ಶ್ರಾವಣ ಬಂತೆಂದರೆ ಮಾಂಸಾಹಾರ ಪ್ರಿಯರಿಗೆ ಒಂದು ರೀತಿ ‘ಜ್ವರ’ ಬಂದಂತೆ. ಈ ಮಾಸದಲ್ಲಿ ಬಹುತೇಕರ ಮನೆಗಳಲ್ಲಿ ಮಾಂಸಾಹಾರ ವರ್ಜ್ಯ. ಮಧ್ಯ ಕರ್ನಾಟಕ, ಮಂಡ್ಯ, ಮೈಸೂರು, ಉತ್ತರ ಕರ್ನಾಟಕ ಭಾಗಗಳಲ್ಲಿ ಆ ಒಂದು ತಿಂಗಳು ಎಷ್ಟೇ ಕಷ್ಟವೆನಿಸಿದರೂ ಬಾಡೂಟಕ್ಕೆ ರಜೆ ಹಾಕಲೇಬೇಕು. ಶ್ರಾವಣ ಕಳೆದು ‘ಗಣಪತಿ’ (ಗಣೇಶ ಚತುರ್ಥಿ) ಮನ– ಮನೆಗಳಿಗೆ ಅಡಿಯಿಟ್ಟು, ಮೂರು ದಿನವೋ ಐದು ದಿನವೋ ಕಳೆದ ಬಳಿಕ, ಅವನನ್ನು ನೀರಲ್ಲಿ ಮುಳುಗಿಸಿದ ಮಾರನೇ ದಿನವೇ ‘ಕರಿ ದಿನ’ ಮನೆಮನೆಗಳಲ್ಲಿ ಕಳೆಗಟ್ಟುತ್ತದೆ. ‘ಪಥ್ಯ’ದ ದಿನಗಳು ಒಮ್ಮೆಲೇ ದೂರವಾದಂತೆ, ಎಷ್ಟೋ ವರ್ಷಗಳಿಂದ ತಿಂದೇ ಇಲ್ಲವೇನೋ ಎನ್ನುವಂತೆ, ಆ ದಿನಕ್ಕಾಗಿ ಹಪಹಪಿಸುತ್ತಿದ್ದವರಂತೆ ಮಾಡುವ ‘ಬಾಡೂಟ’ದ ಘಮ್ಮತ್ತೇ ಅಂಥದ್ದು...

ಶ್ರಾವಣ ಮಾಸದ ದಿನಗಳಲ್ಲಿ ‘ಮಾಂಸದೂಟ’ಕ್ಕೆ ಪರ್ಯಾಯವಾಗಿ ಕೆಲವರು ಮಶ್ರೂಮ್ಗೆ ಮೊರೆ ಹೋಗುವುದುಂಟು. ಜತೆಗೆ ಕಡಲೆಹಿಟ್ಟಿನಲ್ಲೇ ಕೈಮಾ ಉಂಡೆ ಮಾಡಿ, ಮಂಸಾಹಾರದ ಮಸಾಲೆ ಹಾಕಿ ‘ಹಿಟ್ಟಿನ ಸಾಂಬಾರ್’ ಮಾಡಿ ಸವಿಯುವವರೂ ಉಂಟು. ಮೊಳಕೆ ಬರಿಸಿದ ಹುರುಳಿಕಾಳು, ಆಲೂಗಡ್ಡೆಗೆ ಮಟನ್ ಮಸಾಲೆ ಬೆರೆಸಿ ತಯಾರಿಸುವವರೂ ಅನೇಕರು. ಅದೇನೇ ತಿಂದರೂ ಮಾಂಸಾಹಾರದ ಅರೋಮ ಬಾರದು, ಪರಿಪೂರ್ಣ ಊಟ ಎಂದೆನಿಸದು. ಅದಕ್ಕಾಗಿ ‘ಕರಿ ದಿನ’, ‘ವರ್ಷದ ತೊಡಕು’ ಹಬ್ಬ ಕಳೆಗಟ್ಟುತ್ತದೆ.

ಈ ಹಬ್ಬಕ್ಕೆ ಚಿಕನ್ ಗ್ರೇವಿ, ಮಟನ್ ಸಾಂಬಾರ್, ಬಿರಿಯಾನಿ ಮಾಡುವವರೇ ಹೆಚ್ಚು. ಈ ಬಾರಿ ಮೀನಿನ ರೆಸಿಪಿ ಮಾಡಿ ಸವಿಯಿರಿ ಎನ್ನುತ್ತಾರೆ ‘ಮಂಗಳೂರು ರಶ್ಮಿ ರೆಸಿಪಿ’ ಯೂಟ್ಯೂಬ್ ಚಾನೆಲ್ನ ರಶ್ಮಿ. ‘ಮೀನಿನೂಟ’ವೆಂದರೆ ಇಷ್ಟ, ಆದರೆ, ಅದರ ಮುಳ್ಳುಗಳನ್ನು ತೆಗೆದು ಪದಾರ್ಥ ತಯಾರಿಸುವುದು ಬಹುತೇಕರಿಗೆ ಕಷ್ಟ. ಹೊಸದಾಗಿ ಮೀನಿನ ಖಾದ್ಯ ಮಾಡಲು ಮುಂದಾಗುವವರಿಗೂ ಅನುಕೂಲವಾಗುವಂತೆ, ಮುಳ್ಳುಗಳನ್ನು ಸುಲಭವಾಗಿ ತೆಗೆಯುವ ವಿಧಾನವನ್ನು ಹಂಚಿಕೊಂಡಿದ್ದಾರೆ ರಶ್ಮಿ. ಒಂದೊಂದು ಬಗೆಯ ಮೀನನ್ನೂ ಸ್ವಚ್ಛಗೊಳಿಸುವ ವಿಧಾನ ಬೇರೆ ಬೇರೆ. ಆ ಎಲ್ಲವನ್ನೂ ಸಹಜವಾಗಿ ಹೇಳಿಕೊಡುವ ಅವರ ಶೈಲಿ ಬಹುತೇಕರನ್ನು ಸೆಳೆದಿದೆ.

ತುಳುನಾಡಿನವರಾದ ರಶ್ಮಿ ತರಾವರಿ ಮೀನಿನ ರೆಸಿಪಿಗಳನ್ನು ಮತ್ಸ್ಯಪ್ರಿಯರ ಮುಂದಿಟ್ಟಿದ್ದಾರೆ. ಬೂತಾಯಿ, ಪಾಂಪ್ಲೆಟ್, ಅಂಜಲ್, ಸ್ಕ್ವಿಡ್ ಫಿಶ್, ಬಂಗುಡೆ, ಕಾಣೆ, ಬೊಂಡಾಸ್, ಕಲ್ಲೂರು, ಕೊಡ್ಡಾಯಿ, ಮಾಂಜಿ, ಬೊಳಂಜೀರ್, ಕೊಲ್ಲತ್ತರು, ಡಿಸ್ಕೊ, ಮುರು, ಬೆರಕೆ ( ಅನೇಕ ಬಗೆಯ ಸಣ್ಣ ಸಣ್ಣ ಮೀನುಗಳು)... ಹೀಗೆ ಹಲವು ಬಗೆಯ ಮೀನುಗಳು ಇವರ ಪಾಕಶಾಲೆಯಲ್ಲಿ ಪ್ರಯೋಗಕ್ಕೆ ಒಡ್ಡಿಕೊಂಡಿವೆ. ಮೀನು ತಿನ್ನುವುದು ಹೇಗೆ, ಯಾವುದರಲ್ಲಿ ಹೆಚ್ಚು ಮುಳ್ಳಿರುತ್ತದೆ, ಯಾವುದರಲ್ಲಿ ಕಡಿಮೆ ಇರುತ್ತದೆ, ಮಕ್ಕಳಿಗೆ ಯಾವ ಬಗೆಯ ಮೀನು ಕೊಡಬಹುದು... ಹೀಗೆ ಮೀನಿನ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡಿರುವ ಅವರಿಗೆ ಬೂತಾಯಿ ಮೀನೆಂದರೆ ಅಚ್ಚುಮೆಚ್ಚು. ಹೀಗಾಗಿ , ಅವರ ಅಡುಗೆ ಮನೆಯಲ್ಲಿ ಇದೇ ಅತಿಹೆಚ್ಚು ಬಾರಿ ಕಾಣಿಸಿಕೊಂಡಿದೆ. ತವಾ ಫ್ರೈ, ರವಾ ಫ್ರೈ, ಡೀಪ್ ಫ್ರೈ, ಘೀ ರೋಸ್ಟ್, ಮೀನು ಕರಿ, ಪುಳಿಮುಂಜಿ, ಮೀನ್ಸಾರು, ಸುಟ್ಟ ಮೀನು... ಹೀಗೆ ಅವರು ತೋರಿಸಿರುವ ಬಗೆಬಗೆ ಖಾದ್ಯಗಳು ನೋಡುಗರ ಬಾಯಿಯಲ್ಲಿ ನೀರೂರಿಸುತ್ತವೆ.

‘ಮೀನು ತಿನ್ನು ಬುದ್ಧಿ ಚುರುಕಾಗುತ್ತೆ’ ಎಂದು ಮಂದಬುದ್ಧಿಯವರಿಗೆ ಹೇಳುವುದುಂಟು. ಮೀನು ತಿನ್ನುವುದರಿಂದ ಬುದ್ಧಿ ಚುರುಕಾಗುತ್ತದೊ ಇಲ್ಲವೊ, ಆದರೆ ಆರೋಗ್ಯವರ್ಧನೆಯಂತೂ ಖಂಡಿತ. ಸಂತುಲಿತ, ಸಮತೋಲಿತ ಆಹಾರಗಳಲ್ಲಿ ಮೀನು ಅಗ್ರಗಣ್ಯ ಎಂದೇ ಹೇಳಬಹುದು. ಜತೆಗೆ ಮೀನಿನ ಖಾದ್ಯ ತಯಾರಿಯೂ ಸುಲಭ. ಮೀನು ಸ್ವಚ್ಛಗೊಳಿಸಿದ ಬಳಿಕ ಯಾವುದೇ ಬಗೆಯ ಖಾದ್ಯವಾದರೂ 20ರಿಂದ 30 ನಿಮಿಷದೊಳಗೆ ಸಿದ್ಧಪಡಿಸಬಹುದು.

‘ನಾವು ಮಾಡೊ ಎಲ್ಲ ಪದಾರ್ಥಗಳೂ ಹೊಟ್ಟೆಯನ್ನೇನೋ ತುಂಬಿಸ್ತವೆ. ಆದ್ರೆ ಮನಸ್ಸು ತುಂಬಬೇಕಲ್ಲ. ರುಚಿಯಾಗಿ ಮಾಡಿದ್ರೆ ಮಾತ್ರವೇ ಮನಸ್ಸು ತುಂಬೋದು. ನಿತ್ಯ ಮನೆಯಲ್ಲೇ ಮಾಡುವಂಥದ್ದನ್ನ ನಿಮ್ಮ ಮುಂದೆ ತೋರಿಸ್ತೇನೆ. ಯಾವ ಅಡುಗೆಯಲ್ಲಾದರೂ ಹೊಸತನ ಬಯಸ್ತೇನೆ. ಅದನ್ನೇ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ನೀವು ಯಾವ ರೆಸಿಪಿ ತೋರ್ಸಿದ್ರೂ ರುಚಿಯಾಗಿ ಬರ್ತದೆ ಎಂದು ವೀಕ್ಷಕರು ಹೇಳುವಾಗ ಖುಷಿ ಆಗ್ತದೆ. ನನ್ನ ಅಮ್ಮಂದಿರ ವಯಸ್ಸಿನ ಕೆಲವರೂ ನನ್ನ ರೆಸಿಪಿ ಮಾಡಿ ಕಲಿತದ್ದಿದೆ. ಆಗ ಅವರ ಪ್ರತಿಕ್ರಿಯೆ ನೋಡಿ ತುಂಬಾ ಖುಷಿ ಅನಿಸ್ತದೆ. ನನ್ನ ಕಾರ್ಯಕ್ಕೆ ಸಾರ್ಥಕತೆ ಸಿಕ್ಕಹಾಗೆ ಆಗ್ತದೆ’ ಎನ್ನುತ್ತಾ ನಗೆ ಬೀರಿದರು ರಶ್ಮಿ.

982 ಪಾಕ ವಿಧಾನಗಳನ್ನು ಯೂಟ್ಯೂಬ್ ಅಂಗಳದಲ್ಲಿ ಹಂಚಿಕೊಂಡಿರುವ ರಶ್ಮಿ, ಮೀನಿನ ಖಾದ್ಯಗಳಲ್ಲದೇ ಅಕ್ಕಿ, ಉದ್ದಿನಬೇಳೆಯಲ್ಲಿ ಮಾಡುವ ಸಾಂಪ್ರದಾಯಿಕ ರೆಸಿಪಿಯಾದ ಮೂಡೆ, ಮಂಗಳೂರು ಇಡ್ಲಿ ಜೊತೆಗೆ ಕೋಳಿ ಸಾರು, ಮಟನ್ ಬಾಡೂಟ, ಕೇಟರಿಂಗ್ ಶೈಲಿಯ ಮಟನ್ ಗ್ರೇವಿ, ಮೆದು ಕೋಳಿ ಸಾರು, ಘಮಘಮ ಮಟನ್ ಗಸಿ... ಹೀಗೆ ರುಚಿಭರಿತ ರೆಸಿಪಿಗಳನ್ನು ಹೇಳಿಕೊಟ್ಟಿದ್ದಾರೆ.

ಬೂತಾಯಿ ಮೀನಿನ ಸುಕ್ಕ

ಜಂಜಿ ಸುಕ್ಕ, ಎಟ್ಟಿ ಸುಕ್ಕ, ಮರವಾಯಿ ಸುಕ್ಕದ ಬಗೆಗೆ ನೀವು ಕೇಳಿರಬಹುದು, ಆದರೆ ಬೂತಾಯಿ ಮೀನಿನ ಸುಕ್ಕ ಮಾಡಿರಲಿಕ್ಕಿಲ್ಲ. ಮೀನುಪ್ರಿಯರಿಗಂತೂ ಇದು ತುಂಬಾ ಸ್ಪೆಷಲ್. ರಶ್ಮಿ ಅವರ ಮುತ್ತಜ್ಜಿ ಕಾಲದ ಈ ಸಾಂಪ್ರದಾಯಿಕ ರೆಸಿಪಿ ತಯಾರಿಸುವ ವಿಧಾನ ನಿಮಗಾಗಿ:

ಬೇಕಾಗುವ ಸಾಮಗ್ರಿ: ಅರ್ಧ ಕೆ.ಜಿ. ಬೂತಾಯಿ ಮೀನಿನಲ್ಲಿ ಸುಕ್ಕ ತಯಾರಿಸಲು– 15 ಒಣಮೆಣಸಿನ
ಕಾಯಿ, ಒಂದು ಚಮಚ ಕೊತ್ತಂಬರಿ ಬೀಜ, 1/4 ಚಮಚ ಮೆಂತ್ಯ ಕಾಳು, ಮುಕ್ಕಾಲು ಚಮಚ ಜೀರಿಗೆ, 4–5 ಕಾಳುಮೆಣಸು, ಚಿಟಿಕೆ ಓಂಕಾಳು, ನಿಂಬೆಹಣ್ಣು ಗಾತ್ರದಷ್ಟು ಹುಣಿಸೆಹಣ್ಣು, ಅರಸಿನ, ಉಪ್ಪು.

ಒಗ್ಗರಣೆಗೆ: ಒಂದು ಚಮಚದಷ್ಟು ಶುಂಠಿ– ಬೆಳ್ಳುಳ್ಳಿ ಪೇಸ್ಟ್, ಸಣ್ಣದಾಗಿ ಕತ್ತರಿಸಿದ ಎರಡು ಈರುಳ್ಳಿ, ಅರ್ಧ ಕರಟದಷ್ಟು ಹಸಿ ಕಾಯಿತುರಿ.

ಬಾಣಲೆಯಲ್ಲಿ ಒಣಮೆಣಸಿನಕಾಯಿ, ಕೊತ್ತಂಬರಿ ಬೀಜ, ಮೆಂತ್ಯ, ಜೀರಿಗೆ, ಮೆಣಸು, ಓಂಕಾಳು ಹಾಕಿ ಡ್ರೈ ರೋಸ್ಟ್ ಮಾಡಿಕೊಳ್ಳಬೇಕು. ಇದು ತಣ್ಣಗಾದ ಬಳಿಕ ಸಣ್ಣಗೆ ಪುಡಿಮಾಡಿಕೊಳ್ಳಬೇಕು. 2– 3 ಚಮಚ ಪುಡಿ, ಅದಕ್ಕೆ 3 ಚಮಚ ಹುಣಿಸೆರಸ, ಅರ್ಧ ಚಮಚ ಅರಸಿನ, ಉಪ್ಪು ಹಾಕಿ ಗಟ್ಟಿಯಾಗಿ ಕಲೆಸಬೇಕು. ಇದಕ್ಕೆ ತೊಳೆದಿಟ್ಟ ಮೀನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಾನ್ಸ್ಟಿಕ್ ತವಾದಲ್ಲಿ ಎಣ್ಣೆ ಬಿಸಿ ಮಾಡಿ. ಬಳಿಕ ಮಸಾಲೆಯಲ್ಲಿ ಮಿಕ್ಸ್ ಮಾಡಿಟ್ಟ ಮೀನನ್ನು ತವಾ ಮೇಲೆ ಹಾಕಿ, ಹೈ ಫ್ಲೇಮ್ನಲ್ಲಿ ಇಟ್ಟು ಎರಡೂ ಕಡೆ ಫ್ರೈ ಮಾಡಿದ ಬಳಿಕ, ಸಣ್ಣ ಉರಿಯಲ್ಲಿ ಮತ್ತೆ ಫ್ರೈ ಮಾಡಬೇಕು. ಮಸಾಲೆ ಪುಡಿ ಉಳಿದಿದ್ದರೆ ಅದರ ಮೇಲೆ ಉದುರಿಸಬಹುದು.

ಇನ್ನೊಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಶುಂಠಿ– ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಈರುಳ್ಳಿ, ಕಾಯಿತುರಿ ಹಾಗೂ ಉಳಿದ ಮಸಾಲೆಪುಡಿ ಹಾಕಿ ಎರಡು ನಿಮಿಷ ಚೆನ್ನಾಗಿ ಹುರಿದುಕೊಳ್ಳಬೇಕು. ನಂತರ ಹುಣಿಸೆರಸ, ಅರಸಿನ, ಉಪ್ಪು ಹಾಕಿ ಕೈಯಾಡಬೇಕು. ತಟ್ಟೆ ಮುಚ್ಚಿ ಎರಡು ನಿಮಿಷ ಬೇಯಲು ಬಿಡಬೇಕು. ಚೆನ್ನಾಗಿ ಬೆಂದ ಈ ಮಸಾಲೆಗೆ ಫ್ರೈ ಮಾಡಿದ ಮೀನು ಹಾಕಿ ಪುಡಿಯಾಗದಂತೆ ನಾಜೂಕಾಗಿ ಮಿಕ್ಸ್ ಮಾಡಬೇಕು. ಕುಚಲಕ್ಕಿ ಅನ್ನದೊಂದಿಗೆ ಬೂತಾಯಿ ಮೀನಿನ ಸುಕ್ಕ ಸವಿದರೆ ಹೆಚ್ಚು ರುಚಿಕರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.