ಮಂಗಳವಾರ, ಜನವರಿ 25, 2022
24 °C

ಫ್ಯಾಕ್ಟ್‌ ಚೆಕ್‌: ವೈರಲ್‌ ಆಗಿರುವ ವಿಡಿಯೊ ಅಮರಾವತಿಗೆ ಸಂಬಂಧಿಸಿದ್ದಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಸೀದಿಯ ಮುಂದೆ ದೊಡ್ಡ ಸಮೂಹವೊಂದು ಕೇಸರಿ ಧ್ವಜ ಬೀಸುತ್ತಾ ಜೈ ಶ್ರೀರಾಮ್‌ ಎಂಬ ಘೋಷಣೆ ಕೂಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಮುಸ್ಲಿಂ ಸಂಘಟನೆಗಳು ಆಯೋಜಿಸಿದ್ದ ರ‍್ಯಾಲಿ ವಿರೋಧಿಸಿ ಬಿಜೆಪಿ ಬಂದ್‌ಗೆ ಕರೆ ನೀಡಿತ್ತು. ವೈರಲ್‌ ಆಗಿರುವ ವಿಡಿಯೊ ಬಿಜೆಪಿ ನಡೆಸಿದ ಪ್ರತಿಭಟನೆಯದ್ದು ಎಂದು ಈ ವಿಡಿಯೊವನ್ನು ಬಿಂಬಿಸಲಾಗಿದೆ. ಪ್ರತಿಭಟನೆ ಬಳಿಕ ಅಮರಾವತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.

ಈ ವಿಡಿಯೊ ಕುರಿತು ಸುಳ್ಳು ಮಾಹಿತಿ ವೈರಲ್‌ ಆಗಿದೆ ಎಂದು ಲಾಜಿಕಲ್‌ ಇಂಡಿಯನ್‌ ವರದಿ ಮಾಡಿದೆ. 2019ರಲ್ಲಿ ಕರ್ನಾಟಕದ ಕಲಬುರಗಿಯಲ್ಲಿ ನಡೆದಿದ್ದ ರಾಮನವಮಿ ಮೆರವಣಿಗೆಯ ವಿಡಿಯೊ ಇದಾಗಿದೆ. 2019ರ ಏ.13ರಂದು ಈ ಕುರಿತು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್‌ ಮಾಡಿದೆ. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರಿಗೆ ಮುಸ್ಲಿಮರು ಪಾನಕ ಹಂಚಿರುವ ಕುರಿತೂ ಎಎನ್‌ಐ ಇದೇ ಟ್ವೀಟ್‌ನಲ್ಲಿ ಹೇಳಿದೆ. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು