ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ಒಂದು ದೇಶ, ಒಂದು ನಗರ ಸಾಕಾರ. ಏನು ಹೇಳುತ್ತಿದೆ ಈ ಚಿತ್ರ?

Last Updated 29 ಸೆಪ್ಟೆಂಬರ್ 2021, 15:31 IST
ಅಕ್ಷರ ಗಾತ್ರ

ಸೆಪ್ಟೆಂಬರ್ 27ರಂದು ಸಂಯುಕ್ತ ಕಿಸಾನ್ ಮೋರ್ಚಾವು ಭಾರತ್ ಬಂದ್ ನಡೆಸಿತು. ಬಂದ್‌ಗೆ ವಿರೋಧ ವ್ಯಕ್ತಪಡಿಸಿರುವ ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮ ನಗರದಲ್ಲಿ ಬಂದ್‌ ನಡೆದಿಲ್ಲ ಎಂದು ಬಿಂಬಿಸಲು ಜನನಿಬಿಡ ರಸ್ತೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು, ದೆಹಲಿ, ಸೂರತ್, ಕೊಹಿಮಾ.. ಹೀಗೆ ಹಲವು ನಗರಗಳ ಜನ ಈ ಯತ್ನ ಮಾಡಿದ್ದಾರೆ. ಆದರೆ ಎಲ್ಲರೂ ಒಂದೇ ಚಿತ್ರವನ್ನು ಬಳಸಿರುವುದು ವಿಚಿತ್ರ. ಬಂದ್ ಪರವಾಗಿರುವವರು ಇದನ್ನು ಗೇಲಿ ಮಾಡಿದ್ದಾರೆ. ‘ಒಂದು ದೇಶ, ಒಂದು ನಗರ’ ಕಲ್ಪನೆ ಸಾಕಾರವಾಗಿದೆ ಎಂದು ಚುಚ್ಚಿದ್ದಾರೆ.

ಸಾಮಾಜಿಕ ಜಾಲತಾಣಲ್ಲಿ ವೈರಲ್ ಆಗಿರುವ ಚಿತ್ರವು ಬಿಹಾರದ ಪಟ್ನಾ ನಗರದ್ದು. 2016ರಲ್ಲಿ ‘ಪಟ್ನಾ ಬೀಟ್ಸ್’ ಎಂಬ ಸುದ್ದಿತಾಣವು ಮೊದಲಿಗೆ ಈ ಚಿತ್ರವನ್ನು ಪ್ರಕಟಿಸಿತ್ತು. ಪಟ್ನಾದಲ್ಲಿ ಸಮ–ಬೆಸ ವಾಹನ ಸಂಚಾರದ ಕುರಿತು ಪ್ರಕಟಿಸಿದ್ದ ಸುದ್ದಿಗೆ ಈ ಚಿತ್ರ ಬಳಸಿಕೊಂಡಿತ್ತು. ನಂತರ ಖಬರ್‌ ಇಂಡಿಯಾ, ದೈನಿಕ್‌ ಭಾಸ್ಕರ್ ಪತ್ರಿಕೆಗಳೂ ಪ್ರಕಟಿಸಿವೆ ಎಂದು ಲಾಜಿಕಲ್ ಇಂಡಿಯನ್‌ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದ್ದು, ಭಾರತ್‌ ಬಂದ್‌ಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT