ಶನಿವಾರ, ಸೆಪ್ಟೆಂಬರ್ 18, 2021
24 °C

Fact Check: ದೈನಿಕ್ ಭಾಸ್ಕರ್ ಪತ್ರಿಕೆಯ ಹೋರ್ಡಿಂಗ್‌ನಲ್ಲಿ ಬರೆದದ್ದು ಏನನ್ನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೈನಿಕ್ ಭಾಸ್ಕರ್ ಪತ್ರಿಕೆಯ ಕಚೇರಿ ಹಾಗೂ ಇತರ ಸ್ಥಳಗಳಲ್ಲಿ ಜುಲೈ 22ರಂದು ಆದಾಯ ತೆರಿಗೆ ಇಲಾಖೆ ಶೋಧ ನಡೆಸಿತ್ತು. ತೆರಿಗೆ ವಂಚನೆ ಆರೋಪದ ಮೇಲೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ಕೆಲ ದಿನಗಳಲ್ಲಿ ದೈನಿಕ್ ಭಾಸ್ಕರ್ ಪತ್ರಿಕೆಯದ್ದು ಎನ್ನಲಾದ ಹೋರ್ಡಿಂಗ್ ವೈರಲ್ ಆಗಿದೆ. ‘ಯಾವ ಮಹಾಂತನೂ ಅಲ್ಲ, ಸಂತನೂ ಇಲ್ಲ’ ಎಂಬುದಾಗಿ ಅದರಲ್ಲಿ ಉಲ್ಲೇಖವಾಗಿದೆ.  

ಹೋರ್ಡಿಂಗ್ ಇರುವ ಜಾಗ ಹಾಗೂ ಅದರ ಸತ್ಯಾಸತ್ಯತೆಯನ್ನು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ಪರಿಶೀಲಿಸಿದೆ. ದೈನಿಕ್ ಭಾಸ್ಕರ್ ಪತ್ರಿಕೆ ಇಂತಹ ಹೋರ್ಡಿಂಗ್ ಹಾಕಿಸಿಲ್ಲ. ರಿವರ್ಸ್ ಇಮೇಜ್ ಮೂಲಕ ಪರಿಶೀಲಿಸಿದಾಗ, ಆರ್‌ಎಸ್ಎಸ್‌, ಬಿಜೆಪಿ ಬೆಂಬಲಿಗ ಎಂದು ಹೇಳಿಕೊಂಡ ದೀಪಕ್ ಮದನ್ ಎಂಬುವರು 2020ರಲ್ಲಿ ಹಾಕಿಸಿದ್ದ ಹೋರ್ಡಿಂಗ್‌ ಅನ್ನು ತಿರುಚಲಾಗಿದೆ. ‘ದೇಶಕ್ಕೆ ಮೋದಿ, ದೆಹಲಿಗೆ ಕೇಜ್ರಿವಾಲ್’ ಎಂಬ ಬರಹ ಮೂಲ ಚಿತ್ರದಲ್ಲಿದೆ. ಇದನ್ನು ನ್ಯೂಸ್ ನೇಷನ್ ವರದಿ ಮಾಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು