ದೊಡ್ಡ ಪರದೆ ಮೇಲೆ ಕಾಣಿಸಿಕೊಳ್ಳುವ ಪ್ರತಿಯೊಬ್ಬ ನಟ–ನಟಿಯರ ಹಿಂದೆ ಒಂದು ಶ್ರಮ ಇದ್ದೆ ಇರುತ್ತದೆ. ಅದುವೆ ವರ್ಕೌಟ್. ಕ್ಯಾಮೆರಾ ಮುಂದೆ ಚಂದವಾಗಿ ಕಾಣಬೇಕೆಂದರೇ ಅದಕ್ಕೆ ಮುಖ್ಯುವಾಗಿ ಜೀವನ ಶೈಲಿ, ಫಿಟ್ ಆಗಿರುವುದು ತುಂಬಾನೆ ಮುಖ್ಯವಾಗಿರುತ್ತದೆ.
ಆಶಿಕಾ ರಂಗನಾಥ್
ಚಿತ್ರ: ಇನ್‌ಸ್ಟಾಗ್ರಾಂ
2
ಅದರಲ್ಲೂ ನಟಿಯರ ಫಿಟ್ನೆಸ್ ಗುಟ್ಟಿನ ಬಗ್ಗೆ ತಿಳಿಯಲು ಅಭಿಮಾನಿಗಳು ಕಾತರದಿಂದ ಕಾಯುತ್ತಾ ಇರುತ್ತಾರೆ. ಅದರಂತೆ ನಟಿ ಆಶಿಕಾ ರಂಗನಾಥ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫಿಟ್ನೆಸ್ ಬಗ್ಗೆ ಮಾಹಿತಿ ನೀಡುತ್ತಾ, ಅಭಿಮಾನಿಗಳಿಗೆ ಕೆಲವೊಂದು ಸಲಹೆಗಳನ್ನು ಕೊಡುತ್ತಿರುತ್ತಾರೆ.
ಆಶಿಕಾ ರಂಗನಾಥ್
ಚಿತ್ರ: ಇನ್‌ಸ್ಟಾಗ್ರಾಂ
3
ಆಶಿಕಾ ರಂಗನಾಥ್ ಅಂದಾಕ್ಷಣ ಮೊದಲು ನೆನಪಿಗೆ ಬರುವುದೇ ಅವರ ಮುದ್ದಾದ ನಗು. ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಅವರೆಷ್ಟು ಫಿಟ್ನೆಸ್ ಪ್ರಿಯೆ ಎಂದು ಗೊತ್ತಾಗುತ್ತದೆ. ಅಲ್ಲದೇ ಬಹಳ ಮುಖ್ಯವಾಗಿ ಆಶಿಕಾ ಅವರು ತಮ್ಮ ವರ್ಕೌಟ್ ಮೇಲಿನ ಒಲವು ಎದ್ದು ಕಾಣುತ್ತದೆ.
ಆಶಿಕಾ ರಂಗನಾಥ್
ಚಿತ್ರ: ಇನ್‌ಸ್ಟಾಗ್ರಾಂ
4
ನಟಿ ತಮ್ಮ ದೇಹವನ್ನು ದಂಡಿಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಜಿಮ್‌ನಲ್ಲಿ ನಟಿ ಜಬರ್ದಸ್ತ್ ಆಗಿ ವರ್ಕೌಟ್ ಮಾಡುತ್ತಿರುವ ವಿಡಿಯೊಗಳು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸುತ್ತವೆ. ಭಾರವಾದ ತೂಕವನ್ನು ಎತ್ತುತ್ತಾ, ಹಗ್ಗದಲ್ಲಿ ದೇಹವನ್ನು ಹಿಡಿದಿಟ್ಟುಕೊಳ್ಳುವುದು. ಇದು ನಟಿ ಫಿಟ್ನೆಸ್‌ಗೆ ಎಷ್ಟು ಆದ್ಯತೆ ನೀಡುತ್ತಾರೆ ಎಂಬುವುದು ಸಾಬೀತಾಗುತ್ತದೆ.
ಆಶಿಕಾ ರಂಗನಾಥ್
ಚಿತ್ರ: ಇನ್‌ಸ್ಟಾಗ್ರಾಂ
5
ನಟಿ ಪ್ರತಿದಿನ ಜಿಮ್‌ನಲ್ಲಿ ಗಂಟೆಗಟ್ಟಲೆ ಸಮಯ ಕಳೆಯುತ್ತಾರೆ. ಕೇವಲ ತೂಕ ಇಳಿಸಿಕೊಳ್ಳುವುದಲ್ಲದೇ ವೇಟ್ ಲಿಫ್ಟಿಂಗ್, ವ್ಯಾಯಾಮ ಮಾಡಿ ತಮ್ಮ ದೇಹವನ್ನು ಸದೃಢವಾಗಿ ಇಟ್ಟುಕೊಳ್ಳುವುದು ಅವರ ಮುಖ್ಯ ಉದ್ದೇಶವಾಗಿದೆ.
ಆಶಿಕಾ ರಂಗನಾಥ್
ಚಿತ್ರ: ಇನ್‌ಸ್ಟಾಗ್ರಾಂ
6
ಅಷ್ಟೇ ಅಲ್ಲದೆ ಕಾರ್ಡಿಯೋ ವ್ಯಾಯಾಮ, ಡ್ಯಾನ್ಸ್, ರನ್ನಿಂಗ್ ಮಾಡುವ ಮೂಲಕ ತಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದು ಯುವ ಪೀಳಿಗೆಗೆ ಪ್ರೇರಣೆಯಾಗಿದೆ ಎಂದರೆ ತಪ್ಪಾಗುವುದಿಲ್ಲ.