ದೇಶದಲ್ಲಿ ದೇವಸ್ಥಾನಗಳಿಗೆ ಮಾತ್ರ ತೆರಿಗೆ ಇದೆ ಎಂಬುದಾಗಿ ಯೂಟ್ಯೂಬರ್ ಎಲ್ವಿಸ್ ಯಾದವ್ ಅವರು ಸೆ.26ರಂದು ಟ್ವೀಟ್ ಮಾಡಿದ್ದರು. ಇವರ ಟ್ವೀಟ್ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ಮಸೀದಿ, ಚರ್ಚ್‌ಗಳಿಗೆ ಏಕೆ ತೆರಿಗೆ ಇಲ್ಲ ಎಂದು ಹಲವರು ಪ್ರಶ್ನಿಸಿದ್ದಾರೆ. ಜಾತ್ಯತೀತ ದೇಶ ಎನಿಸಿಕೊಂಡಿರುವ ಭಾರತದಲ್ಲಿ ಎಲ್ಲರೂ ಧಾರ್ಮಿಕ ಸ್ವಾತಂತ್ರ್ಯ ಅನುಭವಿಸುತ್ತಿರುವಾಗ, ದೇವಸ್ಥಾನಗಳಿಗೆ ಮಾತ್ರ ಏಕೆ ಈ ನೀತಿ ಎಂದು ಹಲವರು ಪ್ರಶ್ನಿಸಿದ್ದಾರೆ.
2017ರಲ್ಲೇ ಬಿಜೆಪಿ ನಾಯಕ ಸುಬ್ರಮಣಿಯನ್‌ಸ್ವಾಮಿ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ಜಿಎಸ್‌ಟಿಯಿಂದ ಚರ್ಚ್‌ಗಳಿಗೆ ಏಕೆ ವಿನಾಯಿತಿ ಎಂದು ಪ್ರಶ್ನಿಸಿದ್ದರು. ಆದರೆ ಇದು ಸುಳ್ಳು ಮಾಹಿತಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿತ್ತು. ದೇವಸ್ಥಾನಗಳಿಗೆ ಮಾತ್ರ ಜಿಎಸ್‌ಟಿ ಎಂಬುದು ತಪ್ಪು ಮಾಹಿತಿ. ಧರ್ಮದ ಆಧಾರದಲ್ಲಿ ತೆರಿಗೆ ತಾರತಮ್ಯ ಇಲ್ಲ ಎಂದು ತಿಳಿಸಿತ್ತು. ಸರ್ಕಾರದ ನಿಯಮದಂತೆ ಟ್ರಸ್ಟ್ ಹೆಸರಿನಲ್ಲಿ ಜಿಎಸ್‌ಟಿ ಪ್ರಮಾಣಪತ್ರ ಪಡೆದಿದ್ದೇವೆ ಎಂದು ಅಹಮದಾಬಾದ್‌ನ ಸುನ್ನಿ ವಕ್ಫ್ ಮಂಡಳಿ ಅಧ್ಯಕ್ಷ ರಿಜ್ವಾನ್ ಖಾದ್ರಿ ಹೇಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.