ಬಾಳೆಕಾಯಿಂದ ಪಲ್ಯ, ಸಾಂಬಾರ್, ಚಿಪ್ಸ್ ಅಲ್ಲದೆ ಬಜ್ಜಿ ಕೂಡ ಮಾಡಬಹುದು. ಬಲು ರುಚಿಯಾದ ಬಾಳೆಕಾಯಿ ಬಜ್ಜಿ ಹೀಗೆ ಮಾಡಿ..

ಬಾಳೆಕಾಯಿ ಬಜ್ಜಿ ಮಾಡಲು ಬೇಕಾಗುವ ಸಾಮಗ್ರಿಗಳು

ಸಿಪ್ಪೆ ತೆಗೆದು, ಕತ್ತರಿಸಿಕೊಂಡ ಬಾಳೆಕಾಯಿ– 1ರಿಂದ 2
ಕಡಲೆ ಹಿಟ್ಟು –1ರಿಂದ2ಕಪ್

ಅರಿಶಿನ ಪುಡಿ– ಅರ್ಧ ಚಮಚ
ಸೋಡಾ ಪುಡಿ– ಚಿಟಿಕೆಯಷ್ಟು
ಇಂಗು– ಚಿಟಿಕೆಯಷ್ಟು
ಉಪ್ಪು – ರುಚಿಗೆ ತಕ್ಕಷ್ಟು
ಖಾರದ ಪುಡಿ–1ರಿಂದ2 ಚಮಚ
ಜೀರಿಗೆ ಪುಡಿ– 1 ಚಮಚ
ಅಡುಗೆ ಎಣ್ಣೆ

ಮಾಡುವ ವಿಧಾನ: ಬಾಳೆಕಾಯಿ ಸಿಪ್ಪೆ ತೆಗೆದು, ಸ್ಲೈಸ್ ಮಾಡಿ 5 ರಿಂದ10 ನಿಮಿಷ ನೀರಿನಲ್ಲಿ ಹಾಕಿ ತೆಗೆಯಿರಿ.
ಬಳಿಕ ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅರಿಶಿಣ ಪುಡಿ, ಸೋಡಾ ಪುಡಿ,ಇಂಗು,ಉಪ್ಪು,ಖಾರದ ಪುಡಿ, ಜೀರಿಗೆ ಪುಡಿ ಹಾಗೂ ಬಜ್ಜಿ ಹಿಟ್ಟಿನ ಹದಕ್ಕೆ ನೀರು ಸೇರಿಸಿ ಮಿಶ್ರಣ ಮಾಡಿಕೊಳ್ಳಿ.

ನಂತರ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಬಾಳೆಕಾಯಿ ಸ್ಲೈಸ್ಗಳನ್ನು ಅದ್ದಿ ಕಾದ ಎಣ್ಣೆಯಲ್ಲಿ ಬಿಟ್ಟು, ಮಧ್ಯಮ ಉರಿಯಲ್ಲಿ, ಹೊಂಬಣ್ಣ ಬರುವವರೆಗೆ ಕರಿಯಿರಿ.

ಕಾಫಿ ಜೊತೆ ಸವಿಯಲು ಸಿದ್ಧ ಬಿಸಿ ಬಿಸಿಯಾದ ಬಾಳೆಕಾಯಿ ಬಜ್ಜಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.