ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FACT CHECK: ಬಳ್ಳಾರಿ ಸಮಾವೇಶದ ಜನಸ್ತೋಮ ಬಿಂಬಿಸುವ ಎರಡು ಚಿತ್ರಗಳು ನೈಜವೇ?

Last Updated 16 ಅಕ್ಟೋಬರ್ 2022, 22:45 IST
ಅಕ್ಷರ ಗಾತ್ರ

ಕಾಂಗ್ರೆಸ್‌ನ ‘ಭಾರತ್ ಜೋಡೊ ಯಾತ್ರೆ’ ಒಂದು ಸಾವಿರ ಕಿಲೋಮೀಟರ್ ಪೂರೈಸಿದ ಅಂಗವಾಗಿ 15ರಂದು ಬಳ್ಳಾರಿಯಲ್ಲಿ ಸಮಾವೇಶ ನಡೆಯಿತು. ಈ ಸಮಾವೇಶದಲ್ಲಿ ಭಾರಿಸಂಖ್ಯೆಯಲ್ಲಿ ಜನರು ಸೇರಿದ್ದರು.ಜನಸಾಗರವನ್ನು ಬಿಂಬಿಸುವ ಎರಡು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟ್ವಿಟರ್ ಖಾತೆಯಲ್ಲಿ ಒಂದು ಚಿತ್ರವನ್ನು ಹಂಚಿಕೊಳ್ಳಲಾಗಿದ್ದು, ‘ಜನರು ಸುನಾಮಿಯಂತೆ ಬಂದರು’ ಎಂದು ಹೇಳಲಾಗಿದೆ. ಭಾರಿ ಸಂಖ್ಯೆಯ ಜನರು ಸೇರಿರುವ ಮತ್ತೊಂದು ಚಿತ್ರವನ್ನುಫೇಸ್‌ಬುಕ್ ಖಾತೆಯಲ್ಲೂ ಪ್ರಕಟಿಸಲಾಗಿದೆ. ಆದರೆ, ಈ ಎರಡೂ ಚಿತ್ರಗಳು ಬಳ್ಳಾರಿಯ ಸಮಾವೇಶದ್ದು ಅಲ್ಲ.

ವೈರಲ್ ಆಗಿರುವ ಚಿತ್ರಗಳ ಪೈಕಿ ಒಂದು ಚಿತ್ರವು ನೈಜೀರಿಯಾದ್ದು. ಮತ್ತೊಂದು ಚಿತ್ರವು ತೆಲಂಗಾಣದ ಕಾಂಗ್ರೆಸ್ ಕಾರ್ಯಕ್ರಮದ್ದು ಎಂದು ‘ದಿ ಕ್ವಿಂಟ್’ ಜಾಲತಾಣ ಹೇಳಿದೆ. ನೈಜೀರಿಯಾದ ಚಿತ್ರವನ್ನು 2010ರಲ್ಲಿ ಸೆರೆಹಿಡಿಯಲಾಗಿದೆ. 2021ರ ಅಕ್ಟೋಬರ್ 13ರಂದು ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿ ನಿರುದ್ಯೋಗ ಸೈರನ್’ ಕಾರ್ಯಕ್ರಮದಲ್ಲಿ ಬೃಹತ್ ಸಂಖ್ಯೆಯ ಜನರು ಸೇರಿದ್ದರು. ಈ ಚಿತ್ರಗಳು ಬಳ್ಳಾರಿ ಸಮಾವೇಶದ ಚಿತ್ರಗಳು ಎಂಬುದಾಗಿ ತಪ್ಪಾಗಿ ಬಿಂಬಿಸಲಾಗಿದೆ ಎಂದು ಜಾಲತಾಣ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT