ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಕ್ಟ್‌ಚೆಕ್‌: ನೈನಿತಾಲ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳ ನಿಜವೇ?

Last Updated 31 ಮೇ 2022, 2:31 IST
ಅಕ್ಷರ ಗಾತ್ರ

ಉತ್ತರಾಖಂಡದ ಪ್ರಮುಖ ಪ್ರವಾಸಿ ತಾಣ ನೈನಿತಾಲ್‌ನದ್ದು ಎನ್ನಲಾದ ಎರಡು ಚಿತ್ರಗಳ ಕೊಲಾಜ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಮೊದಲ ಚಿತ್ರವು ನೈನಿ ಸರೋವರಕ್ಕೆ ಹೊಂದಿಕೊಂಡಿರುವ ರಸ್ತೆಯದ್ದಾಗಿದೆ. ಈ ಚಿತ್ರಕ್ಕೆ ‘ನೈನಿತಾಲ್‌ 2010’ ಎಂಬ ಅಡಿಬರಹ ನೀಡಲಾಗಿದೆ. ಈ ಚಿತ್ರದಲ್ಲಿ ರಸ್ತೆ ಮೇಲೆ ಕಡಿಮೆ ಜನರಿದ್ದಾರೆ. ಎರಡನೇ ಚಿತ್ರಕ್ಕೆ ‘ನೈನಿತಾಲ್‌ 2022’ ಎಂದು ಅಡಿಬರಹ ನೀಡಲಾಗಿದೆ. ಇದು ಮುಸ್ಲಿಮರು ರಸ್ತೆ ಮೇಲೆ ನಮಾಜು ಮಾಡುತ್ತಿರುವ ಚಿತ್ರವಾಗಿದೆ. 12 ವರ್ಷಗಳಲ್ಲಿ ನೈನಿತಾಲ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂಬ ವಿವರವನ್ನು ಈ ಚಿತ್ರದ ಜೊತೆ ನೀಡಲಾಗಿದೆ.

ವೈರಲ್‌ ಆಗಿರುವ ಮಾಹಿತಿಯು ಸುಳ್ಳು ಎಂದು ‘ದಿ ಲಾಜಿಕಲ್‌ ಇಂಡಿಯನ್‌’ ವೇದಿಕೆ ವರದಿ ಮಾಡಿದೆ. ವೈರಲ್‌ ಆಗಿರುವ ಕೊಲಾಜ್‌ನಲ್ಲಿರುವ ಎರಡನೇ ಚಿತ್ರವು ಬಾಂಗ್ಲಾದೇಶದ ವಾರ್ಷಿಕ ‘ಬಿಸ್ವಾ ಇಜ್ತೆಮಾ’ ಆಚರಣೆಯ ಚಿತ್ರವಾಗಿದೆ. ಈ ಕುರಿತ ವರದಿಯು ಚಿತ್ರ ಸಮೇತ ‘ಅಲ್‌ ಜಝೀರಾ’ ವೆಬ್‌ಸೈಟ್‌ನಲ್ಲಿ 2018ರ ಜನವರಿಯಲ್ಲಿ ಪ್ರಕಟವಾಗಿದೆ. ಮೊದಲನೇ ಚಿತ್ರವು ನೈನಿತಾಲ್‌ನ ಉಪ್ಪರ್‌ ಮಾಲ್‌ ರೋಡ್‌ನದ್ದು. ಈ ಚಿತ್ರವನ್ನು 2019ರ ಜೂನ್‌ 16ರಂದು ‘ವಿಕಿಮೀಡಿಯ’ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಈ ಚಿತ್ರಗಳು ಒಂದೇ ಸ್ಥಳದ್ದಲ್ಲ ಎಂದು ದಿ ಲಾಜಿಕಲ್‌ ಇಂಡಿಯನ್‌ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT