ಶುಕ್ರವಾರ, ಜೂನ್ 5, 2020
27 °C

ಫ್ಯಾಕ್ಟ್‌ ಚೆಕ್‌ | ವಲಸೆ ಕಾರ್ಮಿಕರ ಕರೆದೊಯ್ದ ರೈಲು ಕಿಕ್ಕಿರಿದು ತುಂಬಿತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈನಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಕರೆದೊಯ್ದ ಶ್ರಮಿಕ ರೈಲು ಕಿಕ್ಕಿರಿದು ತುಂಬಿದ್ದು, ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿತ್ತು. ಅಂತರ ಕಾಯ್ದುಕೊಳ್ಳಲು ತಾಕೀತು ಮಾಡುವ ಸರ್ಕಾರವೇ ಇಂತಹ ಅವ್ಯವಸ್ಥೆಗೆ ಕಾರಣವಾಗಿತ್ತು ಎಂದು ದೂರಿದ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ರೈಲು ಕಿಕ್ಕಿರಿದು ತುಂಬಿದ ವಿಡಿಯೊವೊಂದನ್ನು ಅದರೊಟ್ಟಿಗೆ ಹಂಚಿಕೊಳ್ಳಲಾಗಿದೆ.

ಮುಂಬೈನಿಂದ ಪಶ್ಚಿಮ ಬಂಗಾಳಕ್ಕೆ ವಲಸೆ ಕಾರ್ಮಿಕರನ್ನು ಹೊತ್ತೊಯ್ದ ಎಲ್ಲ ಶ್ರಮಿಕ ರೈಲುಗಳಲ್ಲೂ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಪಾಲನೆ ಮಾಡಲಾಗಿದ್ದು, ಅಂತರ ಕಾಯ್ದುಕೊಂಡು ಎಷ್ಟು ಕಾರ್ಮಿಕರನ್ನು ಕರೆದೊಯ್ಯಲು ಸಾಧ್ಯವೋ ಅಷ್ಟೇ ಜನರನ್ನು ಪ್ರತಿ ರೈಲಿನಲ್ಲಿ ಕರೆದೊಯ್ಯಲಾಗಿದೆ. ಹೀಗಾಗಿ ಈ ಸುದ್ದಿ ಸಂಪೂರ್ಣ ಸುಳ್ಳು ಮಾಹಿತಿಯಿಂದ ಕೂಡಿದೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಕಿಕ್ಕಿರಿದು ತುಂಬಿದ ರೈಲಿನ ವಿಡಿಯೊ ಬಾಂಗ್ಲಾದೇಶದ್ದಾಗಿದ್ದು, 2018ರಲ್ಲಿ ಅದನ್ನು ಚಿತ್ರೀಕರಿಸಲಾಗಿದೆ ಎಂದು ಪಿಐಬಿ ಹೇಳಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು