ಗುರುವಾರ , ಅಕ್ಟೋಬರ್ 6, 2022
23 °C

ಎಂದೂ ಕೂಡ ಧೂಮಪಾನ ಮಾಡದವರಿಗೂ ಬರಬಹುದು ಶ್ವಾಸಕೋಶ ಕ್ಯಾನ್ಸರ್!

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ವಾಸಕೋಶದ ಕ್ಯಾನ್ಸರ್ ಕೇವಲ ಸಿಗರೇಟ್‌ನಂತಹ ಧೂಮಪಾನ ಸೇವನೆಯಿಂದ ಹೆಚ್ಚು ಬರುತ್ತದೆ ಎಂಬ ತಿಳಿವಳಿಕೆ ಜನಸಾಮಾನ್ಯರಲ್ಲಿ ಸಾಮಾನ್ಯವಾಗಿದೆ. ಆದರೆ, ಇದೀಗ ಬಂದಿರುವ ವರದಿ ಪ್ರಕಾರ ಸಿಗರೇಟ್ ಸೇವನೆ ಮಾಡದಿರುವವರೂ ಕೂಡ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ವಿಚಾರ ಮಾಡಬೇಕಾಗಿದೆ.

ಹೌದು, ‘ವಾತಾವರಣದ ಮಾಲಿನ್ಯಕಾರಕ ದೂಳಿನ ಕಣಗಳು ಎಂದೂ ಕೂಡ ಧೂಮಪಾನ ಮಾಡದವರಲ್ಲಿಯೂ ಶ್ವಾಸಕೋಶ ಕ್ಯಾನ್ಸರ್‌ಗೆ ಕಾರಣವಾಗುತ್ತವೆ’ ಎಂದು ಲಂಡನ್‌ನ ವಿಜ್ಞಾನಿಗಳು ತಮ್ಮ ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ಬ್ರಿಟನ್‌ನ ಕ್ಯಾನ್ಸರ್‌ ರಿಸರ್ಚ್‌ ವತಿಯಿಂದ ಸ್ಥಾಪಿಸಲಾಗಿರುವ ‘ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ಹಾಗೂ ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್‌’ ಈ ಆಘಾತಕಾರಿ ವರದಿಯನ್ನು ಬಯಲು ಮಾಡಿದೆ.  

ಮನುಷ್ಯನ ಶ್ವಾಸಕೋಶದಲ್ಲಿನ ಕ್ಯಾನ್ಸರ್‌ಗೆ ವಾಯುಮಾಲಿನ್ಯ ಹೇಗೆ ಕಾರಣವಾಗುತ್ತದೆಯೋ ಹಾಗೇ ಕ್ಯಾನ್ಸರ್ ಕಾರಕ ವಾಯುಮಾಲಿನ್ಯಕ್ಕೆ ಜಾಗತಿಕ ತಾಪಮಾನ ಕೂಡ ಕಾರಣವಾಗುತ್ತಿದೆ.

ಪ್ರಮುಖವಾಗಿ ವಾಹನಗಳು ಉಗುಳುವ ಹೊಗೆ ಹಾಗೂ ಪಳಿಯುಳಿಕೆ ಇಂಧನಗಳನ್ನು ದಹಿಸುವುದರಿಂದ ಬಿಡುಗಡೆಯಾಗುವ ಮಾಲಿನ್ಯಕಾರಕ ಕಣಗಳು ಎಂದೂ ಸ್ಮೋಕ್ ಮಾಡದವರಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಅನ್ನು ತರಿಸುತ್ತಿವೆ. ಜಗತ್ತಿನಲ್ಲಿ ಪ್ರತಿ ವರ್ಷ 2,50,000 ಜನ ಶ್ವಾಸಕೋಶ ಕ್ಯಾನ್ಸರ್‌ನಿಂದ ಸಾಯುತ್ತಿದ್ದಾರೆ.

‘ಈ ರೀತಿ ವಾತಾವರಣದ ಮಾಲಿನ್ಯಕಾರಕ ಕಣಗಳಿಂದ ಉಂಟಾಗುವ ಕ್ಯಾನ್ಸರ್‌, ಧೂಮಪಾನ ಮಾಡುವಷ್ಟು ಪ್ರಬಲವಾಗಿರುವುದರಿಲ್ಲ’ ಎಂದು ‘ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್ ಹಾಗೂ ಯುನಿವರ್ಸಿಟಿ ಕಾಲೇಜ್ ಆಫ್ ಲಂಡನ್‌’ ವಿಜ್ಞಾನಿ ಚಾರ್ಲ್ಸ್‌ ಸ್ವಾಂತೋನ್ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು