Fact Check: ಭಾರತ್ ಜೋಡೊ ಯಾತ್ರೆಯ ಮಧ್ಯೆ ರಾಹುಲ್ ಮದ್ಯ ಸೇವಿಸಿದರೇ?

‘ಭಾರತ್ ಜೋಡೊ’ ಯಾತ್ರೆಯ ವೇಳೆ ಹರಿಯಾಣದಲ್ಲಿ ರಾಹುಲ್ ಹೋಟೆಲ್‌ನಲ್ಲಿ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ. ರಾಹುಲ್ ಮುಂದಿರುವ ಮೇಜಿನ ಮೇಲೆ ಚಿಕನ್ ಹಾಗೂ ಮದ್ಯ ಇರುವುದು ಚಿತ್ರದಲ್ಲಿ ಕಾಣುತ್ತದೆ. ‘ತಪಸ್ಸಿನಲ್ಲಿ ಮಗ್ನರಾಗಿದ್ದಾರೆ’ ಎಂಬುದಾಗಿ ವ್ಯಂಗ್ಯ ಮಾಡಲಾಗಿದೆ. ಆದರೆ, ಈ ಚಿತ್ರವನ್ನು ತಿರುಚಲಾಗಿದೆ.
ರಾಹುಲ್ ಎದುರುಗಡೆ ದ್ರಾಕ್ಷಿ, ಗೋಡಂಬಿಯ ತಟ್ಟೆ ಹಾಗೂ ಚಹಾ ಕಪ್ ಇರುವ ಮೂಲ ಚಿತ್ರವನ್ನು ‘ಇಂಡಿಯಾಟುಡೇ’ ಪ್ರಕಟಿಸಿದೆ. ಮದ್ಯದ ಲೋಟ ಹಾಗೂ ಚಿಕನ್ ಚಿತ್ರಗಳನ್ನು ಸೇರಿಸಲಾಗಿದೆ ಎಂದು ವೆಬ್‌ಸೈಟ್ ವರದಿ ಮಾಡಿದೆ. ಅದೇ ದಿನ ರಾಹುಲ್ ಅವರನ್ನು ಭೇಟಿ ಮಾಡಿದ್ದ ಪತ್ರಕರ್ತ ಗುರುದೀಪ್ ವಾಲಿಯಾ, ಕಾಂಗ್ರೆಸ್ ನಾಯಕ ದ್ರಾಕ್ಷಿ, ಗೋಡಂಬಿ ತಿಂದರು ಎಂದು ಟ್ವೀಟ್ ಮಾಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.