ಭಾನುವಾರ, ಮೇ 22, 2022
25 °C

ಪಿಯುಸಿ ಗಣಿತ ಪರೀಕ್ಷೆ ದಿಕ್ಸೂಚಿ: ಮಾತೃಕೆಗಳು

ಪ್ರಜಾವಾಣಿ ವಿಶೇಷ Updated:

ಅಕ್ಷರ ಗಾತ್ರ : | |

ಪಿಯುಸಿ ಗಣಿತ ಪರೀಕ್ಷೆ ದಿಕ್ಸೂಚಿ: ಮಾತೃಕೆಗಳು
_

* ಮಾತೃಕೆಯ ಸಂಕೇತ ಪದ್ಧತಿ ಮತ್ತು ಪ್ರಕ್ರಿಯೆಗಳು, ಗಣಕಯಂತ್ರದಲ್ಲಿ ವಿದ್ಯುನ್ಮಾನದ ಸ್ಪ್ರೆಡ್‌ ಶೀಟ್ (spread sheet) ಕಾರ್ಯಕ್ರಮಗಳಿಗೆ ಉಪಯೋಗವಾಗುವುದು, ಮತ್ತು ವಾಣಿಜ್ಯದ ಹಾಗೂ ವಿಜ್ಞಾನದ ವಿವಿಧ ಭಾಗಗಳಾದ ಅಂದರೆ ಅಂದಾಜು ಪಟ್ಟಿ (budget) ತಯಾರಿಸಲು, ವ್ಯಾಪಾರದ ಪ್ರಕ್ಷೇಪಣಿಗೆ (projection) ಬೆಲೆಯ ಅಂದಾಜು ಮಾಡಲು, ಪ್ರಯೋಗಗಳ ಫಲಿತಾಂಶವನ್ನು ವಿಶ್ಲೇಷಿಸಲು, ಹೀಗೆ ಹಲವು ಕಡೆಗಳಲ್ಲ್ಲಿ ಉಪಯೋಗಿಸುತ್ತಾರೆ.

* ಮಾತೃಕೆಗಳನ್ನು ಬಹಳಷ್ಟು ಭೌತಿಕ ಪ್ರಕ್ರಿಯೆಗಳಾದ ಸಮತಲದ ಮುಖಾಂತರ ನಡೆಯುವ ವರ್ಧನೆ (Magnification) ಸುತ್ತುವಿಕೆ (rotation) ಮತ್ತು ಪ್ರತಿಫಲನ (reflexion)ಗಳನ್ನು ಗಣಿತರೂಪದಲ್ಲಿ ಪ್ರತಿನಿಧಿಸಲು ಉಪಯೋಗಿಸುತ್ತಾರೆ. ಅದಲ್ಲದೇ ಗೂಢಲಿಪಿ ಅಧ್ಯಯನ (cryptography)ದಲ್ಲೂ ಮಾತೃಕೆಯನ್ನು ಉಪಯೋಗಿಸುತ್ತೇವೆ. ಈ ಗಣಿತದ ಸಾಧನವನ್ನು ಕೇವಲ ಕೆಲವು ವಿಜ್ಞಾನ ವಿಭಾಗಗಳಲ್ಲಿ ಅಲ್ಲದೇ ತಳಿಶಾಸ್ತ್ರ (ಅನುವಂಶ ಶಾಸ್ತ್ರ), ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಆಧುನಿಕ ಮನಃಶಾಸ್ತ್ರ ಮತ್ತು ಔದ್ಯೋಗಿಕ ನಿರ್ವಹಣೆಗಳಲ್ಲಿಯೂ ಕೂಡಾ ಉಪಯೋಗಿಸಲಾಗುತ್ತದೆ.

* ಒಂದು ವರ್ಗ ಮಾತೃಕೆಯಲ್ಲಿ ಕರ್ಣದಲ್ಲಿನ ಅಂಶಗಳೆಲ್ಲವು 1 ಇದ್ದು, ಉಳಿದೆಲ್ಲ ಅಂಶಗಳು ಸೊನ್ನೆಯಾಗಿದ್ದಲ್ಲಿ ಆ ಮಾತೃಕೆಯನ್ನು ಅನನ್ಯತಾ ಮಾತೃಕೆ ಎನ್ನುವರು.

* ಯಾವುದೇ ಮಾತೃಕೆಯಲ್ಲಿ, ಅದರ ಎಲ್ಲ ಅಂಶಗಳು ಸೊನ್ನೆಯಾಗಿದ್ದರೆ ಅದನ್ನು ಶೂನ್ಯ ಮಾತೃಕೆ (zero or null matrix) ಎನ್ನುವರು. ಮಾತೃಕೆಯನ್ನು ನಾವು '0' ದಿಂದ ಸೂಚಿಸುತ್ತೇವೆ. ಅದರ ದರ್ಜೆಯು ಸಂದರ್ಭಕ್ಕೆ ಅನುಗುಣವಾಗಿರುತ್ತದೆ.

***

ಪಿಯುಸಿ ಗಣಿತ ಪರೀಕ್ಷೆ ದಿಕ್ಸೂಚಿ: Determinants

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು