ಭಾನುವಾರ, ಜನವರಿ 17, 2021
26 °C

ಫ್ಯಾಕ್ಟ್‌ಚೆಕ್‌: ಯುಪಿಐ ಮೂಲಕ ಮಾಡುವ ಪಾವತಿ ಹೊಸವರ್ಷದಲ್ಲಿ ದುಬಾರಿಯಾಗಿದೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಯಾಕ್ಟ್‌ಚೆಕ್‌

ಯುಪಿಐ ಮೂಲಕ ಮಾಡುವ ಪಾವತಿ ಹೊಸವರ್ಷದಲ್ಲಿ ದುಬಾರಿಯಾಗಿದೆ. ಯುಪಿಐ ಪಾವತಿಗೆ ಹೆಚ್ಚುವರಿ ತೆರಿಗೆ ಕಟ್ಟಬೇಕಿದೆ ಎಂಬ ಸುದ್ದಿಯನ್ನು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಮರ್ ಉಜಾಲ ಪತ್ರಿಕೆಯ ವರದಿಯನ್ನೂ ಜನರು ಶೇರ್ ಮಾಡುತ್ತಿದ್ದಾರೆ.

ಯುಪಿಐಗೆ ಯಾವುದೇ ಹೆಚ್ಚುವರಿ ದರ ಇಲ್ಲ ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್, ಸಂಪೂರ್ಣ ಪರಿಶೀಲನೆ ಮಾಡಿ ಪ್ರಕಟಿಸಿದೆ. ಪತ್ರಿಕೆಯಲ್ಲಿ ಬಂದಿರುವ ವರದಿಯ ಕೊನೆಯಲ್ಲಿ ಇದ್ದ ಪ್ರಶ್ನಾರ್ಥಕ ಚಿಹ್ನೆಯನ್ನು ತೆಗೆದು, ತಿರುಚಿ ಹಂಚಿಕೊಳ್ಳಲಾಗುತ್ತಿದೆ. ಥರ್ಡ್ ಪಾರ್ಟಿ ಪೇಮೆಂಟ್ ಆ್ಯಪ್‌ಗಳ ಮೂಲಕ ಮಾಡುವ ಪಾವತಿಗೆ ತೆರಿಗೆ ಇಲ್ಲ ಎಂದು ಭಾರತೀಯ ರಾಷ್ಟ್ರೀಯ ಪಾವತಿ ಕಾರ್ಪೊರೇಷನ್ (ಎನ್‌ಪಿಸಿಐ) ಹೇಳಿದೆ. ಹೆಚ್ಚುವರಿ ತೆರಿಗೆ ವಿಚಾರ ಸುಳ್ಳು ಸುದ್ದಿ ಎಂದು ಟ್ವೀಟ್ ಮಾಡಿದೆ. ಪಿಐಬಿ ಕೂಡ ಇದೇ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು