ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಜೆಯ ಸ್ನ್ಯಾಕ್ಸ್: ತರಹೇವಾರಿ ಸೊಪ್ಪಿನ ಬೊಂಡಾ

ಎಂ.ಎಸ್.ಧರ್ಮೇಂದ್ರ, ದೊಡ್ಡಮಗ್ಗೆ.
Published 16 ಫೆಬ್ರುವರಿ 2024, 23:30 IST
Last Updated 16 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬಸಳೆ ಸೊಪ್ಪಿನ ಬಜ್ಜಿ

ಬೇಕಾಗುವ ಸಾಮಗ್ರಿಗಳು: ಬಸಳೆಸೊಪ್ಪು 20 ಎಲೆ, ಕಡಲೆ ಹಿಟ್ಟು 1 ಕಪ್, ಖಾರದಪುಡಿ 1 ಚಮಚ, ಅಕ್ಕಿಹಿಟ್ಟು 1/2 ಚಮಚ, ಉಪ್ಪು, ಎಣ್ಣೆ.

ತಯಾರಿಸುವ ವಿಧಾನ: ಕಡಲೆ ಹಿಟ್ಟು, ಖಾರದಪುಡಿ, ಅಕ್ಕಿಹಿಟ್ಟು, ಉಪ್ಪನ್ನು ಮಿಕ್ಸ್ ಮಾಡಿ ನೀರು ಸೇರಿಸಿ ಗಂಟುಗಳಿಲ್ಲದಂತೆ ಪೇಸ್ಟ್ ಮಾಡಿಕೊಳ್ಳಿ.  ತೊಳೆದ ಬಸಳೆಸೊಪ್ಪಿನ ಎಲೆಯನ್ನು ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೂ ಎರಡೂ ಕಡೆ ತಿರುಗಿಸುತ್ತಾ ಕರಿದು ತೆಗೆಯಿರಿ.

ಸಬ್ಬಕ್ಕಿ ಸೊಪ್ಪಿನ ಬೋಂಡಾ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ 1/4 ಕೆ.ಜಿ ಕಡಲೆ ಹಿಟ್ಟು 100 ಗ್ರಾಂ ಹಸಿ ಮೆಣಸಿನಕಾಯಿ 6 ಕೊತ್ತಂಬರಿ 1 ಕಪ್ ಸಬ್ಬಕ್ಕಿ ಸೊಪ್ಪು ಅರ್ಧಕಪ್ ಕಾರ್ನ್ಫ್ಲೌರ್ ಎರಡು ಚಮಚ ಉಪ್ಪು ಎಣ್ಣೆ.

ತಯಾರಿಸುವ ವಿಧಾನ: ಈರುಳ್ಳಿ ಕೊತ್ತಂಬರಿ ಸಬ್ಬಕ್ಕಿ ಸೊಪ್ಪು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಕತ್ತರಿಸಿಟ್ಟುಕೊಂಡ ಪದಾರ್ಥಗಳು ಕಡಲೆಹಿಟ್ಟು ಕಾರ್ನ್ಫ್ಲೌರ್ ಉಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿ ಹುಂಡೆಯಾಕಾರದಲ್ಲಿ ಮಾಡಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ

ಮಸಾಲೆ ವಡೆ

ಬೇಕಾಗುವ ಸಾಮಗ್ರಿಗಳು: ಕಡ್ಲೆಬೇಳೆ 1/2 ಕೆ.ಜಿ ಈರುಳ್ಳಿ 6 ಶುಂಠಿ 3 ಇಂಚು ಬೆಳ್ಳುಳ್ಳಿ 4 ಉಂಡೆ ಗರಂಮಸಾಲೆ ಸ್ವಲ್ಪ ಹಸಿಮೆಣಸಿನ ಕಾಯಿ 7ಒಣಮೆಣಸಿನ ಕಾಯಿ 4 ಕರಿಬೇವು 3 ಕಡ್ಡಿ ಸಬ್ಬಕ್ಕಿ ಸೊಪ್ಪು ಸ್ವಲ್ಪ ಪುದೀನ ಸ್ವಲ್ಪ ಕೊತ್ತಂಬರಿಸೊಪ್ಪು ಸ್ವಲ್ಪ ಉಪ್ಪುಎಣ್ಣೆ.

ತಯಾರಿಸುವ ವಿಧಾನ: ಈರುಳ್ಳಿ 2 ಹಸಿಮೆಣಸಿನಕಾಯಿ ಸಬ್ಬಕ್ಕಿ ಸೊಪ್ಪು ಕರಿಬೇವು ಕೊತ್ತಂಬರಿಸೊಪ್ಪು ಪುದೀನಗಳನ್ನು ಸಣ್ಣಗೆಕತ್ತರಿಸಿಟ್ಟುಕೊಳ್ಳಿ. ಶುಂಠಿ ಬೆಳ್ಳುಳ್ಳಿ 5 ಹಸಿಮೆಣಸಿನಕಾಯಿ ಒಣಮೆಣಸಿನಕಾಯಿ ಗರಂಮಸಾಲೆ ಕೊತ್ತಂಬರಿಸೊಪ್ಪು ಸ್ವಲ್ಪ ಮತ್ತುಹರಳುಪ್ಪು ಹಾಕಿ ನೀರು ಹಾಕದೆ ರುಬ್ಬಿಕೊಳ್ಳಿ. 3 ಗಂಟೆಗಳ ಕಾಲ ನೆನೆಸಿ ನೀರನ್ನು ಸೋರಿಸಿ ಆರಿದ ನಂತರ ದಪ್ಪದಪ್ಪವಾಗಿ ಕಾಳುಗಳು ಇರುವಂತೆ ಕಡ್ಲೆಬೇಳೆಯನ್ನು ರುಬ್ಬಿಟ್ಟುಕೊಳ್ಳಿ. ಇದಕ್ಕೆ ರುಬ್ಬಿದ ಮತ್ತು ಕತ್ತರಿಸಿದ ಪದಾರ್ಥಗಳನ್ನು ಹಾಕಿ ನೀರು ಹಾಕದೆ ಚೆನ್ನಾಗಿ ಕಲಸಿ ಒಣಬಟ್ಟೆಯ ಮೇಲೆ ತಟ್ಟಿ ನಂತರ ಕಾದ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿದು ತೆಗೆಯಿರಿ.

ನುಗ್ಗೆ ಸೊಪ್ಪಿನ ಬೋಂಡಾ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ 1/4 ಕೆ.ಜಿ ಕಡಲೆ ಹಿಟ್ಟು 1 ಕಪ್ ಹಸಿ ಮೆಣಸಿನಕಾಯಿ 10 ಕೊತ್ತಂಬರಿ ಸ್ವಲ್ಪ ನುಗ್ಗೆ ಸೊಪ್ಪು 1 ಕಪ್ ಕಾರ್ನ್‌ಪ್ಲೋರ್‌ 1 ಚಮಚ ಉಪ್ಪು ಎಣ್ಣೆ.

ತಯಾರಿಸುವ ವಿಧಾನ: ಈರುಳ್ಳಿ ಕೊತ್ತಂಬರಿ ನುಗ್ಗೆಸೊಪ್ಪು ಹಸಿಮೆಣಸಿನಕಾಯಿಯನ್ನು ಸಣ್ಣಗೆ ಕತ್ತರಿಸಿಟ್ಟುಕೊಳ್ಳಿ. ಕತ್ತರಿಸಿಟ್ಟುಕೊಂಡ ಪದಾರ್ಥಗಳು ಕಡಲೆಹಿಟ್ಟು ಕಾರ್ನ್ಫ್ಲೌರ್ ಉಪ್ಪು ಮತ್ತು ಸ್ವಲ್ಪ ನೀರನ್ನು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿ ಹುಂಡೆಯಾಕಾರದಲ್ಲಿ ಮಾಡಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ.

ಈರುಳ್ಳಿ ಬೋಂಡಾ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ 1/4 ಕೆ.ಜಿ ಕಡಲೆ ಹಿಟ್ಟು 100 ಗ್ರಾಂ ಹಸಿ ಮೆಣಸಿನಕಾಯಿ 6 ಕೊತ್ತಂಬರಿ 1 ಕಪ್ ಕರಿಬೇವು 1 ಕಡ್ಡಿ ಕಾರ್ನ್‌ಫ್ಲೋರ್‌ 2 ಚಮಚ ಉಪ್ಪು ಎಣ್ಣೆ.

ತಯಾರಿಸುವ ವಿಧಾನ: ಕತ್ತರಿಸಿದ ಈರುಳ್ಳಿ ಕೊತ್ತಂಬರಿ ಕರಿಬೇವು ಹಸಿಮೆಣಸಿನಕಾಯಿಗಳಿಗೆ ಕಡಲೆಹಿಟ್ಟು ಕಾರ್ನ್ಫ್ಲೌರ್ ಉಪ್ಪು ಮತ್ತುಸ್ವಲ್ಪ ನೀರನ್ನು ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿ ಹುಂಡೆಯಾಕಾರದಲ್ಲಿ ಮಾಡಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕರಿದು ತೆಗೆಯಿರಿ. 

ಜೋಳದ ಪಕೋಡ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ 6 ಜೋಳ 1 ಕಪ್ ಕಡಲೆ ಹಿಟ್ಟು 5 ಚಮಚ ಕಾರ್ನ್ಫ್ಲೌರ್/ಅಕ್ಕಿಹಿಟ್ಟು 1/2 ಚಮಚ ಖಾರದಪುಡಿ 2ಚಮಚ ಗರಂ ಮಸಾಲೆ ಸ್ವಲ್ಪ ಹಸಿಮೆಣಸಿನ ಕಾಯಿ 4 ಜೀರಿಗೆ ಸ್ವಲ್ಪ ಕೊತ್ತಂಬರಿಸೊಪ್ಪು ಸ್ವಲ್ಪ ಉಪ್ಪು ಎಣ್ಣೆ.

ತಯಾರಿಸುವ ವಿಧಾನ:  ದಪ್ಪವಾಗಿ ರುಬ್ಬಿದ ಜೋಳಕ್ಕೆ ಕತ್ತರಿಸಿದ ಈರುಳ್ಳಿ ಹಸಿಮೆಣಸಿನಕಾಯಿ ಕೊತ್ತಂಬರಿ ಕಡಲೆಹಿಟ್ಟು ಕಾರ್ನ್‌ಫ್ಲೋರ್‌/ಅಕ್ಕಿಹಿಟ್ಟು ಖಾರದಪುಡಿ ಉಪ್ಪನ್ನು ಹಾಕಿ ನೀರು ಹಾಕದೆ ಚೆನ್ನಾಗಿ ಕಲಸಿ ಈರುಳ್ಳಿ ಮತ್ತು ಜೋಳ ಅಂಟುವಂತಾಗಲಿ ಉಂಡೆಯಾಕಾರದಲ್ಲಿ ಮಾಡಿ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕರಿದು ತೆಗೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT