ಸೋಮವಾರ, ಅಕ್ಟೋಬರ್ 3, 2022
23 °C
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್

Fact Check | ಮತ್ತೆ ಆರ್‌ಜೆಡಿ ಜೊತೆ ಸೇರುವುದಿಲ್ಲ ಎಂದರೇ ನಿತೀಶ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್‌ಡಿಎಯಿಂದ ಹೊರಬಂದು ಆರ್‌ಜೆಡಿ ಬೆಂಬಲದೊಂದಿಗೆ ಹೊಸ ಸರ್ಕಾರ ರಚಿಸಿದ್ದಾರೆ. ಇದೇ ವೇಳೆ, ನಿತೀಶ್ ಕುಮಾರ್ ಅವರು ವಿಧಾನಸಭೆಯಲ್ಲಿ ಭಾಷಣ ಮಾಡಿದ ವಿಡಿಯೊವೊಂದು ವೈರಲ್ ಆಗಿದೆ. ‘ಇನ್ನು ಮುಂದೆ ಬೆಂಬಲ ಪಡೆಯುವುದಿಲ್ಲ, ಇದೇ ಕೊನೆ. ಮುಂದೆ ಎಂದೂ ಇದು ಸಾಧ್ಯವಾಗುವುದಿಲ್ಲ’ ಎಂದು ನಿತೀಶ್ ಅವರು ವಿಡಿಯೊದಲ್ಲಿ ಹೇಳಿದ್ದಾರೆ. ಈ ವಿಡಿಯೊವನ್ನು ಷೇರ್ ಮಾಡಿರುವ ಬಿಜೆಪಿಯ ಹಲವು ಮುಖಂಡರು ಹಾಗೂ ಪತ್ರಕರ್ತರು, ನಿತೀಶ್ ಅವರು ಆರ್‌ಜೆಡಿಯನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

ವೈರಲ್ ಆಗಿರುವ ವಿಡಿಯೊ ಎಂಟು ವರ್ಷ ಹಳೆಯದು ಎಂದು ಆಲ್ಟ್ ನ್ಯೂಸ್ ಹಾಗೂ ಲಾಜಿಕಲ್ ಇಂಡಿಯನ್ ವೆಬ್‌ಸೈಟ್‌ಗಳು ಫ್ಯಾಕ್ಟ್ ಚೆಕ್ ಪ್ರಕಟಿಸಿವೆ. 2014ರ ಫೆಬ್ರುವರಿ 18ರಂದು ಪ್ರಕಟವಾದ ದೈನಿಕ ಭಾಸ್ಕರ್, ದೈನಿಕ ಜಾಗರಣ್ ಮೊದಲಾದ ಪತ್ರಿಕೆಗಳಲ್ಲಿ ನಿತೀಶ್ ಭಾಷಣದ ವರದಿಗಳಿವೆ. ನಿತೀಶ್ ಅವರು ಬಿಜೆಪಿಯನ್ನು ಕುರಿತು ಈ ಮಾತುಗಳನ್ನು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ನಿತೀಶ್ ಅವರು ಆರ್‌ಜೆಡಿ ಜತೆ ಮತ್ತೆ ಕೈಜೋಡಿಸುವುದಿಲ್ಲ ಎಂಬುದಾಗಿ ಹೇಳಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿದೆ ಎಂದು ವೆಬ್‌ಸೈಟ್‌ಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು