ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಸೋಂಕಿನ ಹೊಸ ಮೂರು ಲಕ್ಷಣಗಳು ಪತ್ತೆ: ಯಾವುದವು? 

ಅಕ್ಷರ ಗಾತ್ರ

ನ್ಯೂಯಾರ್ಕ್‌: ಚೀನಾದ ವುಹಾನ್‌ನಲ್ಲಿ ಪತ್ತೆಯಾದ ಕೊರೊನಾ ವೈರಸ್‌ ಸೋಂಕಿನ ಗುಣಲಕ್ಷಣಗಳು ಏರುತ್ತಾ ಸಾಗಿವೆ. ಇದಕ್ಕೆ ಹೊಸದಾಗಿ ಮೂರು ರೋಗ ಲಕ್ಷಣಗಳು ಸೇರ್ಪಡೆಯಾಗಿವೆ.

ಆರಂಭದಲ್ಲಿ ಕೇವಲ ಮೂರು ಲಕ್ಷಣಗಳನ್ನೇ ಗುರುತಿಸಲಾಗಿತ್ತು. ಆದರೆ, ಅದರ ಸಂಖ್ಯೆ 9ಕ್ಕೆ ಏರಿತ್ತು. ಈ ಮೊದಲು, ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರವು (ಸಿಡಿಸಿ) ಕೊರೊನಾ ಸೋಂಕಿನ ಆರು ಹೊಸ ರೋಗ ಲಕ್ಷಣಗಳ ಪಟ್ಟಿ ಬಿಡುಗಡೆ ಮಾಡಿತ್ತು. ಆ ಪಟ್ಟಿಗೆ ಮತ್ತೆ ಮೂರು ಲಕ್ಷಣಗಳನ್ನು ಅದು ಹೊಸದಾಗಿ ಸೇರಿಸಿದೆ.

ವಾಕರಿಕೆ ಅಥವಾ ವಾಂತಿಯಾಗುವುದು, ಅತಿಸಾರ ಭೇದಿ, ನಿರಂತರವಾಗಿ ಸೋರುವ ಮೂಗು ಈ ಮೂರು ಲಕ್ಷಣಗಳನ್ನು ಸಿಡಿಸಿ ಹೊಸದಾಗಿ ಸೇರ್ಪಡೆ ಮಾಡಿದೆ.

ಸಿಡಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕೊರೊನಾ ವೈರಸ್‌ನ ಒಟ್ಟು 11 ರೋಗ ಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ. "ಕೋವಿಡ್‌–19 ಬಗ್ಗೆ ಅಧ್ಯಯನಗಳು ಸಾಗಿವೆ. ಹೀಗಾಗಿ ಸಿಡಿಸಿ ಈ ಪಟ್ಟಿಯು ಪರಿಷ್ಕರಣೆಗೊಳ್ಳುತ್ತಾ ಮುಂದುವರಿಯಲಿದೆ,’ ಎಂದು ಅದು ತಿಳಿಸಿದೆ.
ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಶೀತ, ಮೈ ನಡುಗುವಿಕೆ, ಸ್ನಾಯು ಸೆಳೆತ, ತಲೆ ನೋವು, ಗಂಟಲು ನೋವು ಮತ್ತು ಹಠಾತ್ತನೆ ರುಚಿ ಅಥವಾ ವಾಸನೆ ಕಂಡುಹಿಡಿಯುವ ಸಾಮರ್ಥ್ಯ ಕಳೆದುಕೊಳ್ಳುವುದು ಕೋವಿಡ್‌ನ ಈ ವರೆಗಿನ ಲಕ್ಷಣಗಳಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT