ಫ್ಯಾಕ್ಟ್ ಚೆಕ್ | ಹಿಜಾಬ್ ವಿಚಾರ: ಬುರ್ಖಾ ತೆಗೆದಾಗ ಕಂಡವರು ಗಂಡಸರು!

ಬುರ್ಖಾಧಾರಿ ಯುವಕರನ್ನು ಪೊಲೀಸರು ಬಂಧಿಸಿರುವ ವಿಡಿಯೊವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಜಾಬ್ ಸಂಬಂಧಿ ಗಲಾಟೆಯ ಸಂಬಂಧ ಈ ಬಂಧನ ಆಗಿದೆ. ಕಲ್ಲು ತೂರಾಟದಲ್ಲಿ ತೊಡಗಿದ್ದವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು, ಬುರ್ಖಾ ತೆಗೆಯುವಂತೆ ಅವರಿಗೆ ಹೇಳಿದರು. ಬುರ್ಖಾ ತೆಗೆದಾಗ ಅವರು ಗಂಡಸರು ಎಂಬುದು ತಿಳಿಯಿತು ಎಂಬಂತೆ ವಿಡಿಯೊದಲ್ಲಿ ಬಿಂಬಿಸಲಾಗಿದೆ.
Terror male groups wearing Burka Hijab throwing stone's on police cought Red-Handedly at AP, Telangana and karnataka
One of many nuisances no for burqas.
😡😡😍👇 pic.twitter.com/PVzNbtu21z— ॐ Sumansoni (@SumanSonivds) February 19, 2022
ಈ ವಿಡಿಯೊ ಈಗಿನದ್ದಲ್ಲ ಎಂದು ದಿ ಲಾಜಿಕಲ್ ಇಂಡಿಯನ್ ವೇದಿಕೆ ವರದಿ ಮಾಡಿದೆ. ಈ ವಿಡಿಯೊ 2020ರ ಆಗಸ್ಟ್‌ನದ್ದು. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಬುರ್ಖಾ ಧರಿಸಿ ಮದ್ಯ ಕಳ್ಳಸಾಗಾಣೆ ಮಾಡುತ್ತಿದ್ದವರನ್ನು ಬಂಧಿಸಲಾಗಿತ್ತು. ಈ ವಿಡಿಯೊಗೂ ಸದ್ಯದ ಹಿಜಾಬ್ ವಿವಾದಕ್ಕೂ ಸಂಬಂಧವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೊ 2020ರ ಆ.8ರಂದು ಈಟಿವಿ ಭಾರತ್ ಸುದ್ದಿ ವಾಹಿನಿಯೊಂದರಲ್ಲಿ ಪ್ರಸಾರವಾಗಿತ್ತು. ಬಂಧಿತರು ತೆಲಂಗಾಣದಿಂದ ಆಂಧ್ರ ಪ್ರದೇಶಕ್ಕೆ ಅಕ್ರಮವಾಗಿ ಮದ್ಯ ರವಾನೆ ಮಾಡುತ್ತಿದ್ದರು ಎಂದು ಈಟಿವಿ ಭಾರತ್ ವರದಿಯಲ್ಲಿ ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.