ಫ್ಯಾಕ್ಟ್‌ಚೆಕ್: ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ಪ್ರತ್ಯೇಕ ವಿದ್ಯುತ್ ದರ

ವಾಟ್ಸ್‌ಆ್ಯಪ್‌ನಲ್ಲಿ ಸಚಿತ್ರ ವಿವರಣೆಯೊಂದು ವೈರಲ್ ಆಗಿದೆ. ತಮಿಳುನಾಡಿನಲ್ಲಿ ಬೇರೆ ಬೇರೆ ಧರ್ಮಗಳ ಧಾರ್ಮಿಕ ಕೇಂದ್ರಗಳಿಗೆ ಪ್ರತ್ಯೇಕ ವಿದ್ಯುತ್ ದರ ವಿಧಿಸಲಾಗುತ್ತದೆ ಎಂದು ಆ ಚಿತ್ರದಲ್ಲಿ ಹೇಳಲಾಗಿದೆ. ‘ತಮಿಳುನಾಡಿನ ಧಾರ್ಮಿಕ ಕೇಂದ್ರಗಳ ವಿದ್ಯುತ್ ದರ’ ಎಂಬ ತಲೆಬರಹವನ್ನು ಈ ಚಿತ್ರದಲ್ಲಿ ನೀಡಲಾಗಿದೆ. ಹಿಂದೂ ದೇವಾಲಯಗಳು ಒಂದು ಯುನಿಟ್ ವಿದ್ಯುತ್‌ಗೆ ₹8 ನೀಡಬೇಕು. ಆದರೆ ಚರ್ಚ್ ಮತ್ತು ಮಸೀದಿಗಳು ಒಂದು ಯುನಿಟ್ ವಿದ್ಯುತ್‌ಗೆ ₹2.85 ನೀಡಬೇಕು ಎಂದು ಈ ಚಿತ್ರದಲ್ಲಿ ಬರೆಯಲಾಗಿದೆ.
ಈ ಮಾಹಿತಿ ಸುಳ್ಳು ಎಂದು ‘ದಿ ಲಾಜಿಕಲ್ ಇಂಡಿಯನ್’ ವೇದಿಕೆ ವರದಿ ಮಾಡಿದೆ. ಧರ್ಮದ ಆಧಾರವಾಗಿ ವಿದ್ಯುತ್ ದರವನ್ನು ತಮಿಳುನಾಡು ಸರ್ಕಾರ ನಿಗದಿಪಡಿಸಿಲ್ಲ. ವಿದ್ಯುತ್ ದರವನ್ನು 2017ರ ಆಗಸ್ಟ್‌ನಲ್ಲಿ ಕಡೆಯಬಾರಿಗೆ ಪರಿಷ್ಕೃತಗೊಳಿಸಲಾಗಿದೆ. ಪರಿಷ್ಕೃತ ಪಟ್ಟಿಯಲ್ಲಿ ಧರ್ಮದ ಆಧಾರದಲ್ಲಿ ದರ ನಿಗದಿ ಆಗಿಲ್ಲ. 2020ರಲ್ಲಿಯೂ ಇಂಥದ್ದೇ ವದಂತಿ ತಮಿಳುನಾಡಿನಲ್ಲಿ ಹಬ್ಬಿತ್ತು ಎಂದು ಕೆಲ ಫೇಸ್‌ಬುಕ್ ಪೋಸ್ಟ್‌ಗಳಿಂದ ತಿಳಿದುಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.