ಮೀನು ಪೌಷ್ಟಿಕಯುಕ್ತ ಆಹಾರಗಳ ಪೈಕಿ ಪ್ರಮುಖವಾಗಿದೆ. ಮೀನಿನಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಡಿ ಹಾಗೂ ಬಿ2 ನಂತಹ ಆರೋಗ್ಯಕರ ವಿಟಮಿನ್ಗಳಿವೆ. ಇವುಗಳ ಸೇವನೆಯಿಂದ ಹೃದಯ, ಕಣ್ಣು, ಚರ್ಮ ಹಾಗೂ ಮಿದುಳಿಗೆ ಸಹಕಾರಿಯಾಗಲಿದೆ.

ಮನೆಯಲ್ಲಿಯೇ ವಿಭಿನ್ನವಾಗಿ ಮೀನಿನ ರೆಸಿಪಿ ತಯಾರಿಸಬೇಕು ಎನ್ನುವವರು ‘ಪಂಜಾಬಿ ಶೈಲಿಯ ಮಸಾಲ ಮೀನು ಕರ್ರಿ’ಯನ್ನು ಸುಲಭವಾಗಿ ಮಾಡಬಹುದು. ಹಾಗಾದರೆ ಮನೆಯಲ್ಲಿಯೇ ಪಂಜಾಬಿ ಶೈಲಿಯ ಮೀನು ಕರಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.

ಬೇಕಾದ ಸಾಮಾಗ್ರಿಗಳು

ಮೀನು

ಈರುಳ್ಳಿ

ಟೊಮೆಟೊ

ಶುಂಠಿ-ಬೆಳ್ಳುಳ್ಳಿ ಪೇಸ್ಟ್

ಖಾರದ ಪುಡಿ

ಗರಂ ಮಸಾಲ

ಅಡುಗೆ ಎಣ್ಣೆ

ಜೀರಿಗೆ

ಅರಿಶಿಣ ಪುಡಿ

ತಯಾರಿಸುವ ವಿಧಾನ:

ಮೊದಲಿಗೆ ಮೀನಿನ ತುಂಡುಗಳನ್ನು ತೆಗೆದುಕೊಳ್ಳಿ. ಅದಕ್ಕೆ ಅರ್ಧ ಚಮಚ ಉಪ್ಪು, ಅರಿಶಿಣ, ಖಾರದ ಪುಡಿ, ನಿಂಬೆ ರಸ, ಜೀರಿಗೆ ಹಾಗೂ ಅಡುಗೆ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಅರ್ಧ ಗಂಟೆ ಮ್ಯಾರಿನೇಟ್ ಮಾಡಿರಿ.

ನಂತರ ಒಂದು ಬಾಣೆಲೆಗೆ ಅಡುಗೆ ಎಣ್ಣೆ ಹಾಕಿಕೊಂಡು ಜೀರಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಸಣ್ಣದಾಗಿ ಹಚ್ಚಿಟ್ಟುಕೊಂಡ ಈರುಳ್ಳಿ ಸೇರಿಸಿ ಹುರಿದುಕೊಳ್ಳಿ. ಬಳಿಕ ಟೊಮೆಟೊ, ಅರಿಶಿಣ ಪುಡಿ, ಉಪ್ಪು ಹಾಗೂ ಗರಂ ಮಸಾಲ ಸೇರಿಸಿರಿ. ಆಗ ಗ್ರೇವಿ ತಯಾರಾಗುತ್ತದೆ. ನಂತರ ಮ್ಯಾರಿನೇಟ್ ಮಾಡಿದ್ದ ಮೀನಿನ ತುಂಡುಗಳನ್ನು ಎಣ್ಣೆಯಲ್ಲಿ ಚೆನ್ನಾಗಿ ಕರಿದುಕೊಳ್ಳಿ.

ಸಿದ್ಧ ಮಾಡಿಟ್ಟುಕೊಂಡಿದ್ದ ಗ್ರೇವಿಗೆ ಒಂದು ಲೋಟ ಬಿಸಿ ನೀರನ್ನು ಹಾಕಿ ಅದಕ್ಕೆ ಕರಿದಿಟ್ಟುಕೊಂಡ ಮೀನಿನ ತುಂಡುಗಳನ್ನು ಸೇರಿಸಿ 10 ರಿಂದ 15 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿದರೆ, ಪಂಜಾಬಿ ಶೈಲಿಯ ಮಸಾಲ ಮೀನು ಕರಿ ಸವಿಯಲು ಸಿದ್ದವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.