022
28 °C

ಫ್ಯಾಕ್ಟ್ ಚೆಕ್: ಗೀತೋಪದೇಶ ಸ್ಥಳದಲ್ಲಿ ಗೋರಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಿಯಾಣದ ಕುರುಕ್ಷೇತ್ರದ ದೇವಸ್ಥಾನವೊಂದರ ಪ್ರಾಂಗಣದಲ್ಲಿ ಮುಸ್ಲಿಮರ ಗೋರಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಗೀತೋಪದೇಶ ನಡೆದಿದ್ದ ಸ್ಥಳದಲ್ಲಿ ಈ ಗೋರಿ ನಿರ್ಮಾಣವಾಗಿದೆ ಎಂದು ಕೆಲವರು ಉಲ್ಲೇಖಿಸಿದ್ದಾರೆ. ಗೋರಿ ನಿರ್ಮಾಣದ ಹಿಂದೆ ದೇವಸ್ಥಾನವನ್ನು ಒತ್ತುವರಿ ಮಾಡುವ ಹುನ್ನಾರವಿದೆ ಎಂದು ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.

ವಿಡಿಯೊದಲ್ಲಿ ಉಲ್ಲೇಖಿಸಿರುವಂತೆ ಕುರುಕ್ಷೇತ್ರದಲ್ಲಿ ಗೀತೋಪದೇಶ ನಡೆದಿದ್ದ ಸ್ಥಳದಲ್ಲಿ ಇಸ್ಲಾಮ್‌ಗೆ ಸಂಬಂಧಿಸಿದ ಗೋರಿ ಪತ್ತೆಯಾಗಿಲ್ಲ ಎಂದು ಫ್ಯಾಕ್ಟ್ಲಿ ವೆಬ್‌ಸೈಟ್ ವರದಿ ಮಾಡಿದೆ. ಭೋಕ್ರಾ ಎಂಬ ಸ್ಥಳದಲ್ಲಿ ಗೋರಿ ಸ್ವರೂಪದ ನಿರ್ಮಾಣ ಕಂಡುಬಂದಿದೆ. ಬ್ರಾಹ್ಮಣರ ಕುಟುಂಬವೊಂದು ತಮ್ಮ ಪೂರ್ವಜರ ಸಮಾಧಿಗಳನ್ನು ಈ ಜಾಗದಲ್ಲಿ ನಿರ್ಮಿಸಿದೆ. ಇದನ್ನು ಅಧಿಕಾರಿಗಳು ಹಾಗೂ ಪೊಲೀಸರು ಖಚಿತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ಈ ಸಮಾಧಿಯ ಮೇಲೆ ಚಾದರ್‌ ಹೊದಿಸಿ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದು ದಾರಿತಪ್ಪಿಸುವ ವಿಡಿಯೊ ಎಂದು ವೆಬ್‌ಸೈಟ್ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು