ನಾಟಿಕೋಳಿ ಸಾರು

ಬೇಕಾಗುವ ಸಾಮಗ್ರಿಗಳು: 1 ಕೆ.ಜಿ ನಾಟಿಕೋಳಿ ಮಾಂಸ, 1 ಕಪ್ ತೆಂಗಿನ ತುರಿ, 1 ತುಂಡು ಚಕ್ಕೆ, ಲವಂಗ 2, ಶುಂಠಿ, ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಹೆಚ್ಚಿದಈರುಳ್ಳಿ, 2, ಹೆಚ್ಚಿದ ಟೊಮೆಟೊ 2,ಖಾರದ ಪುಡಿ 2 ಚಮಚ,ಧನಿಯ ಪುಡಿ 1 ಚಮಚ,ಕೊತ್ತಂಬರಿ ಸೊಪ್ಪು ಸ್ವಲ್ಪ,ಅರಿಸಿನ ಅರ್ಧ ಚಮಚ,ಎಣ್ಣೆ 2 ಚಮಚ,ಉಪ್ಪು ರುಚಿಗೆ.

ತಯಾರಿಸುವ ವಿಧಾನ : ಚಿಕನ್ ಅನ್ನು ತೊಳೆದು ಸ್ವಚ್ಛ ಮಾಡಿ. ನಂತರ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಿ. ಅದಕ್ಕೆ ಚಿಕನ್ ಸೇರಿಸಿ, ಅರಿಸಿನ ಪುಡಿ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಬಾಡಿಸಿ. ಒಂದು ಬಾಣಲೆಯಲ್ಲಿ ಈರುಳ್ಳಿಯನ್ನು ಹುರಿದುಕೊಳ್ಳಿ , ನಂತರ ಹುರಿದ ಈರುಳ್ಳಿ, ತೆಂಗಿನಕಾಯಿ ತುರಿ, ಚಕ್ಕೆ ಲವಂಗ, ಟೊಮೆಟೊ ಸೇರಿಸಿ ನುಣ್ಣಗೆ ರುಬ್ಬಿ ಮಸಾಲ ತಯಾರಿಸಿ.

ಮಸಾಲೆಯನ್ನು ಅರ್ಧ ಬೆಂದ ಚಿಕನ್ಗೆ ಸೇರಿಸಿ ಅದಕ್ಕೆ ಧನಿಯ ಪುಡಿ, ಮೆಣಸಿನ ಪುಡಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೇಯಿಸಿ. ಬೇಕಿದ್ದರೆ ಸ್ವಲ್ಪ ಉಪ್ಪು ಮತ್ತು ಬೇಕಾದಷ್ಟು ನೀರು, ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಅರ್ಧ ಗಂಟೆ ಬೇಯಿಸಿದರೆ ನಾಟಿಕೋಳಿ ಸಾರು ಸಿದ್ಧ. ನಾಟಿಕೋಳಿ ಸಾರು ಬಿಸಿ ರಾಗಿ ಮುದ್ದೆ ಜೊತೆಗೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.

ಚಿಕನ್ ಸಲಾಡ್

ಬೇಕಾಗುವ ಸಾಮಗ್ರಿಗಳು: ಚಿಕನ್ , ಲವಂಗ 2, ಬೆಳ್ಳುಳ್ಳಿ ಎಸಳು ಸ್ವಲ್ಪ,ಕರಿಮೆಣಸು 1 ಚಮಚ,ಪುನರ್ಪುಳಿ ರಸ ಅರ್ಧ ಕಪ್,ನಿಂಬೆರಸ ಸ್ವಲ್ಪ,ಆಲಿವ್ ಎಣ್ಣೆ 1 ಚಮಚ, ಉಪ್ಪು ರುಚಿಗೆ,

ಡ್ರೆಸಿಂಗ್: ಸಾಸಿವೆ ಸ್ವಲ್ಪ,ಸೋಯಾ ಸಾಸ್ ಸ್ವಲ್ಪ,ಹುಳಿರಸ ಕಾಲು ಕಪ್, ಕೋಷರ್ ಉಪ್ಪು 1 ಚಮಚ,ಕರಿಮೆಣಸು ಅರ್ಧ ಚಮಚ,ಆಲಿವ್ ಎಣ್ಣೆ 1 ಕಪ್,

ಸಲಾಡ್ಗಾಗಿ: ತಾಜಾ ಸೀಬೆ ಹಣ್ಣು ಹೋಳು ಮಾಡಿದ್ದು1 ಕಪ್, ನಿಂಬೆ ರಸ 1 ಚಮಚ,ಬೀನ್ಸ್ 1 ಕಪ್ 1 ಇಂಚಿನ ತುಂಡುಗಳಾಗಿ, ಹೆಚ್ಚಿದ ಟೊಮೆಟೊ 1 ಕಪ್,ಹೆಚ್ಚಿದ ಈರುಳ್ಳಿ ಅರ್ಧ ಕಪ್, 2 ಮಾಗಿದ ಅವಕೆಡೊ ತುಂಡುಗಳಾಗಿ ಕತ್ತರಿಸಿದ್ದು.

ತಯಾರಿಸುವ ವಿಧಾನ:ಕೋಳಿಯನ್ನು ಹುರಿಯಿರಿ. ಓವನ್ ಅನ್ನು 350 ಡಿ. ಉಷ್ಣಾಂಶಕ್ಕೆ ಇಡಿ. ಕೋಳಿಗೆ ಉಪ್ಪು, ಬೆಳ್ಳುಳ್ಳಿ ಪೇಸ್ಟ್, ಲಿಂಬೆ ರಸ ಹಾಕಿ ಉಜ್ಜಿ. ನಂತರ ಆಲಿವ್ ಎಣ್ಣೆ ಸಿಂಪಡಿಸಿ. ಅದರ ಮೇಲೆ ಕಾಳು ಮೆಣಸಿನ ಪುಡಿ ಹಾಕಿ ಉಜ್ಜಿ. ಓವನ್ನಲ್ಲಿ 50– 60 ನಿಮಿಷ ಹುರಿಯಿರಿ. ನಂತರ ತಣ್ಣಗಾಗಲು ಬಿಡಿ.

ನಂತರ ಕೋಳಿಯ ಮೇಲಿನ ಚರ್ಮ ತೆಗೆದು ಹಾಕಿ. ಹುರಿದ ಮಾಂಸವನ್ನು ಎರಡು ಇಂಚು ಉದ್ದದ ಚೂರುಗಳನ್ನಾಗಿ ಕತ್ತರಿಸಿ.

ಎಣ್ಣೆಯನ್ನು ಬಿಟ್ಟು ಉಳಿದೆಲ್ಲ ಸಾಮಗ್ರಿಗಳನ್ನು ಹಾಕಿ ಮಿಶ್ರ ಮಾಡಿ. ಮಿಕ್ಸಿಯಲ್ಲಿ ಹಾಕಿ 30 ಸೆಕೆಂಡ್ ಕಾಲ ಓಡಿಸಿ. ನಂತರ ಎಣ್ಣೆಯನ್ನು ಸೇರಿಸಿ.

ದೊಡ್ಡ ಪಾತ್ರೆಯಲ್ಲಿ ಟೊಮೆಟೊ, ಈರುಳ್ಳಿ, ಅವಕೆಡೊ, ಬೀನ್ಸ್, ಪೀಯರ್ಸ್, ಅರ್ಧದಷ್ಟು ಕೋಳಿ ಮಾಂಸವನ್ನು ಹಾಕಿ ಮಿಶ್ರ ಮಾಡಿ. ಇದಕ್ಕೆ ಮಿಕ್ಸಿಯಲ್ಲಿದ್ದ ಪದಾರ್ಥಗಳನ್ನು ಸೇರಿಸಿ. ಎಲ್ಲವಕ್ಕೂ ಮಿಶ್ರಣ ಚೆನ್ನಾಗಿ ಲೇಪನವಾದ ನಂತರ ಪ್ಲೇಟ್ಗೆ ಹಾಕಿ ಮೇಲೆ ಉಳಿದ ಕೋಳಿ ಮಾಂಸದ ಚೂರುಗಳನ್ನು ಇಡಿ.

ಟಿಪ್ಸ್: ಬಿನ್ಸ್ ಅನ್ನು ಜಾಸ್ತಿ ಬೇಯಿಸಬಾರದು. ಒಂದು ಪಾತ್ರೆಗೆ ನೀರು ಹಾಕಿ ಕುದಿಸಿ. ಇದಕ್ಕೆ ಕತ್ತರಿಸಿದ ಬೀನ್ಸ್ ಹಾಕಿ ಒಂದೆರಡು ನಿಮಿಷ ಬೇಯಿಸಿ. ನೀರನ್ನು ಬಸಿದು ಬೆಂದ ಬೀನ್ಸ್ ಚೂರುಗಳನ್ನು ಬಳಸಿ.

ಗ್ರೀನ್ ಚಿಲ್ಲಿ ಚಿಕನ್

ಬೇಕಾಗುವ ಸಾಮಗ್ರಿಗಳು: ಚಿಕನ್ ಅರ್ಧ ಕೆ.ಜಿ,ಹಸಿಮೆಣಸಿನಕಾಯಿ 6-7,ಪುದಿನ ಸೊಪ್ಪು ಸ್ವಲ್ಪ,ಕೊತ್ತಂಬರಿ ಸೊಪ್ಪು ಸ್ವಲ್ಪ,ಚಕ್ಕೆ, ಲವಂಗ ಪುಡಿ ಅರ್ಧ ಚಮಚ,ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಅರ್ಧ ಚಮಚ,ಮೊಸರು 2 ಚಮಚ,ಎಣ್ಣೆ 1 ಚಮಚ,ಕಾಳುಮೆಣಸು 4,ಉಪ್ಪು ರುಚಿಗೆ.

ತಯಾರಿಸುವ ವಿಧಾನ:ಮೊದಲು ಒಂದು ಬಾಣಲೆಯಲ್ಲಿ ಹಸಿಮೆಣಸು, ಪುದಿನ, ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ಎಣ್ಣೆ ಸೇರಿಸಿ ಹುರಿದುಕೊಳ್ಳಿ. ನಂತರ ಮತ್ತೊಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ತೊಳೆದ ಚಿಕನ್ ಸೇರಿಸಿ ಬೇಯಿಸಿ, ನಂತರ ಹುರಿದ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಮೇಲಿನ ಎಲ್ಲಾ ಮಸಾಲೆ ಪುಡಿಯನ್ನು ಸೇರಿಸಿ, ಮೊಸರು ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗ್ರೇವಿ ತಯಾರಿಸಿ. ಕೊನೆಯಲ್ಲಿ ಸ್ವಲ್ಪ ನಿಂಬೆ ರಸವನ್ನು ಸೇರಿಸಿದರೆ ಗ್ರೀನ್ ಚಿಲ್ಲಿ ಚಿಕನ್ ಸಿದ್ಧ. ಇದನ್ನು ಅಕ್ಕಿ ರೊಟ್ಟಿ ಜೊತೆಗೆ ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.