ಫ್ಯಾಕ್ಟ್‌ಚೆಕ್: ಮತ ಚಲಾಯಿಸದವರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳ್ಳುವುದೇ?

ಚುನಾವಣೆಗಳಲ್ಲಿ ಮತದಾರರ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಸಂವಿಧಾನ ತಮಗೆ ನೀಡಿರುವ ಹಕ್ಕು ಚಲಾಯಿಸಲು ಯುವ ಜನರು ಹಿಂದೇಟು ಹಾಕುತ್ತಿರುವುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ.
2024ರಲ್ಲಿ ಜರುಗುವ ಲೋಕಸಭಾ ಚುನಾವಣೆಯಲ್ಲಿ ಮತ ಹಾಕದವರಿಗೆ ದಂಡದ ಶಿಕ್ಷೆ ಕಾದಿದೆ. ಮತ ಚಲಾಯಿಸದ ಪ್ರತಿ ಮತದಾರರ ಬ್ಯಾಂಕ್ ಖಾತೆಗಳಿಂದ ₹350 ಕಡಿತಗೊಳಿಸಲು ಚುನಾವಣಾ ಆಯೋಗ ನಿರ್ಧರಿಸಿದೆ ಎಂಬ ಅಂಶವು ಪತ್ರಿಕೆಯ ಸುದ್ದಿಯೊಂದರಲ್ಲಿ ಉಲ್ಲೇಖವಾಗಿದೆ.
ಮತದಾರರ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸುವ ವಿಷಯ ಸತ್ಯಕ್ಕೆ ದೂರ. ಚುನಾವಣಾ ಆಯೋಗವು ಇಂತಹ ನಿರ್ಧಾರವನ್ನು ಈವರೆಗೆ ತೆಗೆದುಕೊಂಡಿಲ್ಲ ಎಂದು ಪಿಐಬಿ ಫ್ಯಾಕ್ಟ್ ಚೆಕ್ ವೇದಿಕೆ ಸ್ಪಷ್ಟಪಡಿಸಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.