ಡಿಸೆಂಬರ್ ತಿಂಗಳು ಬಂತೆಂದರೆ ಕ್ರಿಸ್ಮಸ್ ಹಬ್ಬದ ಸಂಭ್ರಮ ಮನೆ ಮಾಡುತ್ತದೆ. ಒಂದೆಡೆ ಹೊಸವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದರೆ, ಮತ್ತೊಂದೆಡೆ ಕ್ರಿಸ್ಮಸ್ನ ಸಡಗರ. ಇಂಥ ಶುಭ ಸಂದರ್ಭಗಳಲ್ಲಿ ಸಂಬಂಧಿಕರು, ಸ್ನೇಹಿತರ ಜತೆಗೂಡಿ ಖುಷಿಯಿಂದಿದ್ದು ಸಿಹಿ ತಿನ್ನುವುದೇ ಸೊಗಸು.

ಕ್ರಿಸ್ಮಸ್ ಸಂಭ್ರಮ ಹೆಚ್ಚಿಸುವಲ್ಲಿ ಸಿಹಿ ತಿನಿಸುಗಳು ಪಾತ್ರವೂ ದೊಡ್ಡದು. ಕ್ಯಾರಲ್ ತಂಡಗಳಿಗಾಗಿ ಹುರಿದ ಬಾದಾಮಿ ನೀಡುವುದೊಳಿತು. ಮಧುಮೇಹಿಗಳಿಗೆ ಬಾದಾಮಿ ಅತ್ಯುತ್ತಮ ಆಯ್ಕೆ ಎನ್ನುತ್ತಾರೆ ಪೌಷ್ಟಿಕ ತಜ್ಞೆ ಶೀಲಾ ಕೃಷ್ಣಸ್ವಾಮಿ.

ಹಲವರು ಆಪ್ತರಿಗೆ ಉಡುಗೊರೆಗಳನ್ನು ಕೊಡುವ ಪರಿಪಾಠವನ್ನೂ ಬೆಳೆಸಿಕೊಂಡಿರುತ್ತಾರೆ. ನಾವು ಕೊಡುವ ಉಡುಗೊರೆಯ ಸಿಹಿ ತಿನಿಸುಗಳು ಆರೋಗ್ಯಕರವಾಗಿದ್ದರೆ ಕೊಡುವವರಿಗೂ ಮನಸಿಗೆ ಸಮಾಧಾನ ಎನ್ನುತ್ತಾರೆ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಅವರ ತಾಯಿ ಡಾ.ಮಧು ಚೋಪ್ರಾ.

ಇಂಥ ಉಡುಗೊರೆ ನೀಡುವ ಸಂದರ್ಭಗಳಲ್ಲಿ ಬಾದಾಮಿಯ ತಿನಿಸುಗಳು ನನ್ನ ಮೊದಲ ಆಯ್ಕೆ ಎನ್ನುತ್ತಾರೆ ಅವರು. ಕ್ರಿಸ್ಮಸ್ ಸಂದರ್ಭದಲ್ಲಿ ಸ್ನೇಹಿತರಿಗೆ ಬಾದಾಮಿ, ಓಟ್ಮೀಲ್ ಕುಕೀಸ್ನಂಥ ಆರೋಗ್ಯಕರ ತಿನಿಸುಗಳನ್ನು ಉಡುಗೊರೆಯಾಗಿ ಕೊಡುವುದೊಳಿತು. ಆ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಉತ್ತಮ ಆರೋಗ್ಯದ ಉಡುಗೊರೆ ನೀಡಿದಂತಾಗುತ್ತದೆ ಅನ್ನುವುದು ಅವರ ಸಲಹೆ.

‘ಕ್ರಿಸ್ಮಸ್ಗೂ ಕೇಕ್ಗೂ ಬಿಡಿಸಲಾಗದ ಸಂಬಂಧ. ಇಂಥ ಸಂದರ್ಭದಲ್ಲಿ ಗ್ಲುಟನ್ ಮುಕ್ತ ಕೇಕ್ ಇದ್ದಲ್ಲಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಗ್ಲುಟನ್ ಮುಕ್ತ ಅಂದಾಕ್ಷಣ ಸುವಾಸನೆ ರಹಿತ ಕೇಕ್ ಎಂದು ಭಾವಿಸಬೇಕಿಲ್ಲ. ಅದರಲ್ಲಿ ತುಸು ಬಾದಾಮಿ ಬೆರೆಸಿದರೆ ಸಾಕು, ನಿಮ್ಮಿಷ್ಟದ ಕೇಕ್ ಅನ್ನು ಸವಿಯಬಹುದು’ ಎನ್ನುತ್ತಾರೆ ಪೌಷ್ಟಿಕ ತಜ್ಞೆ ರಿತಿಕಾ ಸಮದ್ದರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.