ಸೋಮವಾರ, ಜನವರಿ 17, 2022
21 °C

ಹಿಂಬದಿಯಲ್ಲಿ ಪೊದೆ ಅಲ್ಲಾಡಿದಕ್ಕೆ ನಡೆಸಿದ ಗುಂಡಿನ ದಾಳಿಗೆ ಭಿಕ್ಷುಕ ಸತ್ತಿದ್ದನೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಪ್ಪಾದ ಮಾಹಿತಿ:

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು 1986ರಲ್ಲಿ ರಾಜ್‌ಘಾಟ್‌ಗೆ ಹೋಗಿದ್ದಾಗ ನಡೆದಿದ್ದ ಘಟನೆಯ ವಿಡಿಯೊ ಈಗ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ರಾಜೀವ್‌ ಗಾಂಧಿ ಅವರು ರಾಜ್‌ಘಾಟ್‌ಗೆ ತೆರಳಿದ್ದ ವೇಳೆ ಅವರ ಹಿಂಬದಿಯಲ್ಲಿದ್ದ ಪೊದೆ ಅಲುಗಾಡಿದ ಕಾರಣ ವಿಶೇಷ ರಕ್ಷಣಾ ದಳ(ಎಸ್‌ಪಿಜಿ) ಗುಂಡಿನ ದಾಳಿ ನಡೆಸಿತು. ಆ ದಾಳಿಯಲ್ಲಿ ಅಮಾಯಕ ಭಿಕ್ಷುಕನೊಬ್ಬ ಮೃತನಾದ ಎಂದು ಈ ವಿಡಿಯೊವನ್ನು ಬಿಂಬಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗಷ್ಟೇ ಪಂಜಾಬ್‌ಗೆ ತೆರಳಿದ್ದ ವೇಳೆ ಭದ್ರತಾ ವೈಫಲ್ಯ ಉಂಟಾಯಿತು ಎಂಬುದರ ಕುರಿತು ಚರ್ಚೆ ನಡೆಯುತ್ತಿರುವ ಕಾರಣ ಈ ವಿಡಿಯೊ ಹರಿಬಿಡಲಾಗಿದೆ. 

ಸರಿಯಾದ ಮಾಹಿತಿ: 

ರಾಜೀವ್‌ ಗಾಂಧಿ ಅವರು ರಾಜ್‌ಘಾಟ್‌ಗೆ ತೆರಳಿದ್ದ ವೇಳೆ, ರಾಜ್‌ಘಾಟ್‌ನ ಗೋಡೆಯೊಂದರ ಹಿಂದೆ ಅಡಗಿದ್ದ ವ್ಯಕ್ತಿ ರಾಜೀವ್‌ ಅವರತ್ತ ಗುಂಡಿನ ದಾಳಿ ನಡೆಸಿದ್ದ. ಎಸ್‌ಪಿಜಿ ಸಿಬ್ಬಂದಿ ಆತನನ್ನು ವಶಕ್ಕೆ ತೆಗೆದುಕೊಂಡರು. ಆ ವ್ಯಕ್ತಿಯನ್ನು ಕೊಂದಿಲ್ಲ. ಈ ವೇಳೆ ಯಾರೂ ಮೃತಪಟ್ಟಿರಲಿಲ್ಲ. ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ರಾಜೀವ್‌ ಗಾಂಧಿ ಅವರನ್ನು ಹತ್ಯೆಗೈಯುವ ಉದ್ದೇಶದಿಂದ ಆತ ದಾಳಿ ನಡೆಸಿದ್ದ. ಆತನ ಹೆಸರು ಕರಮ್‌ಜಿತ್‌ ಸಿಂಗ್‌ ಎಂದು ವಿಚಾರಣೆ ಬಳಿಕ ಎಸ್‌ಪಿಜಿ ಹೇಳಿತ್ತು. ಈ ಕುರಿತು ಇಂಡಿಯಾ ಟುಡೆ ಸೇರಿ ಅಂದಿನ ಹಲವು ಪತ್ರಿಕೆಗಳು ವರದಿ ಮಾಡಿದ್ದವು ಎಂದು ಆಲ್ಟ್‌ನ್ಯೂಸ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು