ಉತ್ತರ ಕರ್ನಾಟಕ ಭಾಗದಲ್ಲಿ ಜೋಳದ ಖಾದ್ಯಗಳು ತುಂಬಾ ಫೇಮಸ್. ಆದರೆ ಜೋಳದ ಜೊತೆಗೆ, ಅಕ್ಕಿ, ಸಜ್ಜೆಯಂತಹ ಧಾನ್ಯವನ್ನೂ ಬಳಸಿ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತಾರೆ. ಅಂಥ ವಿಶಿಷ್ಟ ಖಾದ್ಯಗಳ ರೆಸಿಪಿಗಳನ್ನು ತ್ರಿವೇಣಿ ಪಾಟೀಲ್ ಇಲ್ಲಿ ಹಂಚಿಕೊಂಡಿದ್ದಾರೆ

ಜೋಳದ ವಡೆ

ಬೇಕಾಗಿರುವ ಸಾಮಗ್ರಿಗಳು: 2 ಕಪ್ ಜೋಳದ ಹಿಟ್ಟು, 3/4 ಕಪ್ ಗೋಧಿ ಹಿಟ್ಟು, 1/4 ಕಪ್ ಕಡಲೆಹಿಟ್ಟು, ಎಳ್ಳು, ಆರೇಳು ಹಸಿ ಮೆಣಸಿನಕಾಯಿ , ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು, ದನಿಯಾ, ಅರಸಿನಪುಡಿ ಪುಡಿ, ಇಂಗು, 1 ಕಪ್ ನೆನೆಸಿರುವ ಉದ್ದಿನ ಬೇಳೆ, ಜೀರಿಗೆ, ಎಣ್ಣೆ

ತಯಾರಿಸುವ ವಿಧಾನ: ತೊಳೆದು ನೆನೆಸಿರುವ ಉದ್ದಿನ ಬೇಳೆಯನ್ನು ಮಿಕ್ಸಿ ಜಾರ್ಗೆ ಹಾಕಿ. ಅದಕ್ಕೆ ಜೀರಿಗೆ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ದನಿಯಾ, ನೀರು ಹಾಕಿ ರುಬ್ಬಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಒಂದು ಅಗಲವಾದ ಪಾತ್ರೆಗೆ ಈ ಪೇಸ್ಟ್ ಹಾಕಿ. ಜೊತೆಗೆ, ಜೋಳದ ಹಿಟ್ಟು, ಗೋಧಿ ಹಿಟ್ಟು, ಕಡಲೆಹಿಟ್ಟು ಹಾಕಿ ಇಂಗು, ಅರಸಿನಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಇದಕ್ಕೆ ಬಿಸಿ ನೀರಿ ಸೇರಿಸಿ ಹಿಟ್ಟನ್ನು ಗಟ್ಟಿಯಾಗಿ ನಾದಿಕೊಳ್ಳಬೇಕು. ನಾದಿಕೊಂಡ ಹಿಟ್ಟನ್ನು ಒಂದು ತಾಸು ನೆನೆಯಲು ಬಿಡಬೇಕು. ನಂತರ ಯಾವ ಆಕಾರ ಬೇಕೋ ಆ ಆಕಾರದಲ್ಲಿ ಹಿಟ್ಟನ್ನು ಲಟ್ಟಿಸಿಕೊಂಡು, ಅದರ ಮೇಲೆ ಸ್ವಲ್ಪ ಎಳ್ಳು ಹಚ್ಚಿ ಎಣ್ಣೆಯಲ್ಲಿ ಫ್ರೈ ಮಾಡಿಕೊಳ್ಳಿ. ರುಚಿ ರುಚಿಯಾದ ಜೋಳದ ವಡೆ ಸವಿಯಲು ಸಿದ್ಧ.

ಕೊಬ್ರಿ ಕಡ್ಡಿ

ಬೇಕಾಗಿರುವ ಸಾಮಗ್ರಿಗಳು: 1 ಕಪ್ ಅಕ್ಕಿ, 1/2 ಕಪ್ ಪುಟಾಣಿ 1 ಚಮಚ ಹೆಸರುಬೇಳೆ, ಕಡಲೆಬೇಳೆ, ದನಿಯಾ, 1/2 ಕಪ್ ಒಣಕೊಬ್ಬರಿ ಚೂರು, ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ, ಅಜ್ವಾನ, ಆರೇಳು ಹಸಿ ಮೆಣಸಿನಕಾಯಿ, ಒಂದೆರಡು ಬೆಳ್ಳುಳ್ಳಿ ಎಸಳು, ಉದ್ದಿನ ಬೇಳೆ, ಉಪ್ಪು, ಎಣ್ಣೆ

ತಯಾರಿಸುವ ವಿಧಾನ: ಮೊದಲಿಗೆ ಒಂದು ಕಪ್ ಅಕ್ಕಿಯನ್ನು ತೊಳೆದುಕೊಂಡು ನಂತರ ಕಾಟನ್ ಬಟ್ಟೆಯ ಮೇಲೆ 30 ನಿಮಿಷ ಒಣಗಿಸಬೇಕು. ಒಣಗಿದ ಅಕ್ಕಿಯನ್ನು ಹದವಾಗಿ ಹುರಿಯಬೇಕು (ತುಂಬಾ ಹುರಿಯುವ ಅವಶ್ಯಕತೆ ಇಲ್ಲ). ನಂತರ ಎಲ್ಲ ಬೇಳೆ ಕಾಳುಗಳನ್ನೂ ಇದೇ ರೀತಿಯಲ್ಲಿ ಹುರಿಯಬೇಕು. ನಂತರ ಈ ಎಲ್ಲವನ್ನೂ ಹಿಟ್ಟುಮಾಡಿಕೊಂಡು, ಜರಡಿ ಹಿಡಿದುಕೊಳ್ಳಬೇಕು.

ಒಂದು ಮಿಕ್ಸಿ ಜಾರ್ನಲ್ಲಿ ಒಣಕೊಬ್ಬರಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು ಹಾಕಿ ರುಬ್ಬಿ ಪೇಸ್ಟ್ ಮಾಡಿಕೊಳ್ಳಬೇಕು.

ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿಕೊಳ್ಳಿ. ಜರಡಿ ಮಾಡಿಟ್ಟುಕೊಂಡ ಅಕ್ಕಿ ಮತ್ತು ಕಾಳುಗಳ ಹಿಟ್ಟಿಗೆ ಸ್ವಲ್ಪ ಬಿಸಿ ಎಣ್ಣೆ ಹಾಕಿ. ಆಮೇಲೆ ಅಜ್ವಾನ ಹಾಕಿ. ಈಗಾಗಲೇ ತಯಾರಿಸಿ ಕೊಂಡಿರುವ ಮೆಣಸಿನಕಾಯಿ ಪೇಸ್ಟ್ ಅನ್ನೂ ಇದರೊಟ್ಟಿಗೆ ಹಾಕಿ ಹಿಟ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಚಪಾತಿ ಹಿಟ್ಟು ನಾದಿದ ಹಾಗೆ ನಾದಿಕೊಳ್ಳಿ. ಈಗ ಕಡ್ಡಿ ಆಕಾರದಲ್ಲಿ ಹೊಸೆದು, ಕಡಿಮೆ ಉರಿ ಇಟ್ಟುಕೊಂಡು ಎಣ್ಣೆಯಲ್ಲಿ ಕರಿದರೆ ಕೊಬ್ರಿ ಕಡ್ಡಿ ಸಿದ್ಧ.

ಸಜ್ಜೆ ಚಕ್ಕುಲಿ

ಬೇಕಾಗಿರುವ ಸಾಮಗ್ರಿಗಳು: 1 ಕಪ್ ಸಜ್ಜೆ ಹಿಟ್ಟು, 1/2 ಕಪ್ ಅಕ್ಕಿ ಹಿಟ್ಟು, 1/2 ಕಪ್ ಕಡಲೆಹಿಟ್ಟು, ಕರಿಎಳ್ಳು, ಅಚ್ಚಕಾರದ ಪುಡಿ ರುಚಿಗೆ ತಕ್ಕಷ್ಟು, ಜೀರಿಗೆ, ಅಜ್ವಾನ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ

ತಯಾರಿಸುವ ವಿಧಾನ: ನೀರು ಬಿಸಿ ಮಾಡಿಕೊಳ್ಳಿ. ಅಗಲವಾದ ಪಾತ್ರೆಯಲ್ಲಿ ಸಜ್ಜೆ ಹಿಟ್ಟು, ಅಕ್ಕಿ ಹಿಟ್ಟು, ಕಡಲೆಹಿಟ್ಟು, ಜೀರಿಗೆ, ಅಜ್ವಾನ, ಕರಿಎಳ್ಳು, ಅಚ್ಚಕಾರದ ಪುಡಿ, ಉಪ್ಪು ಹಾಕಿ ಸರಿಯಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಬಿಸಿ ಎಣ್ಣೆ ಮತ್ತು ನೀರು ಹಾಕಿ ಹಿಟ್ಟನ್ನು ಚೆನ್ನಾಗಿ ನಾದಿಕೊಳ್ಳಿ. ಈ ಹಿಟ್ಟನ್ನು ಚೆಕ್ಕುಲಿ ಒತ್ತುವ ಉಪಕರಣಕ್ಕೆ ಹಾಕಿ, ಎಲೆ/ಪ್ಲಾಸ್ಟಿಕ್ ಹಾಳೆ ಮೇಲೆ ಚಕ್ಕುಲಿ ಒತ್ತಿ. ನಿಮಗೆ ಅಭ್ಯಾಸವಿದ್ದರೆ, ಒಲೆ/ಸ್ಟವ್ಮೇಲಿಟ್ಟಿರುವ ಬಿಸಿ ಎಣ್ಣೆಯ ಬಾಣಲೆಗೆ ನೇರವಾಗಿ ಚಕ್ಕಲಿಯನ್ನು ಒತ್ತಬಹುದು. ಕಡಿಮೆ ಉರಿಯಲ್ಲಿ ಕರಿದರೆ, ಗರಿಗರಿ ಚಕ್ಕುಲಿ ಸವಿಯಲು ರೆಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.