ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact check: ಉದ್ದಿಮೆ ಆರಂಭಿಸಲು ಪಿಎಂ ಮುದ್ರಾ ಯೋಜನೆ ಅಡಿ ₹ 10 ಲಕ್ಷ ಸಾಲ?

Last Updated 24 ಮೇ 2022, 16:39 IST
ಅಕ್ಷರ ಗಾತ್ರ

‘ಯುವಜನರು ಉದ್ದಿಮೆ ಆರಂಭಿಸಲು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿ ₹ 10 ಲಕ್ಷದ ಸಾಲವನ್ನು ನೀಡಲಾಗುತ್ತಿದೆ. ದೇಶದ ಎಲ್ಲ ಯುವಕರಿಗೂ ಈ ಯೋಜನೆ ಅಡಿ ಸಾಲ ನೀಡಲಾಗುತ್ತದೆ. ಅರ್ಹರಿಗೆ ಈಗಾಗಲೇ ಸಾಲ ಮಂಜೂರಾಗಿದೆ. ಈ ಪೋಸ್ಟ್‌ನಲ್ಲಿ ಇರುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ, ಅರ್ಜಿ ಹಾಕಿ. ಜತೆಗೆ ಅರ್ಜಿ ಶುಲ್ಕ ಮತ್ತು ಪ್ರಕ್ರಿಯಾ ಶುಲ್ಕವಾಗಿ ₹4,500 ಅನ್ನು ಲಿಂಕ್‌ನಲ್ಲಿ ಸೂಚಿಸಿರುವ ಖಾತೆಗೆ ಜಮೆ ಮಾಡಿ. ಒಂದೇ ದಿನದಲ್ಲಿ ನಿಮ್ಮ ಖಾತೆಗೆ ₹ 10 ಲಕ್ಷ ಬರಲಿದೆ’ ಎಂಬ ವಿವರ ಇರುವ ಪೋಸ್ಟ್‌ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದೆ.

‘ಈ ಪೋಸ್ಟ್‌ನಲ್ಲಿ ಇರುವ ವಿವರ ಸುಳ್ಳು. ಇದೊಂದು ಸುಳ್ಳು ಸುದ್ದಿ’ ಎಂದು ಪಿಐಬಿ ಫ್ಯಾಕ್ಟ್‌ಚೆಕ್‌ ಪ್ರಕಟಿಸಿದೆ. ‘ಮುದ್ರಾ ಯೋಜನೆ ಅಡಿ ಯಾರಿಗೂ ಸಾಲವನ್ನು ಪೂರ್ವ ಮಂಜೂರು ಮಾಡಿರುವುದಿಲ್ಲ. ಇದಕ್ಕಾಗಿ ಅರ್ಜಿ ಶುಲ್ಕವಾಗಿ ₹4,500 ಸಂಗ್ರಹಿಸುತ್ತಿಲ್ಲ. ಈ ಲಿಂಕ್‌ನಲ್ಲಿರುವ ಖಾತೆಗೆ ಹಣ ಜಮೆ ಮಾಡಿ, ಹಣ ಕಳೆದುಕೊಳ್ಳಬೇಡಿ’ ಎಂದು ಪಿಐಬಿ ತನ್ನ ಫ್ಯಾಕ್ಟ್‌ಚೆಕ್‌ನಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT