ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಳಪಾಕ: ಟೇಸ್ಟಿ ಟೇಸ್ಟಿ ಚಿಕನ್‌ ಗೊಜ್ಜು

Last Updated 24 ಡಿಸೆಂಬರ್ 2022, 2:25 IST
ಅಕ್ಷರ ಗಾತ್ರ

ನಾನ್‌ವೆಜ್ ಪ್ರಿಯರಿಗೆ ಇಷ್ಟವಾಗುವಂತಹ, ಮನೆಯಲ್ಲೇ ಸುಲಭ, ಸರಳ ಹಾಗೂ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ವಿಶಿಷ್ಟ ಚಿಕನ್ ಖಾದ್ಯಗಳ ಬಗ್ಗೆ ವಿವರಿಸಿದ್ದಾರೆ ದೀಪಕ್ ಗೌಡ.

***

‌ಚಿಕನ್ ಲಿವರ್ ಗುಂಡಿಗೆಕಾಯಿ ಗೊಜ್ಜು

ಬೇಕಾದ ಸಾಮಗ್ರಿಗಳು: ಗುಂಡಿಗೆಕಾಯಿ ಲಿವರ್ – ಅರ್ಧ ಕೆಜಿ, ಈರುಳ್ಳಿ –4, ಟೊಮೊಟೊ –4, ಹಸಿಮೆಣಸಿನಕಾಯಿ –6, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು –ಒಂದು ಕಪ್, ಖಾರದಪುಡಿ –ಎರಡು ಚಮಚ, ದನಿಯಾ ಪುಡಿ –ಎರಡು ಚಮಚ, ಗರಂ ಮಸಾಲ –ಒಂದು ಚಮಚ, ಜೀರಿಗೆ ಪುಡಿ –ಒಂದು ಚಮಚ, ಅರಿಶಿಣ ಪುಡಿ –ಅರ್ಧ ಚಮಚ, ಒಗ್ಗರಣೆಗೆ ಆಗುವಷ್ಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ:ಕುಕ್ಕರ್‌ನಲ್ಲಿ ಗುಂಡಿಗೆಕಾಯಿ ಮತ್ತು ಲಿವರ್ ಅನ್ನು ಪ್ರತ್ಯೇಕವಾಗಿ ಫ್ರೈ ಮಾಡಿಕೊಳ್ಳಬೇಕು. ಗುಂಡಿಗೆಕಾಯಿಯಲ್ಲಿ ಹೆಚ್ಚು ಕೊಬ್ಬಿನಂಶ ಇರುವುದರಿಂದ ಕಡಿಮೆ ಎಣ್ಣೆ ಬಳಸಬೇಕು. ಸ್ವಲ್ಪ ಉಪ್ಪು, ಎರಡು ಗ್ಲಾಸ್ ನೀರನ್ನು ಬಳಸಿ ಮೂರರಿಂದ ನಾಲ್ಕು ನಿಮಿಷ ಫ್ರೈ ಮಾಡಿಕೊಳ್ಳಬೇಕು. ನಂತರ ಲಿವರ್ ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ. ಬಳಿಕ ಪಾತ್ರೆಯಲ್ಲಿ ನಾಲ್ಕು ಚಮಚ ಎಣ್ಣೆ ಹಾಕಿಕೊಂಡು ಈರುಳ್ಳಿ, ಟೊಮೆಟೊ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮಸಾಲೆ ಪುಡಿಗಳನ್ನು ಹಾಕಿ ಚೆನ್ನಾಗಿ ಬೆರೆಸಿಕೊಡಬೇಕು. ಅದಕ್ಕೆ ಈಗಾಗಲೇ ಫ್ರೈ ಮಾಡಿಕೊಂಡಿದ್ದ ಗುಂಡಿಗೆಕಾಯಿ ಲಿವರ್ ಅನ್ನು ಒಗ್ಗರಣೆಗೆ ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಮಿಶ್ರಣ ಮಾಡಿಕೊಂಡು ಹತ್ತರಿಂದ ಹದಿನೈದು ನಿಮಿಷಗಳವರೆಗೆ ಬೇಯಿಸಿದರೆ ಚಿಕನ್ ಲಿವರ್ ಗುಂಡಿಗೆಕಾಯಿ ಗೊಜ್ಜು ಸವಿಯಲು ಸಿದ್ಧ.

ಹರಿಯಾಲಿ ಚಿಕನ್
ಹರಿಯಾಲಿ ಚಿಕನ್

ಹರಿಯಾಲಿ ಚಿಕನ್

ಬೇಕಾದ ಸಾಮಗ್ರಿಗಳು: ಚಿಕನ್ –ಅರ್ಧ ಕೆಜಿ, ಈರುಳ್ಳಿ –4, ಎಣ್ಣೆ –ಒಂದು ಕಪ್, ಹಸಿ ಮೆಣಸಿನಕಾಯಿ, ಚಕ್ಕೆ, ಏಲಕ್ಕಿ, ಪುದಿನ –ಒಂದು ಕಪ್, ಕೊತ್ತಂಬರಿ ಸೊಪ್ಪು –ಒಂದು ಕಪ್, ಕಸ್ತೂರಿ ಮೆಂತ್ಯ –ಒಂದು ಕಪ್, ಜೀರಿಗೆ ಪುಡಿ –ಒಂದು ಚಮಚ, ಗರಂಮಸಾಲಾ –ಒಂದು ಚಮಚ, ಖಾರದಪುಡಿ –ಒಂದು ಚಮಚ, ದನಿಯಾ ಪುಡಿ –ಒಂದು ಚಮಚ, ಶುಂಠಿ -ಬೆಳ್ಳುಳ್ಳಿ ಪೇಸ್ಟ್, ಮೊಸರು –ಒಂದು ಕಪ್, ಒಗ್ಗರಣೆಗೆ ಬೇಕಾದಷ್ಟು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಪುದಿನ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನಕಾಯಿ, ಮೊಸರು ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಬಳಿಕ ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಲು ಇಡಿ. ಎಣ್ಣೆ ಬಿಸಿಯಾದ ಮೇಲೆ ಏಲಕ್ಕಿ, ಚಕ್ಕೆಯನ್ನು ಹಾಕಿ ಬೆರೆಸಿಕೊಡಬೇಕು. ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಚಿಕನ್ ಹಾಕಿ. ಅದಕ್ಕೆ ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಮಸಾಲೆ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಚಿಕನ್ ಎಣ್ಣೆ ಬಿಡುವವರೆಗೆ ಫ್ರೈ ಮಾಡಬೇಕು. ರುಬ್ಬಿದ ಮಿಶ್ರಣವನ್ನು ಹಾಕಿ, ಕಡಿಮೆ ಪ್ರಮಾಣದಲ್ಲಿ ನೀರನ್ನು ಸೇರಿಸಿ ಕುದಿಯಲು ಬಿಡಿ. ಸಣ್ಣ ಉರಿಯಲ್ಲಿ 15– 20 ನಿಮಿಷ ಬೇಯಿಸಿ. ಕೊನೆಯಲ್ಲಿ ಎರಡು ಚಮಚ ಕಸ್ತೂರಿ ಮೆಂತ್ಯ ಸೇರಿಸಿ ಚೆನ್ನಾಗಿ ಬೆರೆಸಿದರೆ ಹರಿಯಾಲಿ ಚಿಕನ್ ಸವಿಯಲು ರೆಡಿ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT