ಫ್ಯಾಕ್ಟ್‌ಚೆಕ್| ರೈಲ್ವೆ ಇಲಾಖೆ ಖಾಸಗೀಕರಣ ಎಂಬುದು ಸುಳ್ಳು

‘ಭಾರತೀಯ ರೈಲ್ವೆಯು ಸಂಪೂರ್ಣವಾಗಿ ಖಾಸಗೀಕರಣಕ್ಕೆ ಒಳಪಡಲಿದೆ. ದೊಡ್ಡ ಮಟ್ಟದ ಉದ್ಯೋಗ ನಷ್ಟ ಉಂಟಾಗಲಿದೆ. ರೈಲ್ವೆಗೆ ಸಂಬಂಧಿಸಿದ ಒಟ್ಟು 7 ಕಾರ್ಖಾನೆಗಳನ್ನು ವಿಲೀನಗೊಳಿಸಲಾಗುತ್ತಿದೆ. 3.5 ಲಕ್ಷ ಕಾಯಂ ನೌಕರರನ್ನು ತೆಗೆದುಹಾಕಿ, ಅವರ ಜಾಗದಲ್ಲಿ ಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳಲಾಗುತ್ತದೆ’ – ಈ ಒಕ್ಕಣೆ ಇರುವ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದೆ.
ರೈಲ್ವೆಯನ್ನು ಸಂಪೂರ್ಣವಾಗಿ ಮಾರಾಟ ಮಾಡುವ, ಉದ್ಯೋಗ ನಷ್ಟದ ಕುರಿತು ಹರಿದಾಡುತ್ತಿರುವ ಪೋಸ್ಟ್ ಸುಳ್ಳಿನ ಸರಮಾಲೆ ಎಂದು ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಸಂದೇಶದಲ್ಲಿರುವ ಮಾಹಿತಿಗಳು ದಾರಿ ತಪ್ಪಿಸುವ ರೀತಿಯಲ್ಲಿವೆ. ಕೆಲವು ಕಡೆ ಸರ್ಕಾರಿ–ಖಾಸಗಿ ಸಹಭಾಗಿತ್ವದಲ್ಲಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದರೂ, ಸಂಪೂರ್ಣ ನಿಯಂತ್ರಣ ಭಾರತೀಯ ರೈಲ್ವೆಯ ಬಳಿಯಲ್ಲೇ ಇದೆ ಎಂದು ಸ್ಪಷ್ಟನೆ ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.