ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Fact Check| ಮದರಸಾಗಳ ಬಗ್ಗೆ ಡಾ. ಅಬ್ದುಲ್ ಕಲಾಂ ಅವರು ಹೇಳಿದ್ದೇನು?

Last Updated 14 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಮದರಸಾಗಳು ಹಾಗೂ ಭಯೋತ್ಪಾದಕರ ಕುರಿತು ಹೇಳಿದ್ದಾರೆ ಎನ್ನಲಾದ ಹೇಳಿಕೆಯೊಂದರ ಪತ್ರಿಕಾ ತುಣುಕು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ. ‘ಮದರಸಾಗಳು ಉಗ್ರರ ತರಬೇತಿ ಕೇಂದ್ರಗಳು. ಹೀಗಾಗಿ ಅವುಗಳನ್ನು ನಿಷೇಧಿಸಬೇಕು’ ಎಂದು ಕಲಾಂ ಹೇಳಿದ್ದಾರೆ ಎಂದು ಈ ತುಣುಕಿನಲ್ಲಿ ಉಲ್ಲೇಖವಾಗಿದೆ. ನೂರಾರು ಜನರು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ಪತ್ರಿಕಾ ಸುದ್ದಿಯ ಕೀವರ್ಡ್‌ಗಳನ್ನು ಗೂಗಲ್‌ನಲ್ಲಿ ಶೋಧನೆ ನಡೆಸಿದಾಗ, ಈ ಸುದ್ದಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ತಿಳಿಸಿದೆ. ಒಂದು ವೇಳೆ ಕಲಾಂ ಅವರು ಮದರಸಾಗಳ ಕುರಿತು ಹೇಳಿಕೆ ನೀಡಿದ್ದರೆ ಅದು ಬಹುದೊಡ್ಡ ಸುದ್ದಿಯಾಗುತ್ತಿತ್ತು. ಈ ಮಾಹಿತಿ ಇರುವ 2014ರಲ್ಲಿ ಬರೆಯಲಾಗಿರುವ ಒಂದು ಬ್ಲಾಗ್‌ಪೋಸ್ಟ್ ಸಿಕ್ಕಿದೆ. ಅದರಲ್ಲಿ ಕಂಪ್ಯೂಟರ್ ಮತ್ತು ಖುರಾನ್ ಎಂಬ ತಲೆಬರಹದಲ್ಲಿ ಮದರಸಾಗಳ ಕುರಿತ ಉಲ್ಲೇಖವಿದೆ. ಇದನ್ನು ಕಲಾಂ ಅವರು ಹೇಳಿದ್ದಾರೆ ಎಂದು ತಿರುಚಲಾಗಿದೆ. ಕಲಾಂ ಅವರ ಸಂಬಂಧಿ ಶೇಕ್ ಸಲೀಮ್ ಅವರು ವೈರಲ್ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT