ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಾಸ್ಪಾದ: ಬೆಂಡೆ ಕುರ್‌ಕುರೆ

Published 25 ಮೇ 2024, 0:37 IST
Last Updated 25 ಮೇ 2024, 0:37 IST
ಅಕ್ಷರ ಗಾತ್ರ
ಬೆಂಡೆಕಾಯಿ ಪಲ್ಯ ಎಂದಾಕ್ಷಣ ಮೂಗು ಮುರಿಯುವವರಿಗೆ, ಅಮ್ಮಾ ಬೆಂಡೆಕಾಯಿ ಪಲ್ಯ ಇದ್ದರೆ ನಾ ಊಟ ಮಾಡಾಕ ಒಲ್ಲೆ ಎಂದು ಮೊಂಡುತನ ಮಾಡುವ ಮಕ್ಕಳಿಗೆ ಇಷ್ಟವಾಗುವ, ಇಳಿ ಸಂಜೆ ಹೊತ್ತಿಗೆ ಚಹಾದ ಜೊತೆ ಬಾಯಿ ಚಪ್ಪರಿಸಿಕೊಂಡು ತಿನ್ನಲೂ, ಮಳೆ, ಚಳಿಗಾಲಕ್ಕೂ ಬಾಯಿಗೆ ರುಚಿ ನೀಡುವ ಈ ಬೆಂಡೆಕಾಯಿ ಕುರುಕಲು ತಿನಿಸನ್ನು ಮನೆಯಲ್ಲಿ ನೀವು ಒಮ್ಮೆ ಮಾಡಿ ನೋಡಿ. ಮತ್ತೆ ಮತ್ತೆ ಬೇಕೆನ್ನಿಸುತ್ತದೆ. ಬನ್ನಿ ಬೆಂಡೆಕಾಯಿ ವಿವಿಧ ಕುರುಕಲು ತಿಂಡಿಗಳ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಡೆಕಾಯಿ ಪ್ರೈ:

ಬೇಕಾಗುವ ಸಾಮಗ್ರಿ: ಬೆಂಡೆಕಾಯಿ (ಅರ್ಧ ಕೆ.ಜಿ), ಎಣ್ಣೆ, ಪುಟಾಣಿ, ಕೆಂಪು ಕಾರದ ಪುಡಿ, ಸಕ್ಕರೆ ಪೌಡರ್‌, ಉಪ್ಪು, ತುರಿದ ಹಸಿ ಕೊಬ್ಬರಿ ಒಂದು ಕಪ್ಪ.

ಮಾಡುವ ವಿಧಾನ: ಮೊದಲು ಸ್ವಚ್ಛವಾಗಿ ಬೆಂಡೆಕಾಯಿಯನ್ನು ತೊಳೆದುಕೊಳ್ಳಬೇಕು. ಪಲ್ಯ ಮಾಡಲು ಹೆಚ್ಚಿಕೊಳ್ಳುವ ವಿಧಾನದಲ್ಲಿ ಬೆಂಡೆಕಾಯಿ ರೌಂಡಾಗಿ ಹೆಚ್ಚಿಕೊಳ್ಳಬೇಕು. ನಂತರ ಒಲೆ ಮೇಲೆ ಎಣ್ಣೆ ಕಾಯಲು ಇಡಬೇಕು. ಕಾಯ್ದ ಎಣ್ಣೆಗೆ ಹೆಚ್ಚಿದ ಬೆಂಡೆಕಾಯಿ ಹಾಕಿ ಕೆಂಪು ವರ್ಣಕ್ಕೆ ಬರುವ ಹಾಗೆ ಕರಿದುಕೊಳ್ಳಬೇಕು. ಸರಿಯಾಗಿ ಬೆಂದ ನಂತರ ಒಂದು ಬಾಣಲೆಗೆ ಹಾಕಿ ಅದಕ್ಕೆ ಉಪ್ಪು, ಪುಟಾಣಿಯಿಂದ ನುಣ್ಣಗೆ ಅಲ್ಲದ ಅಂದರೆ, ಪುಟಾಣಿ ಎರಡು ಸುತ್ತು ಮಿಕ್ಸಿ ಮಾಡಿಟ್ಟುಕೊಂಡ ಪೌಡರ್‌, ಕೆಂಪು ಕಾರದ ಪುಡಿ ಮತ್ತು ಮಿಕ್ಸಿ ಮಾಡಿಟ್ಟುಕೊಂಡ ಸಕ್ಕರೆ ಪೌಡರ್‌ ಹಾಕಿ ಮಿಶ್ರಣ ಮಾಡಬೇಕು. ನಂತರ ತುರಿದು ಇಟ್ಟುಕೊಂಡ ಟೆಂಗಿನಕಾಯಿ ತುರಿ ಹಾಕಿ ಮಿಶ್ರಣ ಮಾಡಬೇಕು.

ಬೆಂಡೆಕಾಯಿ ಪ್ರೈ
ಬೆಂಡೆಕಾಯಿ ಪ್ರೈ

ಬೆಂಡೆ ಕುರ್‌ಕುರೆ:

ಬೇಕಾಗುವ ಸಾಮಗ್ರಿಗಳು: ಬೆಂಡೆಕಾಯಿ (ಅರ್ಧ ಕೆಜಿ), ಎಣ್ಣೆ, ಒಂದು ಕಪ್ಪು ಕಡ್ಲೆ ಹಿಟ್ಟು, ಮುಕ್ಕಾಲು ಕಪ್ಪು ಅಕ್ಕಿ ಹಿಟ್ಟು, ಎರಡು ಟೆಬಲ್‌ ಸ್ಪೂನ್‌ ಜೋಳದ ಹಿಟ್ಟು, ಗರಂ ಮಸಾಲೆ (ಒಂದು ಸ್ಪೂನ್‌), ತಿನ್ನೊ ಸೋಡಾ, ಕೆಂಪು ಕಾರದ ಪುಡಿ, ಕಾಳು ಮೆಣಸು ಪೌಡರ್‌, ಉಪ್ಪು.

ಬೆಂಡೆ ಕುರ್‌ಕುರೆ
ಬೆಂಡೆ ಕುರ್‌ಕುರೆ

ಮಾಡುವ ವಿಧಾನ: ತೊಳೆದು ಇಟ್ಟುಕೊಂಡ ಬೆಂಡೆಕಾಯಿಯನ್ನು ಸಣ್ಣಗೆ ಉದ್ದಕ್ಕೆ ಹೆಚ್ಚಿಕೊಳ್ಳಬೇಕು(ಒಂದು ಬೆಂಡೆಕಾಯಿಯನ್ನು ನಾಲ್ಕು ಭಾಗ). ಹೆಚ್ಚಿಟ್ಟುಕೊಂಡ ಬೆಂಡೆಕಾಯಿಗೆ ಕಡ್ಲೆ ಹಿಟ್ಟು, ಅಕ್ಕಿ ಹಿಟ್ಟು, ಜೋಳದ ಹಿಟ್ಟು ಹಾಕಬೇಕು. ನಂತರ ಅಡುಗೆ ಸೋಡಾ, ಕರಿಮೆಣಸಿನಪುಡಿ, ಅಚ್ಚ ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನೀರು ಹಾಕದೆ ಮಿಶ್ರಣ ಮಾಡಬೇಕು. ಚೆನ್ನಾಗಿ ಮಸಾಲೆ ಪದಾರ್ಥಗಳು ಬೆಂಡೆಕಾಯಿಯೊಂದಿಗೆ ಮಿಶ್ರಣವಾದ ನಂತರ ಅವಶ್ಯಕತೆ ಇದ್ದರೆ ಮಾತ್ರ ನೀರು ಹಾಕಿ ಬೆರೆಸಬೇಕು. ನಂತರ ಒಲೆ ಮೇಲೆ ಒಂದು ಬಾಣಲೆಗೆ ಅಡುಗೆ ಎಣ್ಣೆ ಹಾಕಿ ಕಾಯಲು ಇಡಬೇಕು. ಎಣ್ಣೆ ಕಾಯ್ದ ನಂತರ ಮಿಶ್ರಣ ಮಾಡಿಟ್ಟುಕೊಂಡ ಬೆಂಡೆಕಾಯಿಯನ್ನು ಒಂದೊಂದೆ ಎಣ್ಣೆಗೆ ಹಾಕಿ ಕರೆದುಕೊಳ್ಳಬೇಕು. ಕೆಂಪು ವರ್ಣದಲ್ಲಿ ಬೆಂದನಂತರ ಒಂದು ತಟ್ಟೆಗೆ ತೆಗೆದುಕೊಳ್ಳಬೇಕು. ಬೆಂಡೆಕಾಯಿ ಕುರ್‌ಕುರೆ ತಿನ್ನಲು ಸಿದ್ಧವಾಗುತ್ತದೆ.

ಬೆಂಡೆ ಕುರ್‌ಕುರೆ
ಬೆಂಡೆ ಕುರ್‌ಕುರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT