ಪ್ರೇಮಿಗಳ ದಿನಕ್ಕೆ ಭೋಜನದ ಮಜಾ

7

ಪ್ರೇಮಿಗಳ ದಿನಕ್ಕೆ ಭೋಜನದ ಮಜಾ

Published:
Updated:
Prajavani

ನಗರದ ಕೆಲವು ಹೋಟೆಲ್‌ಗಳು ಪ್ರೇಮಿಗಳ ದಿನವನ್ನು ಅವಿಸ್ಮರಣೀಯವಾಗಿಸಲು ವಿಶೇಷ ಮೆನುವಿನೊಂದಿಗೆ ಗ್ರಾಹಕರನ್ನು ಬರಮಾಡಿಕೊಳ್ಳಲಿವೆ. ನಿಮಗೆ ಯಾವ ಹೋಟೆಲ್‌ ಇಷ್ಟವಾಗುತ್ತದೋ ನೋಡಿ, ಹೋಗಿ ಊಟ ಮಾಡಿ ಹರಟೆ ಹೊಡೆದು, ಈ ದಿನದ ಭೋಜನವೂ ನೆನಪಿನಲ್ಲಿರುವಂತೆ ಮಾಡಿಕೊಳ್ಳಿ.

‘ಸಿಂಗಲ್‌ ಪಾರ್ಟಿ’

ಸೇಂಟ್‌ ಮಾರ್ಕ್ಸ್‌ ರಸ್ತೆಯಲ್ಲಿರುವ ‘ದಿ ಓಪನ್ ಬಾಕ್ಸ್‌’ ಪ್ರೇಮಿಗಳ ದಿನಕ್ಕಾಗಿ ‘ಸಿಂಗಲ್ಸ್ ಪಾರ್ಟಿ’ ಆಯೋಜಿಸಿದೆ. ಇದಕ್ಕಾಗಿ ವಸ್ತ್ರಸಂಹಿತೆಯನ್ನೂ ಅದು ಹೇಳಿದೆ. ಪಾರ್ಟಿಗೆ ಹೋಗಲಿಚ್ಚಿಸುವ ಏಕಾಂಗಿಗಳು ಸುಂದರವಾದ ಕ್ಯಾಷುವಲ್‌ ಉಡುಪಿನಲ್ಲಿರಬೇಕಂತೆ. ಹಳದಿ ಉಡುಪು ಧರಿಸಿದವರು ಪ್ರೇಮ ವೈಫಲ್ಯ, ಬಿಳಿ ಬಣ್ಣ ಒಂಟಿಯಾಗಿರಲು ಖುಷಿ, ಕೆಂಪು– ನಾನು ಒಂಟಿ ಆದರೆ ಜಂಟಿಯಾಗಲು ಸಿದ್ಧ ಎಂಬ ಸಂದೇಶವನ್ನು ರವಾನಿಸುತ್ತದೆಯಂತೆ. ಹಾಗಾಗಿ ಏಕಾಂಗಿಗಳು ತಮಗಿಷ್ಟದ ಬಣ್ಣದ ಉಡುಪು ಧರಿಸಬಹುದು. ಈ ವಸ್ತ್ರಸಂಹಿತೆಯನ್ನು ಅನುಸರಿಸದೇ ಇರುವವರಿಗೆ ಮಧುರವಾದ ಶಿಕ್ಷೆಯೂ ಇರುತ್ತದೆ ಎಂದು ಹೋಟೆಲ್‌ ಹೇಳಿದೆ.

ಮೆನುವಿನೊಂದಿಗೆ ವಿಶೇಷವಾದ ಕಾಕ್‌ಟೇಲ್‌ ಇಲ್ಲಿ ಲಭ್ಯ. ಅವುಗಳೂ ಬಿಳಿ, ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ ಇರುತ್ತವೆ. ರಾತ್ರಿ 8.30ರಿಂದ ಪಾರ್ಟಿ ಶುರು. ಆಸನ ಕಾಯ್ದಿರಿಸಲು: 090089 93666.

ವಿಶೇಷ ರಾತ್ರಿಯೂಟಕ್ಕಾಗಿ: ಇಂದಿರಾನಗರದಲ್ಲಿರುವ ‘ದಿ ಓಪನ್‌ ಬಾಕ್ಸ್‌– ಮಿಸು’ ರೆಸ್ಟೋರೆಂಟ್‌ ಗುರುವಾರ ರಾತ್ರಿ 8ರಿಂದ ವಿಶೇಷ ಡಿನ್ನರ್‌ ಉಣಬಡಿಸಲಿದೆ. ಊಟದೊಂದಿಗೆ ಡೆಸರ್ಟ್‌, ವೈನ್‌ ಕೂಡಾ ಲಭ್ಯ. 

1ಎಂಜಿ ಮಾಲ್‌ನಲ್ಲಿ...

ಮಹಾತ್ಮ ಗಾಂಧಿ ರಸ್ತೆಯಲ್ಲಿ 1 ಎಂಜಿ ಮಾಲ್‌ನಲ್ಲಿ ಯವೂಶಾ ರೆಸ್ಟೊರೆಂಟ್‌ ವೈವಿಧ್ಯಮಯ ಕಾಂಟಿನೆಂಟಲ್‌ ಆಹಾರವನ್ನು ಉಣಬಡಿಸುತ್ತದೆ. ಯುರೋಪಿಯನ್‌ ಅಡುಗೆ ಕಲೆಯನ್ನು ಏಷ್ಯಾದ ಸಾಂಬಾರ ಪದಾರ್ಥಗಳ ಸಂಯೋಜನೆ ಮಾಡುವುದು ಇಲ್ಲಿನ ವಿಶೇಷ. ಚಹಾ, ವೈನ್‌ ಮತ್ತು ಕಾಕ್‌ಟೇಲ್‌ಗಳೂ ಇಲ್ಲಿ ವಿಶಿಷ್ಟವಾಗಿರುತ್ತವೆ.

ಪ್ರೇಮಿಗಳ ದಿನವನ್ನು ಈ ರೆಸ್ಟೊರೆಂಟ್‌ ‘ಡಿಮ್‌ ಸಮ್‌ ಆ್ಯಂಡ್‌ ಮೋರ್‌’ ಕೆಫೆಯಲ್ಲಿ ಆಚರಿಸಲು ಬಯಸುವ ಖಾದ್ಯಪ್ರೇಮಿಗಳಿಗೆ ಬಗೆ ಬಗೆಯ ಮೆನು, ಕಾಕ್‌ಟೇಲ್‌ಗಳು ಕಾದಿವೆ. ಇಲ್ಲಿನ ಟೀ ಹೌಸ್‌ನಲ್ಲಿ ಲಂಡನ್‌ನ ಚಹಾಗಳನ್ನು ಹೀರಬಹುದು. ಬೇರೆ ಬೇರೆ ದೇಶಗಳ ಚಹಾಗಳ ಬಣ್ಣಗಳನ್ನೂ ಆನಂದಿಸಬಹುದು. 

ಬೀಟ್‌ರೂಟ್‌ ಮುಂತಾದ ತರಕಾರಿಗಳೊಂದಿಗೆ ಬೆಸೆದು ಸಿದ್ಧಪಡಿಸಿದ ಮಾಂಸಾಹಾರವೂ ಇಲ್ಲಿ ಸಿಗುತ್ತದೆ. ನೂಡಲ್ಸ್‌ಪ್ರಿಯರಿಗೆ ಸಿಂಗಾಪುರ, ಚೀನಾ ಶೈಲಿಯಲ್ಲಿ ಖಡಕ್‌ ಖಾರದ ನೂಡಲ್ಸ್‌ನ್ನು ಸೂಪ್‌ ಜೊತೆ ಹೀರಬಹುದು. ‘ರೋಸ್ಟ್‌ ಡಕ್‌ ಉಡಾನ್‌ ನೂಡಲ್‌’, ಸಿಂಗಾಪೂರ್‌ ಫ್ರೈಡ್‌ ನೂಡಲ್ಸ್‌’ ಇಲ್ಲಿಯ ವಿಶೇಷ. ಇದಕ್ಕೆ ಟಿಯಾನ್‌ ಶಾನ್‌ ಎಂಬ ವೋಡ್ಕಾ–ಜಿನ್‌ ಸ್ವಾದದ ಕಾಲ್‌ಟೇಲ್‌ನ್ನೂ ಜೋಡಿಯಾಗಿಸಿಕೊಳ್ಳಬಹುದು. ಡೆಸರ್ಟ್‌ಗಳನ್ನಷ್ಟೇ ಸವಿಯಲು ಇಷ್ಟಪಡುವುದಾದರೂ ಲೀಚಿ ಪೆನಾಕೋಟಾ ಇನ್‌ಸರ್ಟ್‌, ಹೇಜಲ್‌ನಟ್‌ ಬ್ರೌನಿ, ರಾಸ್ಪೆರಿ–ಲೀಚಿ ರಿಪಲ್‌ ಐಸ್‌ಕ್ರೀಂ... ಹೀಗೆ ಆಯ್ಕೆಗಳಿವೆ. 

ಗುರುವಾರ ಮಧ್ಯಾಹ್ನ 12ರಿಂದ ರಾತ್ರಿ 11.30ರವರೆಗೆ ಅವಿರತ ಸೇವೆ ಇಲ್ಲಿ ಲಭ್ಯ.

ಇನ್ನಷ್ಟು ಮಾಹಿತಿಗೆ: http://www.yauatcha.com

ಬ್ಯಾಂಡ್‌ ಸಂಗೀತದ ಜತೆ ಸವಿಯೂಟ

ದೊಡ್ಡನೆಕ್ಕುಂದಿಯ ಹೊರವರ್ತುಲ ರಸ್ತೆಯಲ್ಲಿರುವ ಸೋಲ್‌ ಸ್ಪೇಸ್‌ ಅರೆನಾ ಮಾಲ್‌ನಲ್ಲಿರುವ ಬ್ರ್ಯೂ ಆ್ಯಂಡ್‌ ಬಾರ್ಬೆಕ್ಯೂನಲ್ಲಿ ಬ್ಯಾಂಡ್‌ ಸಂಗೀತ, ಕಾಕ್‌ಟೇಲ್‌ ಮತ್ತು ಊಟದೊಂದಿಗೆ ಪ್ರೇಮಿಗಳ ದಿನವನ್ನು ಆಚರಿಸಬಹುದು.

ನಗರದ ಗ್ರೂವ್‌ ಜೆಹೆನ್‌ ಬ್ಯಾಂಡ್‌ ನ ಸದಸ್ಯರಾದ ತನುಶ್ರೀ (ಹಾಡುಗಾರಿಕೆ), ಆಶ್ಲೆ (ಬಾಸ್‌) ಡೇವಿಡ್‌ (ಡ್ರಮ್ಸ್‌), ಮಾರ್ಕ್‌ (ಗಿಟಾರ್‌), ರೋಹಿತ್‌ (ಕೀಬೋರ್ಡ್‌) ಪವನ್‌ (ವಯೊಲಿನ್‌) ಹಿಂದಿ ಮತ್ತು ಇಂಗ್ಲಿಷ್‌ನ ಹಿಟ್‌ ಹಾಡುಗಳನ್ನು ಪ್ರಸ್ತುತಪಡಿಸಲಿದ್ದಾರೆ. 

ರಾತ್ರಿ 8ರ ನಂತರ ಕಾರ್ಯಕ್ರಮ ಶುರು. ಇನ್ನಷ್ಟು ಮಾಹಿತಿಗೆ www.thebandb.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !