ಕಲ್ಲಂಗಡಿ ಹಣ್ಣು ಬೇಸಿಗೆ ಕಾಲಕ್ಕೆ ಒಳ್ಳೆಯದು. ಇದು ರುಚಿಯಲ್ಲಿ ಅದ್ಭುತ ಮತ್ತು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿದೆ. ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿರುವಂತೆ ಸಹಾಯ ಮಾಡುತ್ತದೆ. ಇವುಗಳ ರೆಸಿಪಿ ನೀಡಿದ್ದಾರೆ ವೇದಾವತಿ ಎಚ್.ಎಸ್.

ಐಸ್ಕ್ರೀಮ್

ಬೇಕಾಗುವ ಸಾಮಗ್ರಿಗಳು: ಎರಡೂವರೆ ಕಪ್ ಕಲ್ಲಂಗಡಿ ಹಣ್ಣಿನ ರಸ, 200ಗ್ರಾಂ ಮಿಲ್ಕ್ ಮೇಡ್.

ತಯಾರಿಸುವ ವಿಧಾನ: ಕಲ್ಲಂಗಡಿ ಹಣ್ಣಿನ ಬೀಜವನ್ನು ತೆಗೆದು ಚಿಕ್ಕದಾಗಿ ಕ್ಯೂಬ್ ರೀತಿಯಲ್ಲಿ ಹೆಚ್ಚಿ. ಬಳಿಕ ರೆಫ್ರಿಜರೇಟರ್ನಲ್ಲಿ ಎರಡರಿಂದ ಮೂರು ಗಂಟೆ ಇಡಿ. ನಂತರ ಹಣ್ಣನ್ನು ಮಿಕ್ಸಿ ಜಾರಿಗೆ ಹಾಕಿ ರಸವನ್ನು ತಯಾರಿಸಿಕೊಳ್ಳಿ. ಈ ರಸಕ್ಕೆ ಮಿಲ್ಕ್ ಮೇಡ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಒಂದು ಬಾಕ್ಸಿಗೆ ಮಿಶ್ರಣವನ್ನು ಹಾಕಿ ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ. ಇದನ್ನು ಎಂಟು ಗಂಟೆ ಡೀ ಪ್ರೀಜರ್ನಲ್ಲಿಡಿ. ಬಳಿಕ ಐಸ್ಕ್ರೀಮ್ ಸ್ಕೂಪ್ನಲ್ಲಿ ತೆಗೆದು ಸರ್ವಿಂಗ್ ಬೌಲಿಗೆ ಹಾಕಿ ಸವಿಯಿರಿ.

ಮೊಜಿಟೊ

ಬೇಕಾಗುವ ಸಾಮಗ್ರಿಗಳು: 1 ಟೀ ಚಮಚ ನಿಂಬೆರಸ, ಕಲ್ಲಂಗಡಿ ಹಣ್ಣು 1 ಕಪ್ ಕ್ಯೂಬ್ಆಗಿ ಕತ್ತರಿಸಿದ್ದು, ಪುದೀನ ಎಲೆ 20, 2 ರಿಂದ 3 ಟೀ ಚಮಚ ಸಕ್ಕರೆ ಪುಡಿ, ಐಸ್ ಕ್ಯೂಬ್ 1/2 ಗ್ಲಾಸ್, ನಿಂಬೆ ಹಣ್ಣಿನ ಹೋಳು 2, ಸೋಡಾ 1/2 ಕಪ್, ಚಿಟಿಕೆ ಉಪ್ಪು.

ತಯಾರಿಸುವ ವಿಧಾನ: ಒಂದು ಗ್ಲಾಸ್ ತೆಗೆದುಕೊಂಡು ಕಲ್ಲಂಗಡಿ ಹಣ್ಣಿನ ತುಂಡುಗಳು, 15 ಪುದೀನ ಎಲೆ, ಸಕ್ಕರೆ ಪುಡಿ, ನಿಂಬೆರಸ ಮತ್ತು ಉಪ್ಪನ್ನು ಸೇರಿಸಿ 1 ರಿಂದ 2 ನಿಮಿಷ ನಿಧಾನವಾಗಿ ಕುಟ್ಟಿ ಪುಡಿ ಮಾಡಿ ರಸವನ್ನು ತಯಾರಿಸಿಕೊಳ್ಳಿ. ಈ ರಸಕ್ಕೆ ಐಸ್ ಕ್ಯೂಬ್ ಮತ್ತು ಸೋಡ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಸವಿಯಿರಿ.

ಕಲ್ಲಂಗಡಿ ಹಣ್ಣಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು: ಮಧ್ಯಮ ಗಾತ್ರದ ಕಲ್ಲಂಗಡಿ ಹಣ್ಣು 1, ಸಕ್ಕರೆ 4 ಟೇಬಲ್ ಚಮಚ, 20 ರಿಂದ 25 ಪುದೀನ ಎಲೆಗಳು, ನಿಂಬೆಹಣ್ಣು 1/2, ಬ್ಲ್ಯಾಕ್ ಸಾಲ್ಟ್ 1/4 ಟೀ ಚಮಚ, ಕಾಳುಮೆಣಸಿನ ಪುಡಿ 1/4 ಟೀ ಚಮಚ, ಐಸ್ ಕ್ಯೂಬ್ ಸ್ವಲ್ಪ.

ತಯಾರಿಸುವ ವಿಧಾನ: ಕಲ್ಲಂಗಡಿ ಹಣ್ಣಿನ ಬೀಜವನ್ನು ತೆಗೆದು ಚಿಕ್ಕದಾಗಿ ಕತ್ತರಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ. ಬಳಿಕ ಸಕ್ಕರೆ, ಪುದೀನ ಎಲೆ, ನಿಂಬೆರಸ, ಬ್ಲ್ಯಾಕ್ ಸಾಲ್ಟ್, ಕಾಳುಮೆಣಸಿನ ಪುಡಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಸರ್ವಿಂಗ್ ಗ್ಲಾಸಿಗೆ ಐಸ್ ಕ್ಯೂಬ್ ಮತ್ತು ತಯಾರಿಸಿದ ಜ್ಯೂಸ್ ಹಾಕಿ ಪುದೀನ ಸೊಪ್ಪಿನಿಂದ ಅಲಂಕರಿಸಿ ಸವಿಯಿರಿ.

ರಿಫ್ರೆಶಿಂಗ್ ಶೇಕ್

ಬೇಕಾಗುವ ಸಾಮಗ್ರಿಗಳು: ಬಾದಾಮಿ ಮತ್ತು ಗೋಡಂಬಿ ಹತ್ತರಂತೆ ತೆಗೆದುಕೊಂಡು ನೀರಿನಲ್ಲಿ ಒಂದು ಗಂಟೆ ನೆನೆಸಿ. ಬಾದಾಮಿ ಸಿಪ್ಪೆ ಬಿಡಿಸಿಕೊಳ್ಳಿ. ಬಳಿಕ ಅವುಗಳನ್ನು ಮಿಕ್ಸಿಯಲ್ಲಿ ಹಾಕಿ 1/4 ಕಪ್ ಹಾಲನ್ನು ಸೇರಿಸಿ ನುಣ್ಣಗೆ ಪೇಸ್ಟ್ ತಯಾರಿಸಿಕೊಳ್ಳಿ. ಚಿಕ್ಕದಾಗಿ ಹೆಚ್ಚಿದ ಕಲ್ಲಂಗಡಿ ಹಣ್ಣು 1 ಕಪ್, ಹಾಲು 1/2 ಕಪ್, ಬೇಸಿಲ್ ಸೀಡ್ಸ್ 1 ಟೇಬಲ್ ಚಮಚ, 1/2 ಕಪ್ ನೀರು, ಸಕ್ಕರೆ 1/4 ಕಪ್ (ನಿಮ್ಮ ಸಿಹಿಗೆ ಅನುಗುಣವಾಗಿ ಹಾಕಿ), ಬಾದಾಮಿ ಮತ್ತು ಪಿಸ್ತಾ ಚೂರುಗಳು ಒಂದೊಂದು ಟೇಬಲ್ ಚಮಚ, 2 ಟೇಬಲ್ ಚಮಚ ರೋಸ್ ಸಿರಪ್, ಸ್ವಲ್ಪ ಐಸ್ ಕ್ಯೂಬ್.

ತಯಾರಿಸುವ ವಿಧಾನ: ಬೇಸಿಲ್ ಸೀಡ್ಸ್ಗೆ ನೀರನ್ನು ಹಾಕಿ 5 ನಿಮಿಷ ಬಿಡಿ. ಬಾಣಲೆಗೆ ಹಾಲನ್ನು ಹಾಕಿ ಕುದಿಸಿ. ಬಳಿಕ ಸಕ್ಕರೆ, ತಯಾರಿಸಿಕೊಂಡ ಗೋಡಂಬಿ ಮತ್ತು ಬಾದಾಮಿ ಪೇಸ್ಟ್ ಮತ್ತು ಬಾದಾಮಿ ಮತ್ತು ಪಿಸ್ತಾದ ಚೂರುಗಳನ್ನು ಸೇರಿಸಿ ಕುದಿಸಿ. ಬಳಿಕ ಆರಲು ಬಿಡಿ. ಹಾಲಿನ ಮಿಶ್ರಣವನ್ನು ಒಂದು ಗಂಟೆ ರಿಫ್ರಿಜರೇಟರ್ನಲ್ಲಿಡಿ. ಬಳಿಕ ಫ್ರಿಜ್ನಿಂದ ತಗೆದು ಕಲ್ಲಂಗಡಿ ಹಣ್ಣು, ಬೇಸಿಲ್ ಸೀಡ್ಸ್, ರೋಸ್ ಸಿರಪ್, ಐಸ್ ಕ್ಯೂಬ್ ಸೇರಿಸಿ ಮಿಶ್ರಣ ಮಾಡಿ. ಬಳಿಕ ಸರ್ವಿಂಗ್ ಗ್ಲಾಸಿಗೆ ಹಾಕಿ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.