ಶುಕ್ರವಾರ, ಜೂನ್ 5, 2020
27 °C

ಹಿಂದೂ ಧಾರ್ಮಿಕ ದತ್ತಿ ಇಲಾಖೆ: ಮಸೀದಿಗಳಿಗೆ ಉಚಿತ ಅಕ್ಕಿ ವಿತರಿಸುವುದು ಸುಳ್ಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಜ್ಯದ 2,985 ಮಸೀದಿಗಳಲ್ಲಿ 5,450 ಟನ್ ಉಚಿತ ಅಕ್ಕಿ ವಿತರಣೆ ಮಾಡುವ ಉದ್ದೇಶವಿದ್ದು, 47 ದೇವಸ್ಥಾನಗಳು ತಲಾ ₹10 ಕೋಟಿ ನೆರವು ನೀಡಬೇಕು‘. ಇಂತಹದೊಂದು ಸುತ್ತೋಲೆಯನ್ನು ತಮಿಳುನಾಡು ಸರ್ಕಾರ ಹೊರಡಿಸಿದೆ ಎಂದು ಒಪ್‌ ಇಂಡಿಯಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ವಿಷಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಲಪಂಥೀಯ ಸಂಘಟನೆಗಳು ಭಾರಿ ವಿರೋಧ ವ್ಯಕ್ತಪಡಿಸಿವೆ.  

ಹಿಂದೂ ಧಾರ್ಮಿಕ ದತ್ತಿ ಇಲಾಖೆ ಹೊರಡಿಸಿದ್ದ ಎರಡು ಸುತ್ತೋಲೆಗಳು ಈ ಗೊಂದಲಕ್ಕೆ ಕಾರಣ. ಕೋವಿಡ್‌ನ ಈ ಸಂಕಷ್ಟದ ಸಮಯದಲ್ಲಿ ದೇವಸ್ಥಾನಗಳು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ತಲಾ ₹10 ಕೋಟಿ ದೇಣಿಗೆ ನೀಡುವಂತೆ ಸುತ್ತೋಲೆ ಹೊರಡಿಸಿದ್ದು ನಿಜ. ಆದರೆ ಮಸೀದಿಗಳಿಗೆ ಉಚಿತ ಅಕ್ಕಿ ವಿತರಿಸಲು ಈ ನಿಧಿ ಬಳಸಲಾಗುತ್ತದೆ ಎಂದು ಅದರಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ರಂಜಾನ್ ಹಬ್ಬದ ಅಂಗವಾಗಿ ರಾಜ್ಯದ ಮಸೀದಿಗಳಿಗೆ ಉಚಿತ ಅಕ್ಕಿ ನೀಡುವ ಮತ್ತೊಂದು ಸುತ್ತೋಲೆಯನ್ನು ಸರ್ಕಾರ ಹೊರಡಿಸಿತ್ತು. ಸರ್ಕಾರದಿಂದ ಮಸೀದಿಗಳಿಗೆ ಉಚಿತವಾಗಿ ಅಕ್ಕಿ ವಿತರಿಸುವ ಪರಿಪಾಟ ಜಯಲಲಿತಾ ಅವರ ಕಾಲದಿಂದ ಇದೆ. ಸರ್ಕಾರ ಹೊರಡಿಸಿದ್ದ ಈ ಎರಡು ಪ್ರತ್ಯೇಕ ಸುತ್ತೋಲೆಗಳನ್ನು ಲಿಂಕ್ ಮಾಡಿದ್ದರಿಂದ ವಿವಾದ ಸೃಷ್ಟಿಯಾಗಿದೆ. ಈ ಎರಡೂ ಸುತ್ತೋಲೆಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಆಲ್ಟ್ ನ್ಯೂಸ್ ವರದಿ ಮಾಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು