ಮಂಗಳವಾರ, ಜೂನ್ 15, 2021
24 °C

ಇಸ್ರೇಲ್ ಯುದ್ಧವಿಮಾನಕ್ಕೆ ಭಾರತ ಮೂಲದ ಸೌಮ್ಯ ಸಂತೋಷ್‌ ಹೆಸರಿಟ್ಟಿರುವುದು ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷದಲ್ಲಿ ಭಾರತ ಮೂಲದ ನರ್ಸ್ ಸೇರಿ ನೂರಾರು ಮಂದಿ ಮೃತಪಟ್ಟಿದ್ದಾರೆ. ಮೃತ ಸೌಮ್ಯ ಸಂತೋಷ್‌ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ಇಸ್ರೇಲ್ ದೇಶವು ತನ್ನ ಸೇನೆಯಲ್ಲಿರುವ ಯುದ್ಧವಿಮಾನಕ್ಕೆ ಸೌಮ್ಯ ಅವರ ಹೆಸರು ಇಟ್ಟಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಮಾನದ ಮೇಲೆ ಸೌಮ್ಯ ಅವರ ಹೆಸರನ್ನು ಬರೆದಿರುವ ಚಿತ್ರ ವೈರಲ್ ಆಗಿದೆ.

ರಿವರ್ಸ್ ಇಮೇಜ್ ತಂತ್ರಜ್ಞಾನದ ಮೂಲಕ ಪರಿಶೀಲಿಸಿದಾಗ, ಚಿತ್ರವ‌ನ್ನು ತಿರುಚಿರುವುದು ಕಂಡುಬಂದಿದೆ ಎಂದು ಆಲ್ಟ್ ನ್ಯೂಸ್ ವರದಿಮಾಡಿದೆ. ವೈರಲ್ ಆಗಿರುವ ಚಿತ್ರದಲ್ಲಿ ವಿಮಾನದ ಮೇಲೆ ಸೌಮ್ಯ ಅವರ ಹೆಸರನ್ನು ಕೃತಕವಾಗಿ ಸೇರಿಸಲಾಗಿದೆ ಎಂಬುದು ಕಂಡುಬಂದಿದೆ. ಚಿತ್ರದಲ್ಲಿರುವುದು ಚೀನಾ ಸೇನೆಯ ಚಂಗ್ಡು ಜೆ10 ಯುದ್ಧವಿಮಾನ. ಮೂಲ ಚಿತ್ರವನ್ನು 2020ರಲ್ಲಿ ಚೀನಾದ ಟೆನ್‌ಸೆಂಟ್ ಹಾಗೂ ಡೆಡೆ ನ್ಯೂಸ್ ಪ್ರಕಟಿಸಿದ್ದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು