ಗುತ್ತಿಗೆ ಪೌರಕಾರ್ಮಿಕರಿಗೂ ಹೆಲ್ತ್‌ಕಾರ್ಡ್: ಜಿ.ಪರಮೇಶ್ವರ ಭರವಸೆ

7

ಗುತ್ತಿಗೆ ಪೌರಕಾರ್ಮಿಕರಿಗೂ ಹೆಲ್ತ್‌ಕಾರ್ಡ್: ಜಿ.ಪರಮೇಶ್ವರ ಭರವಸೆ

Published:
Updated:

ಬೆಂಗಳೂರು:‘ಕಾಯಂ ನೌಕರರಿಗೆ ನೀಡಿರುವಂತೆ ಗುತ್ತಿಗೆ ಪೌರ ಕಾರ್ಮಿಕರಿಗೂ ಸರ್ಕಾರದಿಂದ ಹೆಲ್ತ್‌ಕಾರ್ಡ್‌ ಹಾಗೂ ಇತರೆ ಸೌಲಭ್ಯ ಒದಗಿಸಿಕೊಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಭರವಸೆ ನೀಡಿದರು. 

ಗುತ್ತಿಗೆ ಪೌರ ಕಾರ್ಮಿಕ ಸಂಘಟನೆಯೊಂದಿಗೆ ಶುಕ್ರವಾರ ಸಭೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಅವರು ಮಾತನಾಡಿದರು.

‘ಸರ್ಕಾರಿ ರಜೆ, ಗರ್ಭಿಣಿಯರಿಗೆ ವೇತನ ಸಹಿತ ರಜೆ, 250 ಕಾರ್ಮಿಕರನ್ನು ಕಾಯಂಗೊಳಿಸುವುದು ಸೇರಿದಂತೆ ಹಲವು ಸಮಸ್ಯೆಗಳನ್ನು ಗುತ್ತಿಗೆ ಪೌರಕಾರ್ಮಿಕರು ಹೇಳಿಕೊಂಡಿದ್ದಾರೆ. ಅವುಗಳನ್ನು  ಪರಿಶೀಲಿಸುವೆ’ ಎಂದರು. 

ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಹೆಲ್ತ್‌ಕಾರ್ಡ್‌ ವಿತರಣೆಗಾಗಿ ಅಧಿಕಾರಿಗಳಿಗೆ ಸೂಚಿಸಿದರು.

‘ಪೌರಕಾರ್ಮಿಕರ ಹೆಸರಲ್ಲಿ‌ ಸಾಕಷ್ಟು ಸಂಘ–ಸಂಸ್ಥೆಗಳು ತಲೆ ಎತ್ತಿವೆ. ಹೀಗಾಗಿ, ನೋಂದಣಿಯಾಗಿರುವ ಸಂಘಗಳನ್ನಷ್ಟೇ ಗುರುತಿಸಿ, ಪೌರಕಾರ್ಮಿಕರ ಪ್ರತಿ ನಿರ್ಧಾರಕ್ಕೂ ಗುರುತಿಸಿದ ಒಂದೆರಡು ಸಂಘಟನೆಗಳ ಅಭಿಪ್ರಾಯ ಸಂಗ್ರಹಿಸುವುದು ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !