ಫ್ಯಾಕ್ಟ್ ಚೆಕ್: ಲಂಡನ್ ಸೇತುವೆ ಬಳಿ ಹನುಮಾನ್ ಚಾಲೀಸಾ ಪಠಣ?

ಲಂಡನ್ ಸೇತುವೆ ಬಳಿ ಭಾರತೀಯರ ಗುಂಪೊಂದು ಹನುಮಾನ್ ಚಾಲೀಸಾ ಪಠಣ ಮಾಡುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಈಗ ನಡೆಯುತ್ತಿರುವ ಧ್ವನಿವರ್ಧಕ ವಿವಾದದ ಜೊತೆ ಈ ವಿಡಿಯೊವನ್ನು ತಳಕು ಹಾಕಲಾಗಿದೆ. ಲಂಡನ್‌ನಲ್ಲಿ ಹನುಮಾನ್ ಚಾಲೀಸಾ ಪಠಣ ಮಾಡಲಾಗಿದೆ. ಲಂಡನ್ ಮೇಯರ್ ಪಾಕಿಸ್ತಾನದ ಮೂಲದವರಾದರೂ ಹಿಂದೂಗಳು ಹುನುಮಾನ್ ಚಾಲೀಸಾ ಪಠಣ ಮಾಡುವುದನ್ನು ತಡೆದಿಲ್ಲ ಎಂಬ ವಿವರಣೆಯನ್ನು ವಿಡಿಯೊ ಜೊತೆ ನೀಡಲಾಗಿದೆ.
ಇದು ಇತ್ತೀಚಿನ ವಿಡಿಯೊವಲ್ಲ ಎಂದು ‘ದಿ ಕ್ವಿಂಟ್’ ವರದಿ ಮಾಡಿದೆ. ‘ಇಂಟರ್‌ನ್ಯಾಷನಲ್ ಸಿದ್ಧಾಶ್ರಮ ಶಕ್ತಿ ಸೆಂಟರ್’ ಎಂಬ ಧಾರ್ಮಿಕ ಸಂಸ್ಥೆ 2021ರ ಆಗಸ್ಟ್ 30ರಂದು ಲಂಡನ್ ಸೇತುವೆ ಬಳಿ ಕೃಷ್ಣ ಜನ್ಮಾಷ್ಟಮಿ ಆಚರಿಸಿತ್ತು. ಆ ವೇಳೆ ಭಾರತೀಯರು ಹನುಮಾನ್ ಚಾಲೀಸಾ ಪಠಣ ಮಾಡಿದ್ದರು ಮತ್ತು ಅಭಿಷೇಕವನ್ನು ನೆರವೇರಿಸಿದ್ದರು. ಕಾರ್ಯಕ್ರಮ ಆಯೋಜಿಸಿದ್ದ ಧಾರ್ಮಿಕ ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಈ ಕಾರ್ಯಕ್ರಮ ಕುರಿತ ಮಾಹಿತಿಯು ಪ್ರಕಟವಾಗಿದೆ ಎಂದು ದಿ ಕ್ವಿಂಟ್ ವಿವರಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.