ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೂಟ ನೆನಪಿಸುವ ‘ಮೇನ್‌ ಕೋರ್ಸ್‌’

Last Updated 4 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಎಂ. ಜಿ. ರಸ್ತೆಗೆ ಹೊಂದಿಕೊಂಡಿರುವಚರ್ಚ್‌ಸ್ಟ್ರೀಟ್‌ ಇದೀಗ ಬಾರ್‌, ಹೋಟೆಲ್‌, ರೆಸ್ಟೋರೆಂಟ್‌ಗಳ ವರ್ಣರಂಜಿತ ತಾಣ. ಈ ರಸ್ತೆ ಹೊಸ ಸ್ವರೂಪ ತಾಳಿದ ನಂತರ ದಿನಕ್ಕೊಂದು ಹೊಸದಾದ ಹೋಟೆಲ್‌ ಕಾಣಿಸಿಕೊಳ್ಳುತ್ತಿವೆ.

ಇಟಾಲಿಯನ್, ಮೆಕ್ಸಿಕನ್‌, ಚೈನೀಸ್‌ ಹೋಟೆಲ್‌ಗಳ ಅಬ್ಬರ, ಆಡಂಬರಗಳ ನಡುವೆಯೇ ‘ಮೇನ್‌ ಕೋರ್ಸ್‌’ ಎಂಬಸೀದಾ ಮತ್ತು ಸಾದಾಹೋಟೆಲ್‌ ಪೈಪೋಟಿಗೆ ಇಳಿದಿದೆ. ಕಿಸೆಗೆ ಹೊರೆಯಾಗದ ಮತ್ತು ಮನೆಯ ಊಟದಷ್ಟೇ ರುಚಿ ಮತ್ತು ಶುಚಿಯಾದ ಸಸ್ಯಾಹಾರ ಮತ್ತು ಮಾಂಸಾಹಾರ ಇಲ್ಲಿಯ ವಿಶೇಷ. ಸುತ್ತಮುತ್ತ ಇಷ್ಟು ಕಡಿಮೆ ಬೆಲೆಯಲ್ಲಿ ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಮಾಂಸದ ಖಾದ್ಯಗಳು ದೊರೆಯುವುದು ಅಪರೂಪ.ನೂರರಿಂದ ನೂರೈವತ್ತು ರೂಪಾಯಿಗೆ ನಿಮಗಿಷ್ಟದ ರುಚಿಕರವಾದ ಚಿಕನ್‌, ಮಟನ್ ಅಥವಾ ಮೀನಿನ ಊಟ, ಬಿರಿಯಾನಿ ಸವಿಯಬಹುದು.

ಚಿಕನ್‌ ಆರ್ಡರ್‌ ಮಾಡಿದರೆ, ವೇಟರ್ ಟೇಬಲ್‌ ಮೇಲೆ ತಂದಿಟ್ಟಿದ್ದುಎಳನೀರು. ಅದರ ನೆತ್ತಿಯ ಮೇಲೆ ಪ್ಲಾಸ್ಟಿಕ್‌ ಕೊಳವೆ (ಸ್ಟ್ರಾ) ಬದಲು ಗುಬ್ಬಚ್ಚಿ ಗೂಡಿನಂತಹ ಬಣ್ಣರಹಿತ ಕಾಟನ್‌ ಕ್ಯಾಂಡಿ. ಕ್ಯಾಂಡಿ ತಿಂದು ಮುಗಿಸಿದ ಬಳಿಕ ಕೊಚ್ಚಿದ ಎಳನೀರಿನ ಮುಚ್ಚಳ ತೆಗೆದಾಗ ಒಳಗಡೆಯಿಂದ ಘಮ್ಮನೆಯ ವಾಸನೆ! ಒಳಗಡೆಯಿಂದ ಕೊಬ್ಬರಿಯ ಬದಲು ಹಸಿರು ಬಣ್ಣದ ಮೆತ್ತನೆ ಚಿಕನ್‌ ಚೂರುಗಳನ್ನು ತೆಗೆದು ಬಡಿಸಲಾಯಿತು. ಎಳೆಯ ಕೊಬ್ಬರಿಯಂತೆ ಮೆಲ್ಲಲುಮೃದುವಾಗಿದ್ದವು. ಇದು ಟೆಂಡರ್‌ ಕೋಕೋನಟ್‌ ಕಬಾಬ್. ಈ ಹೋಟೆಲ್‌ ವಿಶೇಷ.

ಅದಾದ ನಂತರ ಎಳನೀರು ಕಾಯಿಯಲ್ಲಿ ತಂದಿಟ್ಟ ಟೆಂಡರ್‌ ಹವಾಯಿ ಕಬಾಬ್‌ ಸ್ಪೈಸಿಯಾಗಿತ್ತು.ಕೆಂಪು ಒಣ ಮೆಣಸು, ಗರಂ ಮಸಾಲಾ, ಬೆಳ್ಳುಳ್ಳಿ ಮತ್ತು ಈರುಳ್ಳಿಗಳನ್ನು ಹದವಾಗಿ ಬೆರೆಸಿ, ಬೇಯಿಸಿದಚಿಕನ್‌ ಅದು. ಬೇಕರಿಯಲ್ಲಿ ಸಿಗುವ ಎಗ್‌ ಪಫ್‌ ರೀತಿಯ ವಸ್ತುವನ್ನು ಮೆಲ್ಲನೆ ಬಿಡಿಸಿದಾಗ ಒಳಗಡೆ ಬೇಯಿಸಿದಎಳೆಯ ಚಿಕನ್‌ ತುಂಡಿನ ಮೇಲೆ ಮೊಟ್ಟೆ ಲೇಪಿಸಲಾಗಿತ್ತು. ಹೆಚ್ಚು ಸ್ಪೈಸಿ ಆಗಿರುವ ಚಿಕನ್‌ ಲಾಲಿಪಪ್‌ ಮತ್ತು ಮಸಾಲೆ ರಹಿತ ಮೆದುವಾದ ರೇಶ್ಮಿ ಕಬಾಬ್‌, ಮಲೈ ಕಬಾಬ್‌ ಮಕ್ಕಳಿಗೆ ಇಷ್ಟವಾಗುತ್ತವೆ.

ಎಳನೀರು ಚಿಕನ್‌ ಸಾಮಾನ್ಯವಾಗಿ ಕೇರಳ ಮತ್ತು ಗೋವಾದಲ್ಲಿ ಪ್ರಸಿದ್ಧ. ಬೆಂಗಳೂರಿನಲ್ಲಿ ಸಿಗುವುದು ಅಪರೂಪ.ಇವೆಲ್ಲವೂ ‘ಮೇನ್‌ ಕೋರ್ಸ್‌’ನ ಸಿಗ್ನೇಚರ್‌ ಸ್ಟಾರ್ಟರ್‌ಗಳು. ಅಡುಗೆ ಮನೆಯ ಪ್ರಯೋಗದಲ್ಲಿಯೇ 17 ವರ್ಷ ಕಳೆದ ಜಾರ್ಖಂಡ್‌ನ ಮುಖ್ಯ ಬಾಣಸಿಗ ಮೊಹಮ್ಮದ್‌ ಶಹೀಮುದ್ದೀನ್‌ ಈ ಖಾದ್ಯಗಳನ್ನು ತಯಾರಿಸುವಲ್ಲಿ ನಿಸ್ಸೀಮ.

ಘಮಘಮಿಸುವ ಚಿಕನ್‌

ಹೊಗೆಯಾಡುತ್ತಿದ್ದಘಮಘಮಿಸುವಮುರ್ಗಾ ಲಾಬಡರ್‌, ಕಡಾಯಿ ಚಿಕನ್‌, ಬಟರ್‌ ಚಿಕನ್‌ ಮತ್ತು ಚಿಕನ್‌ ಹಾಜಿಮಹಲ್‌ ಮೇಲೆ ತೇಲುತ್ತಿದ್ದ ಬೆಣ್ಣೆಯ ಪರಿಮಳ ಸುತ್ತಲೂ ಹರಡಿತ್ತು. ಹದವಾದ ಮಸಾಲೆ ಜತೆ ಒಣದ್ರಾಕ್ಷಿ, ಗೋಡಂಬಿ ಮುಂತಾದ ಡ್ರೈ ಫ್ರೂಟ್ಸ್‌ಗಳನ್ನು ಬೆರೆಸಿದ್ದ ಚಿಕನ್‌ ಖಾದ್ಯಗಳನ್ನು ಮೃದುವಾದ ನಾನ್‌, ತಂದೂರಿ ರೊಟ್ಟಿಗಳ ಜತೆ ಸವಿದರೆ ರುಚಿ ದುಪ್ಪಟ್ಟಾಗುತ್ತದೆ.

ಬೆಣ್ಣೆ ಮತ್ತು ಕಸೂರಿ ಮೇಂತಿ ಹಾಕಿದ ಮುರ್ಘಾ ರಾಜಸ್ಥಾನಿ ಟಿಕ್ಕಾ, ಬೆಳ್ಳುಳ್ಳಿ ಒಗ್ಗರಣೆ ನಿಡಿದ ಲಸೋನಿ ಕೆಬಾಬ್‌ ಮತ್ತು ಹಸಿ ಮೆಣಸಿನಕಾಯಿ, ಬಡೇ ಸೋಂಪು ಮತ್ತು ಪುದೀನಾ ಪೇಸ್ಟ್‌ನಲ್ಲಿ ಅದ್ದಿದ ಸೂಫಿಯಾನಿ ಟಿಕ್ಕಾ, ಮೊಸರು ಮತ್ತು ಜೀರಿಗೆ ಪುಡಿಯಲ್ಲಿ ತಯಾರಿಸಿದ ತಂದೂರ್‌ ರೋಸ್ಟ್‌ ಜಲಪಡೇ ಜಿಂಗಾ ರುಚಿ ಬಹು ಬೇಗ ನೆನಪಿನಿಂದ ಮಾಸುವುದಿಲ್ಲ.

ಹೋಟೆಲ್‌ ಮ್ಯಾನೇಜರ್‌ಜೆ. ಫಿಲಿಪ್‌ ಸುರೇಶ್‌ಊಟದ ಕೊನೆಗೆ ಪುಟ್ಟ ಮಣ್ಣಿನ ಕುಡಿಕೆಯಲ್ಲಿ ‘ಮಟ್ಕಾಫಿರ‍್ನಿ’ ಎಂದು ಕರೆಯಲಾಗುವ ಸಿಹಿ ತಿನಿಸು ತಂದರು. ಚೆನ್ನಾಗಿ ರುಬ್ಬಿದಬಾಸುಮತಿ ಅಕ್ಕಿಯನ್ನು ಗೋಡಂಬಿ, ಬದಾಮಿ, ಕೋವಾ, ರವೆ, ಸಕ್ಕರೆ ಮಿಶ್ರಣದ ಜತೆ ಬೆರೆಸಿ ಕೆನೆಭರಿತ ಹಾಲಿನಲ್ಲಿ ಕುದಿಸಿ ತಯಾರಿಸಿದ ರಾಜಸ್ಥಾನಿ ಸಿಹಿ ತಿನಿಸು.

ಮೇನ್‌ ಕೋರ್ಸ್‌

ನಂ. 28, ಸಿಟಿ ಸೆಂಟರ್‌, ಟಾಟಾ ಚಾಯ್‌ ಪಕ್ಕ, ಚರ್ಚ್‌ ಸ್ಟ್ರೀಟ್‌

ಸಸ್ಯಾಹಾರಿ ಥಾಲಿ ₹80

ಮಾಂಸಹಾರಿ ಥಾಲಿ ₹100

ಬೆಳಿಗ್ಗೆ 11 ರಿಂದ 3.00 ಗಂಟೆ

ಸಂಪರ್ಕ ಸಂಖ್ಯೆ: 9066182140–ರಹಮತ್‌ ಉಲ್ಲಾ ಗಫೂರ್‌ / 8147591179 ಫಿಲಿಪ್‌ ಸುರೇಶ್‌ ಐಸಾಕ್‌

***

ಶುಚಿ ಮತ್ತು ರುಚಿಗೆ ನಮ್ಮ ಮೊದಲ ಆದ್ಯತೆ. ಆರೋಗ್ಯಕ್ಕೆ ಹಾನಿಕರವಾದ ಕಲಬೆರಕೆ ವಸ್ತುಗಳನ್ನು ಅಡುಗೆಗೆ ಬಳಸುವುದಿಲ್ಲ. ಶುದ್ಧ ಮತ್ತು ಆರೋಗ್ಯಕರವಾದ ಸಾಮಗ್ರಿಗಳನ್ನೇ ಬಳಸುತ್ತೇವೆ. ಅತ್ಯಂತ ಕಡಿಮೆ ಬೆಲೆಯಲ್ಲಿ ಮನೆಯೂಟದ ರುಚಿ ನೀಡುವುದು ನಮ್ಮ ಧ್ಯೇಯ ಎನ್ನುತ್ತಾರೆ ‘ಮೇನ್‌ ಕೋರ್ಸ್‌’ ಮಾಲೀಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT