ಬುಧವಾರ, ಜುಲೈ 6, 2022
22 °C

ಫ್ಯಾಕ್ಟ್‌ ಚೆಕ್‌: ಅನ್ಯಾಯ ಮಾಡಲು ಬಯಸುವವರ ಎಸ್‌ಪಿಗೆ ಮತ ನೀಡಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಫ್ಯಾಕ್ಟ್‌ ಚೆಕ್‌

ಉತ್ತರ ಪ್ರದೇಶ ವಿಧಾನಸಭೆಗೆ ಮೂರನೇ ಹಂತದ ಮತದಾನ ನಡೆಯುತ್ತಿರುವಂತೆಯೇ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್ ಅವರಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಎಸ್‌ಪಿಗೆ ಮತ ನೀಡಿ ಎಂದು ಅಪರಾಧಿಗಳಿಗೆ ಅಖಿಲೇಶ್‌ ಅವರು ಮನವಿ ಮಾಡುತ್ತಿರುವುದು ವಿಡಿಯೊದಲ್ಲಿ ಇದೆ. ‘ಯಾರು ಕಾನೂನನ್ನು ಕೈಗೆ ತೆಗೆದುಕೊಳ್ಳಲು ಬಯಸುತ್ತೀರಿ, ಆದರೆ ಕಾನೂನು ಪಾಲಿಸುವುದಿಲ್ಲ ಅಂಥವರು ಎಸ್‌ಪಿಗೆ ಮತ ನೀಡಿ. ಬಡವರಿಗೆ ಅನ್ಯಾಯ ಮಾಡಲು ಬಯಸುವವರು ಎಸ್‌ಪಿಗೆ ಮತ ನೀಡಿ’ ಎಂದು ಅಖಿಲೇಶ್‌ ಹೇಳಿರುವುದು ವಿಡಿಯೊದಲ್ಲಿ ಸೆರೆ ಆಗಿದೆ.

ವೈರಲ್‌ ಆಗಿರುವ ವಿಡಿಯೊ ತಿರುಚಲಾಗಿರುವ ವಿಡಿಯೊ ಎಂದು ದಿ ಲಾಜಿಕಲ್‌ ಇಂಡಿಯನ್‌ ವೇದಿಕೆ ವರದಿ ಮಾಡಿದೆ. ಈ ವಿಡಿಯೊ 2022ರ ಫೆ. 16ರಂದು ನ್ಯೂಸ್‌ 18 ಹಿಂದಿ ಸೇರಿ ಹಲವು ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿದೆ. ಔರೈಯಾ ಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿ ನಡೆಸಿದ್ದ ಅಖಿಲೇಶ್‌ ಅವರು, ‘ಯಾರು ಕಾನೂನನ್ನು ಕೈಗೆತ್ತಿಕೊಳ್ಳಲು ಬಯಸುತ್ತೀರಿ, ಆದರೆ ಕಾನೂನು ಪಾಲಿಸುವುದಿಲ್ಲ ಅಂಥವರು ಎಸ್‌ಪಿಗೆ ಮತ ನೀಡಬೇಡಿ. ಯಾರು ಬಡವರಿಗೆ ಅನ್ಯಾಯ ಮಾಡಲು ಬಯಸುತ್ತೀರಿ ಅಂಥವರು ಎಸ್‌ಪಿಗೆ ಮತ ನೀಡಬೇಡಿ’ ಎಂದಿದ್ದರು. ಇದೇ ರೀತಿಯ ಹೇಳಿಕೆಯನ್ನು ಅವರು ಫೆ.12 ರಂದು ಬರೇಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೂಡಾ ನೀಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು