ವರ್ಷದ ಕೊನೆಯಲ್ಲಿ ಎಲ್ಲರೂ ಮೋಜು ಮಸ್ತಿಯಲ್ಲಿ ತೊಡಗುತ್ತಾರೆ. ಅದಕ್ಕೆ ಪೂರಕವಾಗಿ ಕ್ರಿಸ್ಮಸ್ ಜೊತೆಗೆ ಹೊಸ ವರ್ಷವೂ ಆರಂಭವಾಗುತ್ತದೆ. ಹೊಸ ವರ್ಷದ ಸಂಭ್ರಮ ಹಾಗೂ ಕ್ರಿಸ್ಮಸ್ ಆಚರಣೆಯಲ್ಲಿ ವೈನ್ ಸೇವನೆ ಹೆಚ್ಚು ಮಹತ್ವ ಪಡೆದಿದೆ. ಮುಖ್ಯವಾಗಿ ಕ್ರಿಸ್ಮಸ್ ಆಚರಣೆಗೆ ವೈನ್ ಹಾಗೂ ಕೇಕ್ ಅಗತ್ಯ. ಹಾಗಾದರೆ ಮನೆಯಲ್ಲಿಯೇ ವೈನ್ ಹೇಗೆ ತಯಾರಿಸಬಹುದು ಎಂಬುದನ್ನು ತಿಳಿಯೋಣ.
.ಬೆಣ್ಣೆ ಚಕ್ಕುಲಿ, ನಿಪ್ಪಟ್ಟು: ಇಲ್ಲಿದೆ ಮನೆಯಲ್ಲಿಯೇ ಸುಲಭವಾಗಿ ಮಾಡುವ ವಿಧಾನ.ಕ್ರಿಸ್ಮಸ್ ಕೇಕ್, ಕುಕೀಸ್ ಮಾರಾಟ ಮತ್ತು ಪ್ರದರ್ಶನ.
ರೆಡ್ ವೈನ್ ಮಾಡುವ ಸುಲಭ ವಿಧಾನ

ಆಲ್ಕೋಹಾಲ್ ಕುಡಿಯದವರು ರೆಡ್ವೈನ್ ಅನ್ನು ಕುಡಿಯುತ್ತಾರೆ. ಅವರಿಗಾಗಿ ಮನೆಯಲ್ಲಿಯೇ ಸುಲಭವಾಗಿ ರೆಡ್ವೈನ್ ತಯಾರು ಮಾಡಬಹುದು. ಮನೆಯಲ್ಲಿ ತಯಾರು ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು.

ಬೇಕಾಗುವ ಪದಾರ್ಥಗಳು:

1.5 ಕೆಜಿ ಕೆಂಪು ದ್ರಾಕ್ಷಿ

500 ಗ್ರಾಂ ಸಕ್ಕರೆ

ಒಂದು ಚಮಚ ಯೀಸ್ಟ್

4 ಲೀಟರ್ ನೀರು

ಗಾಜಿನ ಜಾರ್

ಅಡುಗೆ ಸೋಡಾ ಅಥವಾ ನಿಂಬೆ ರಸ

ಮೊದಲು ಕಪ್ಪು ದ್ರಾಕ್ಷಿಯನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ತೊಳೆಯಬೇಕು. ಬಳಿಕ ಅದಕ್ಕೆ ನಿಂಬೆ ರಸ ಹಾಗೂ ಬೇಕಿಂಗ್ ಸೋಡಾವನ್ನು ಸೇರಿಸಿ 15 ನಿಮಿಷ ದ್ರಾಕ್ಷಿಯನ್ನು ನೆನೆಯಲು ಬಿಡಿ. ಕಾರಣದ ಕಪ್ಪು ದ್ರಾಕ್ಷಿಯಲ್ಲಿ ಅಡಗಿರುವ ಹುಳುಗಳು ನಾಶವಾಗುತ್ತವೆ.

ನಂತರ ಕಪ್ಪು ದ್ರಾಕ್ಷಿಯನ್ನು ಕೈಗಳ ಸಹಾಯದಿಂದ ಹಿಸುಕಿ ಒಂದು ಬಾಟಲಿಗೆ ತುಂಬಬೇಕು. (ಗಮನಿಸಿ: ಕೈಗಳಿಗೆ ಕೈ ಚೀಲಗಳನ್ನು ಬಳಸಿ) ಬಳಿಕ ಸಕ್ಕರೆ ಮತ್ತು ಯೀಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗಾಜಿನ ಜಾರ್ನೊಳಗೆ ದ್ರಾಕ್ಷಿ ರಸ ಹಾಕಿ. ಸುಮಾರು 10 ದಿನಗಳು ಪೂರ್ಣವಾದ ಬಳಿಕ ಶೇಖರಿಸಿಟ್ಟ ದ್ರಾಕ್ಷಿ ರಸವನ್ನು ಮತ್ತೊಂದು ಗಾಜಿನ ಬಾಟಲಿಗೆ ಬದಲಿಸಬೇಕು. ಕನಿಷ್ಟ 6 ತಿಂಗಳವರೆಗೆ ಇದನ್ನು ಸಂಗ್ರಹಿಸಿಡಬೇಕು. ಬಳಿಕ ರುಚಿಯಾದ ವೈನ್ ಕುಡಿಯಲು ಸಿದ್ಧವಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ವೈನ್ ತಯಾರಿಸಲು ಕಾನೂನಿನ ಅಡಿ ಅನುಮತಿ ಪಡೆಯಬೇಕು. ಮನೆ ಬಳಕೆಗೆ ಮಾತ್ರ ವೈನ್ ತಯಾರು ಮಾಡಿಕೊಳ್ಳುವುದು ಒಳ್ಳೆಯದು.
.ನುಗ್ಗೆಕಾಯಿ ಸಾಂಬರ್ ಮಾತ್ರವಲ್ಲ, ಉಪ್ಪಿನಕಾಯಿ ಕೂಡ ಮಾಡಬಹುದು! ಇಲ್ಲಿದೆ ರೆಸಿಪಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.