ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಸಂಕ್ರಾಂತಿ ಪಾಕ ಸ್ಪರ್ಧೆ ವಿಜೇತರು

Last Updated 3 ಫೆಬ್ರುವರಿ 2022, 13:09 IST
ಅಕ್ಷರ ಗಾತ್ರ

ಬೆಂಗಳೂರು: ಸಂಕ್ರಾಂತಿ ಪ್ರಯುಕ್ತ Prajavani.net ಏರ್ಪಡಿಸಿದ್ದ ಪ್ರಜಾವಾಣಿ ಪಾಕ ಸ್ಪ ರ್ಧೆಯಲ್ಲಿ ಬೆಂಗಳೂರಿನ ಅಮೃತಾ ಎಸ್.ದೊಡ್ಮನಿ ಅವರು ಪ್ರಥಮ ಬಹುಮಾನ ಗಳಿಸಿದ್ದಾರೆ. ಬೆಂಗಳೂರಿನ ವೈದೇಹಿ ಎನ್. ದ್ವಿತೀಯ ಬಹುಮಾನವನ್ನೂ, ಕಾರವಾರದ ಗಾಯತ್ರಿ ಆರ್.ಹೊವಳೆ ಅವರು ತೃತೀಯ ಬಹುಮಾನವನ್ನೂ ಗೆದ್ದುಕೊಂಡಿದ್ದಾರೆ.

ಸಂಕ್ರಾಂತಿ ಪ್ರಯುಕ್ತ ವಿಶೇಷ ಪಾಕ ಅಥವಾ ವ್ಯಂಜನಗಳ ಕುರಿತಾಗಿ ಸೂಕ್ತ ವಿವರಣೆಯೊಂದಿಗೆ ವಿಡಿಯೊ ಮಾಡಿ ಕಳುಹಿಸುವಂತೆ ಪ್ರಜಾವಾಣಿಯು ಓದುಗರಿಗೆ ಆಹ್ವಾನ ನೀಡಿದ್ದು, ನೂರಾರು ಮಂದಿ ಉತ್ಸಾಹದಿಂದ ಭಾಗವಹಿಸಿದ್ದರು. ಮೊದಲ ಮೂವರು ವಿಜೇತರಿಗೆ ಅನುಕ್ರಮವಾಗಿ ಮೈಕ್ರೋವೇವ್ ಓವೆನ್, ಫುಡ್ ಪ್ರೊಸೆಸರ್ ಹಾಗೂ ಗ್ಲಾಸ್ ಟಾಪ್ ಸ್ಟವ್ ನೀಡಲಾಗುತ್ತದೆ.

ಪಾಕಗಳ ವಿಡಿಯೊ ಕಳುಹಿಸಿದವರಲ್ಲಿ ಹೆಚ್ಚಿನವರ ವಿಶೇಷ ಅಡುಗೆಗಳು ಅತ್ಯುತ್ತಮವಾಗಿದ್ದವು. ವಿಜೇತರನ್ನು ಆಯ್ಕೆ ಮಾಡುವುದೇ ಸವಾಲಾಗಿದ್ದುದರಿಂದ ಅತ್ಯುತ್ತಮ ವಿಡಿಯೊಗಳಲ್ಲಿ ಹತ್ತು ವ್ಯಂಜನಗಳ ವಿಡಿಯೊಗಳನ್ನು ಆಯ್ಕೆ ಮಾಡಲಾಯಿತು. ಅವರೆಲ್ಲರಿಗೂ ತಲಾ 1 ಸಾವಿರ ರೂ. ಮೌಲ್ಯದ ಅಮೆಜಾನ್ ಗಿಫ್ಟ್ ವೋಚರ್ ನೀಡಲಾಗುತ್ತದೆ.

ಗಿಫ್ಟ್ ವೋಚರ್ ಗೆದ್ದುಕೊಂಡ 10 ಮಂದಿ ಅದೃಷ್ಟಶಾಲಿಗಳು (ಜಿಲ್ಲೆಯ ಹೆಸರಿನೊಂದಿಗೆ): ಅಖಿಲಾ ಸಾಗರ್ ರಾಯಚೂರು, ಚೇತನಾ ಎಂ.ಪಾಟೀಲ ಬೆಂಗಳೂರು ಗ್ರಾಮಾಂತರ, ಯಶಸ್ವಿನಿ ಜೆ.ಶೆಟ್ಟಿ ಚಿಕ್ಕಮಗಳೂರು, ಅಪೂರ್ವ ಕೆ.ಆರ್. ಬೆಂಗಳೂರು ನಗರ, ಸಾಧನಾ ಜಗನ್ನಾಥ್ ಗದಗ, ಆಯಿಷಾ ಖಾನ್ ಹಾಸನ, ಸುಷ್ಮಾ ಶಾನುಭಾಗ್ ಉತ್ತರ ಕನ್ನಡ, ಸೌಮ್ಯಾ ಶಿಗ್ಗಾಂವಕರ್ ಹಾಸನ, ಹೇಮಾಕ್ಷಿ ಕೆ.ಕೆರೇಸೂರ್ ಧಾರವಾಡ, ರುದ್ರೇಶ್ ಕೆ. ಬಳ್ಳಾರಿ

ನಾಡಿನಾದ್ಯಂತ ಉತ್ಸಾಹದಿಂದ ಭಾಗವಹಿಸಿದ ಸ್ಪರ್ಧಾಳುಗಳೆಲ್ಲರನ್ನೂ ಪ್ರಜಾವಾಣಿ ಅಭಿನಂದಿಸುತ್ತದೆ. ವಿಜೇತ ವಿಡಿಯೊಗಳೂ ಸೇರಿದಂತೆ, ಮೆಚ್ಚುಗೆ ಗಳಿಸಿದ ಎಲ್ಲ ವಿಡಿಯೊಗಳು Prajavani.net ತಾಣದಲ್ಲಿ ಶೀಘ್ರದಲ್ಲೇ ಲಭ್ಯವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT