ಬುಧವಾರ, ಜುಲೈ 15, 2020
22 °C

ಕೋವಿಡ್–19 ರೋಗಿಗಳನ್ನು ಆಸ್ಪತ್ರೆ ಹೊರಗಡೆ ಮಲಗಿಸಿದ್ದು ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆಸ್ಪತ್ರೆಯ ಹೊರಭಾಗದಲ್ಲಿ ಹಾಸಿಗೆಗಳು... ಅವುಗಳ ಮೇಲೆ ಮಲಗಿರುವ ರೋಗಿಗಳು... ಸುತ್ತ ನೆರೆದಿರುವ ಸಂಬಂಧಿಕರು.. ಇದು ಹೈದರಾಬಾದ್‌ನ ಉಸ್ಮಾನಿಯಾ ಆಸ್ಪತ್ರೆಯ ದೃಶ್ಯ ಎಂದೂ, ಮಹಾರಾಷ್ಟ್ರದ ಠಾಣೆ–ಭಿವಂಡಿಯ ದೃಶ್ಯ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕೋವಿಡ್–19 ರೋಗಿಗಳನ್ನು ಆಸ್ಪತ್ರೆ ಹೊರಗಡೆ ಮಲಗಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದು ಭಾರತದ ದೃಶ್ಯವಲ್ಲ. ಗೂಗಲ್‌ನ ರಿವರ್ಸ್ ಸರ್ಚ್ ಇಮೇಜ್ ಮೂಲಕ ಪರಿಶೀಲಿಸಿ, ಇದು ಪಾಕಿಸ್ತಾನದ ಸ್ಥಳವೊಂದರ ವಿಡಿಯೊ ಎಂಬ ವಿಷಯವನ್ನು ಆಲ್ಟ್ ನ್ಯೂಸ್ ಪತ್ತೆಹಚ್ಚಿದೆ. ಪಾಕ್‌ನ ಸಿಯಾಸತ್ ನ್ಯೂಸ್‌ ವೇದಿಕೆಯು ಜೂನ್ 15ರಂದು ಈ ವಿಡಿಯೊವನ್ನು ಪ್ರಸಾರಮಾಡಿದೆ. ಇದು ಲಾಹೋರ್‌ನ ಸರ್ವೀಸಸ್ ಆಸ್ಪತ್ರೆಯ ದೃಶ್ಯ. ಆಸ್ಪತ್ರೆಯ ಹೊರಗೆ ಮಲಗಿದ್ದವರು ಕೋವಿಡ್‌ ರೋಗಿಗಳಲ್ಲ. ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದರಿಂದ ರೋಗಿಗಳನ್ನು ಹೊರಗಡೆ ಕರೆತರಲಾಗಿತ್ತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು