ಗುರುವಾರ , ಜೂನ್ 4, 2020
27 °C

Fact Check: ಕಿಮ್‌ ಜಾಂಗ್‌ ಉನ್‌ ಅಂತಿಮ ದರ್ಶನದ ವಿಡಿಯೊ ಸತ್ಯಾಸತ್ಯತೆ ಏನು? 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರ ಕೊರಿಯಾದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಅಂತಿಮ ದರ್ಶನದ ವಿಡಿಯೊವೊಂದು ಜಾಗತಿಕವಾಗಿ ವೈರಲ್‌ ಆಗಿದೆ. 

ಕಿಮ್‌ ಜಾಂಗ್‌ ಉನ್‌ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ, ಅವರು ಶಸ್ತ್ರಚಿಕಿತ್ಸೆಗೆ ಒಳಗಾದರು ಎಂಬ ಸುದ್ದಿಗಳು ಹೊರ ಬೀಳುತ್ತಲೇ, ಕಿಮ್‌ ಅಂತ್ಯಕ್ರಿಯೆಯದ್ದು ಎನ್ನಲಾದ ವಿಡಿಯೊ ಕೂಡ ಸದ್ದು ಮಾಡುತ್ತಿದೆ. 

ಅಲ್ಲದೆ, ಕಿಮ್ ಜಾಂಗ್‌ ಉನ್‌ ಅವರ ಕಳೇಬರವನ್ನು  ಸಾರ್ವಜನಿಕ ದರ್ಶನಕ್ಕೆ ಇರಿಸಲಾದ ಫೋಟೋಗಳೂ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. 

ಸತ್ಯ ಏನು? 

ಸದ್ಯ ಜಗತ್ತಿನಲ್ಲಿ ವೈರಲ್‌ ಆಗಿರುವ ಕಿಮ್‌ ಜಾಂಗ್‌ ಉನ್‌ ಅಂತ್ಯಕ್ರಿಯೆಯದ್ದು ಎನ್ನಲಾದ ವಿಡಿಯೊ ಅವರದ್ದಲ್ಲ. ಬದಲಾಗಿ ಅವರ ತಂದೆ, ಕಿಮ್‌ ಜಾಂಗ್‌ ಇಲ್‌ ಅವರದ್ದು.

ವಿಚಿತ್ರವೆಂದರೆ, ಕಿಮ್‌ ಅಂತ್ಯಕ್ರಿಯೆಯ ಸನ್ನವೇಶ ಎನ್ನಲಾದ ವಿಡಿಯೊದ ಅಲ್ಲಲ್ಲಿ ಅವರೇ ಕಾಣಿಸಿಕೊಳ್ಳುತ್ತಾರೆ! 

2011ರಲ್ಲಿ ನಡೆದಿದ್ದ ಕಿಮ್‌ ಜಾಂಗ್‌ ಇಲ್‌ ಅವರ ಅಂತ್ಯಕ್ರಿಯೆಯ ವಿಡಿಯೊವನ್ನು ಅಂತರರಾಷ್ಟ್ರೀಯ ಸುದ್ದಿ ಸಂಸ್ಥೆ ‘ಎಪಿ’ ತನ್ನ ಯೂಟ್ಯೂಬ್‌ ಚಾನೆಲ್‌ಗೆ 2015ರಲ್ಲಿ ಅಪ್ಲೋಡ್‌ ಮಾಡಿದೆ. 

ಈಗ ವೈರಲ್‌ ಆಗಿರುವ ವಿಡಿಯೊದಲ್ಲಿ ಇರುವ ಕಳೇಬರವೂ ಕಿಮ್‌ ಜಾಂಗ್‌ ಉನ್‌ ತಂದೆ ಕಿಮ್‌ ಜಾಂಗ್‌ ಇಲ್‌ ಅವರದ್ದೇ ಎಂದು ಸತ್ಯಾನ್ವೇಷಣೆ ಮಾಡಿರುವ ಬೂಮ್‌ ಲೈವ್‌ ವೆಬ್‌ಸೈಟ್‌ ವರದಿ ಮಾಡಿದೆ. 

ಉತ್ತರ ಕೊರಿಯಾದ ನಾಯಕ ಕಿಮ್‌ ಹೃದಯರಕ್ತನಾಳದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ವರದಿಯಾದ ನಂತರ ಆರೋಗ್ಯ ಮತ್ತು ಸಾವಿನ ಕುರಿತು ಊಹಾಹಾಪೋಹಗಳೆದ್ದಿವೆ. ಉತ್ತರ ಕೊರಿಯಾದ ಸರ್ವಾಧಿಕಾರಿ ಏಪ್ರಿಲ್ 11 ರಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಏಪ್ರಿಲ್ 15 ರಂದು ತಮ್ಮ ತಾತ ಕಿಮ್‌ ಸೋಂಗ್‌ ಜನ್ಮಾಚರಣೆಗೂ ಅವರು ಗೈರುಹಾಜರಾಗಿದ್ದರು.

ದಕ್ಷಿಣ ಕೊರಿಯಾದ ಸರ್ಕಾರ ಮತ್ತು ಮಾಧ್ಯಮಗಳು ಕಿಮ್ ಜೊಂಗ್-ಉನ್ ಅವರ ಕುರಿತ ವದಂತಿಗಳನ್ನು ತಳ್ಳಿಹಾಕಿದೆ. ಆದರೆ ಅಮೆರಿಕವು ರಹಸ್ಯ ರಾಷ್ಟ್ರ ಉತ್ತರ ಕೊರಿಯಾದಿಂದ ಹೊರಬರುವ ವರದಿಗಳ ಮೇಲೆ ನಿಗಾ ಇಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು