ಶುಕ್ರವಾರ, ಜೂನ್ 5, 2020
27 °C

ಫ್ಯಾಕ್ಟ್ ಚೆಕ್ | ಸಸ್ಯಾಹಾರಿಗಳಿಗೆ ಕೊರೊನಾ ಬಾಧಿಸುವುದಿಲ್ಲ ಎಂಬುದು ಸುಳ್ಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಸ್ಯಾಹಾರಿಗಳನ್ನು ಕೊರೊನಾ ಸೋಂಕು ಬಾಧಿಸುವುದಿಲ್ಲ. ಮನುಷ್ಯನ ದೇಹದಲ್ಲಿ ಪ್ರಾಣಿಗಳ ಕೊಬ್ಬಿನಾಂಶವಿದ್ದರೆ ಮಾತ್ರ ಅದು ಕ್ರಿಯಾಶೀಲವಾಗುತ್ತದೆ. ಎಲ್ಲಿಯವರೆಗೆ ಜನ ಮಾಂಸಾಹಾರವನ್ನು ಸೇವನೆ ಮಾಡುತ್ತಾರೋ ಅಲ್ಲಿಯವರೆಗೆ ಸೋಂಕಿನ ಅಪಾಯ ಇದ್ದದ್ದೇ ಎಂದು ವಿಶ್ವ ಆರೋಗ್ಯ ಸಂಸ್ಥೆಯೇ ಹೇಳಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮಾಂಸಾಹಾರ ಸೇವನೆಗೂ ಸೋಂಕಿಗೂ ಸಂಬಂಧವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಯಾವುದೇ ಹೇಳಿಕೆ ನೀಡಿಲ್ಲ. ಸಸ್ಯಾಹಾರಿಗಳು ಯಾರೂ ಸೋಂಕಿನಿಂದ ಬಾಧಿತರಾಗಿಲ್ಲ ಎಂಬ ಮಾಹಿತಿ ಕೂಡ ಸುಳ್ಳು. ಮಾಂಸಾಹಾರದಿಂದ ಸೋಂಕು ಹರಡುತ್ತದೆ ಎಂಬ ನಂಬಿಕೆಗೆ ಯಾವುದೇ ಆಧಾರವಿಲ್ಲ. ಅಂತಹ ಯಾವ ಅಧ್ಯಯನಗಳೂ ನಡೆದಿಲ್ಲ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು